ನಾಳೆಯಿಂದ ರಾಮಾಯಣ ಕುರಿತ ಪ್ರವಚನ
ಸಾಗರ: ರಾಮಾಯಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ರಾಮಾಯಣದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಮಾ.18ರಿಂದ ಮಾ.23ರ ವರೆಗೆ ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಸಂಜೆ 6-30ರಿಂದ ರಾತ್ರಿ 8ರ ವರೆಗೆ ಡಾ. ಪಾವಗಡ ಪ್ರಕಾಶ್ ಅವರಿಂದ ಶ್ರೀ ರಾಮಾಯಣದ ಕುರಿತು ಪ್ರವಚನ ಏರ್ಪಡಿಸಲಾಗಿದೆ ಎಂದು ಅಶ್ವಿನಿಕುಮಾರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಾಗರದಲ್ಲಿ ಪ್ರತಿವರ್ಷ ರಾಮಾಯಣದ ಮೇಲೆ ನಿರಂತರ ಪ್ರವಚನ ನೀಡಲು ಪ್ರಕಾಶರಾವ್ ಒಪ್ಪಿದ್ದಾರೆ. ಕಳೆದ 5 ದಶಕಗಳಿಂದ ರವೀಂದ್ರ ಪುಸ್ತಕಾಲಯದ ಮೂಲಕ ಸಾಗರದಾದ್ಯಂತ ಜನರಲ್ಲಿ ಪುಸ್ತಕಪ್ರೀತಿಯನ್ನು ಬೆಳೆಸುತ್ತಿರುವ ವೈ.ಎ. ದಂತಿ ಕಾರ್ಯಕ್ರಮದ ಪ್ರಮುಖ ಆಯೋಜಕರಾಗಿದ್ದಾರೆ. ಪ್ರವಚನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ನಿವೃತ್ತ ಪ್ರಾಚಾರ್ಯ ಆರ್.ಎಂ. ಬಾಪಟ್, 23ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಲೆನಾಡು ಗಮಕ ಕಲಾಸಂಘದ ಕಾರ್ಯಾಧ್ಯಕ್ಷ ಪ್ರೊ. ಕೆ.ಆರ್. ಕೃಷ್ಣರಾವ್ ರಚಿತ ಮೀನುಂಬಳ ಕೃತಿ ಬಿಡುಗಡೆ ಇರುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

