ನಾಟಕ ಒಬ್ಬನ ಕ್ರಿಯೆಯಲ್ಲ: ನಿರ್ದೇಶಕ ನಾಗಾಭರಣ
ಶಿವಮೊಗ್ಗ: ನಾಟಕ ಒಬ್ಬನ ಕ್ರಿಯೆಯಲ್ಲ. ಇಲ್ಲಿ ಹಲವಾರು ವ್ಯಕ್ತಿಗಳ ಶ್ರಮವಿರುತ್ತದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಭರಣ ಹೇಳಿದರು.
ಕಲಾರೋಹಣ ತಂಡ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಆರು ನಾಟಕಗಳ -ಹಾಸ್ಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಟಕ ಮಾಡುವುದು ಕಷ್ಟದ ಕೆಲಸವಾಗಿದೆ. ಅದರಲ್ಲೂ ಹಾಸ್ಯ ನಾಟಕಗಳನ್ನು ರಚನೆ ಮಾಡುವುದು ಮತ್ತಷ್ಟು ಕಷ್ಟದ ಕೆಲಸ ಎಂದರು.
ಇಂದು ನಗುವುದಕ್ಕೂ ಅಂಜಿಕೆ ಪಡುತ್ತಾರೆ. ನಗರ ಪ್ರದೇಶಗಳಲ್ಲಿ ಹಾಸ್ಯ ಎಂಬುದೆ ಕಣ್ಮರೆಯಾಗಿದೆ. ಸದಾ ಕೆಲಸದ ಒತ್ತಡದಲ್ಲಿರುವ ಜನರಿಗೆ ನಗಿಸುವ ಅವಶ್ಯವಿದೆ ಎಂದ ಅವರು, ಜನರನ್ನು ನಗಿಸಲೆಂದು ಹಾಸ್ಯ ವಾಹಿನಿಗಳು ಹುಟ್ಟಿಕೊಂಡಿವೆ. ಇವು ಸದಾ ಒಂದಿಲ್ಲೊಂದು ಹಾಸ್ಯದ ಝಲಕುಗಳನ್ನು ಹಾಕಿ ಜನರನ್ನು ನಗಿಸುವ ಪ್ರಯತ್ನ ಮಾಡುತ್ತಿವೆ. ಆದರೂ ಜನ ನಗಲು ಸಂಕೋಚ ಪಡುತ್ತಿದ್ದಾರೆ ಎಂದರು.
ಹೊಸ ಪ್ರತಿಭೆಗಳ ಅನಾವರಣಕ್ಕೆ, ರಂಗಾಸಕ್ತಿಯ ಅವಕಾಶಕ್ಕೆ ಈ ನಾಟಕೋತ್ಸವ ಒಂದು ಹೊಸ ಹಾದಿ ತೆರೆಯಲಿದೆ ಎಂದ ಅವರು, ಇಂದು ರಂಗಭೂಮಿಯಲ್ಲಿ ಸಾಕಷ್ಟು ತೊಂದರೆಗಳಿವೆ. ಬೇರೆ ಕ್ಷೇತ್ರಗಳು ಇತರೆ ಕ್ಷೇತ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಆದರೆ, ರಂಗಭೂಮಿ ಯಾವ ಕ್ಷೇತ್ರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದರು. ಗಜಾನನ ಶರ್ಮ ಅವರು ರಚನೆ ಮಾಡಿರುವ ನಾಟಕ ಪ್ರದರ್ಶನಗೊಂಡಿತು. ಇದೇ ವೇಳೆ ನಾಟಕಕಾರ ಮ್ಯಾಥ್ಯೂನ್ ಸುರಾನಿ ಅವರನ್ನು ಸನ್ಮಾನಿಸಲಾಯಿತು. ಉಪಮುಖ್ಯಮಂತ್ರಿ ಈಶ್ವರಪ್ಪ, ಹಿರಿಯ ರಂಗಕಲಾವಿದೆ ವಿಜಯಲಕ್ಷ್ಮಿ, ನಾಟಕ ನಿರ್ದೇಶಕ ರೇಣುಕಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

