ಶಿವಮೊಗ್ಗ

ದೊಡ್ಡ ರಥೋತ್ಸವ

Published On :

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದೊಡ್ಡರಥೋತ್ಸವವನ್ನು ಮಾರ್ಚ್ 21ರಿಂದ 23ರವರೆಗೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಮಳೆಹಿರೇಮಠಾಧ್ಯಕ್ಷ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮತ್ತು ಪಂಚವಣ್ಣಿಗೆ ಮಠಾಧ್ಯಕ್ಷ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರಥೋತ್ಸವ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯದ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಸಭೆಗೆ ಆಹ್ವಾನ
ಶಿವಮೊಗ್ಗ: ಶ್ರೀ ಕಂಚಿಕಾಮಾಕ್ಷಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಮಾ.23ರಂದು ಬೆ.10 ಗಂಟೆಗೆ ವರ್ಷದ ವಾರ್ಷಿಕ ಸಭೆ ಹಮ್ಮಿಕೊಂಡಿದೆ. ಸಭೆಗೆ ಸೊಸೈಟಿಯ ಸದಸ್ಯರು ಭಾಗವಹಿಸುವಂತೆ ಕಾರ್ಯದರ್ಶಿ ವಿನಯ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿ ಹಣ ಪಡೆಯಲು ಮನವಿ
ಭದ್ರಾವತಿ: ಸದರನ್ ಉದ್ಯಾನ್ ಮತ್ತು ಸದರನ್ ವಂಡರ್‌ವರ್ಲ್ಡ್ ಸಂಸ್ಥೆ ಹೂಡಿಕೆದಾರರ ಕ್ಲೇಮು ಮೊತ್ತವು ನ್ಯಾಯಾಲಯದ ಸಂಕೀರ್ಣದ ಕಾನೂನು ಸೇವಾ ಸಮಿತಿ ಕಚೇರಿಗೆ ಬಂದಿದೆ.ಈ ಸಂಸ್ಥೆಗಳಲ್ಲಿ ಹಣ ಹೂಡಿರುವ ಸದಸ್ಯರು ಹೆಚ್ಚಿನ ಮಾಹಿತಿಗಾಗಿ ತಮ್ಮ ಗುರುತುಪತ್ರ, ವಿಳಾಸ, ದಾಖಲೆಗಳ ಸಮೇತ ಹಾಜರಾಗಿ ಅರ್ಜಿ ಸಲ್ಲಿಸಿ ಹಣ ಪಡೆಯುವಂತೆ ಸಮಿತಿ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.