ಶಿವಮೊಗ್ಗ

ಸೇಫ್‌ಜೋನ್ ಸ್ಥಾಪನೆ ಹುನ್ನಾರ: ಆರೋಪ

Published On :

ಕ.ಪ್ರ. ವಾರ್ತೆ, ಹೊಸನಗರ, ಮಾ.21
ಸಾರ್ವಜನಿಕ ವಿರೋಧವನ್ನು ಕಡೆಗಣಿಸಿ ತಾಲೂಕಿನ ಮಸಗಲ್ಲಿಯಲ್ಲಿ ಸೇಫ್‌ಜೋನ್ ಸ್ಥಾಪಿಸಲು ಮುಂದಾಗಿರುವ ಜಿಲ್ಲಾಡಳಿತ ಬಂಡವಾಳ ಶಾಹಿಗಳ ಹಿಡಿತದಲ್ಲಿದೆ ಎಂದು ಇಂಡಿಯನ್ ಡೆಮಾಕ್ರಟಿಕ್ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಲ್. ಭೋಜರಾಜ್ ಆರೋಪಿಸಿದರು.
ಸುದ್ದಿಮನೆಯ ಪತ್ರಿಕಾಗೋಷ್ಠಿಯಲ್ಲಿ, ಸುಪ್ರೀಂಕೋರ್ಟ್ ಸುರಕ್ಷಿತ ವಲಯ ಸ್ಥಾಪನೆಗೆ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ಮಸಗಲ್ಲಿಯಲ್ಲೆ ಸುರಕ್ಷಿತ ವಲಯ ಸ್ಥಾಪನೆ ಮಾಡಲು ಹೊರಟಿರುವ ಹಿಂದೆ ಕೆಲವು ಹಿತಾಸಕ್ತಿಗಳ ಸ್ವಾರ್ಥ ಅಡಗಿದೆ ಎಂದು ಟೀಕಿಸಿದರು.
ಯಾವುದೇ ಕಾರಣಕ್ಕೂ ಮಸಗಲ್ಲಿಯಲ್ಲಿ ಸುರಕ್ಷಿತ ವಲಯ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಯಾವುದೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದರು.
ಅಶೀಸರ ರಾಜಿನಾಮೆ ನೀಡಲಿ: ಸುರಕ್ಷಿತ ವಲಯ ಸ್ಥಾಪಿಸುವ ಸಂಬಂಧ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತಹೆಗಡೆ ಅಶೀಸರ ನಮಗೇನು ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿದ್ದು ಕೂಡಲೇ ಅವರ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿದರು. ಅಲ್ಲದೆ ಸೇಫರ್ ಜೋನ್ ಹೆಸರಿನಲ್ಲಿ ಇಷ್ಟೊಂದು ವಿರೋಧ ಕೇಳಿ ಬರುತ್ತಿದ್ದರೂ ತಾಲೂಕಿನ ಪರಿಸರವಾದಿಗಳು ಎಲ್ಲಿ ಕಣ್ಮರೆಯಾಗಿದ್ದಾರೆ ಎಂದು ಪರಿಸರ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಐಡಿಪಿ ರಾಜ್ಯ ಕಾರ್ಯದರ್ಶಿ ಮೇಘರಾಜ್, ದ್ಯಾವಪ್ಪಗೌಡ, ಗಂಗಮ್ಮ, ಲೀಲಾವತಿ, ಜಯಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.