ಶಿವಮೊಗ್ಗ

ತರೀಕೆರೆ ತಾಲೂಕಲ್ಲಿ ನೀರಿಗೆ ತತ್ವಾರ

Published On :

ಕ.ಪ್ರ ವಾರ್ತೆತರೀಕೆರೆಮಾ. 23
ಒಂದು ಕಡೆ ನೆತ್ತಿ ಸುಟ್ಟುಹೋಗುವಷ್ಟು ಬಿಸಿಲಿನ ಪ್ರಖರತೆ, ಮತ್ತೊಂದೆಡೆ ಮೈಲಿಗಟ್ಟಲೆ ಹೋದರೂ ಯಾವ ಕೆರೆಯಲ್ಲೂ ಒಂದು ಹನಿ ನೀರಿಲ್ಲ, ಕಣ್ಣು ಹಾಯಿಸಿದ ಕಡೆಯಲೆಲ್ಲಾ ಬಿರುಕು ಬಿಟ್ಟ ಕೆರೆ, ಪಾಳು ಬಿದ್ದಿರುವ ಬಾವಿಗಳು, ಅಂತರ್ಜಲ ಸಿಗದೆ ಖಾಲಿ ಬೋರ್‌ವೆಲ್‌ಗಳು....
ಇದು ಸದ್ಯ ತಾಲೂಕಿನ ಹೆಚ್ಚಿನ ಕಡೆ ಇರುವ ಪರಿಸ್ಥಿತಿ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ ಕುಡಿಯುವ ನೀರಿಗಾಗಿ ಅರಣ್ಯ ರೋಧನವಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಕುಡ್ಲೂರು, ಕೊರಟೀಕೆರೆ, ಕೋರನಹಳ್ಳಿ, ಮುಂಡ್ರೆ, ಚಿಕ್ಕಾನವಂಗಲ, ದೋರನಾಳು, ಐನಳ್ಳಿ, ಬೇಲೇನಹಳ್ಳಿ, ಬೆಟ್ಟದಹಳ್ಳಿ, ಪುಂಡನಹಳ್ಳಿ, ಕೆ. ಹೊಸೂರು, ಹುಣಸಘಟ್ಟ, ಬಸವಾಪುರ, ಶಿವನಿ ಆರ್.ಎಸ್, ನಾಗವಂಗಲ, ವೀರಾಪುರ, ಶ್ಯಾನುಭೋಗನಹಳ್ಳಿ, ಗೊಲ್ಲರಹಳ್ಳಿ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಸಂಕಟದ ಸ್ಥಿತಿ ಎದುರಾಗಿದೆ.
ಗೌಳಿಗೆರೆ ಕ್ಯಾಂಪ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕ್ಯಾಂಪ್‌ನಲ್ಲಿ ಬಗುಡದ ನೀರು ಕುಡಿಯಬೇಕಾದ ಅನಿವಾರ್ಯತೆ ಇದ್ದು ಯಾವುದೇ ಯಾವುದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸಿಲ್ಲ.  ಸಮುದ್ರದ ನೆಂಟಸ್ಥನ ಉಪ್ಪಿಗೆ ಬಡತನ ಎನ್ನುವಂತೆ ತರೀಕೆರೆ ತಾಲೂಕಿನಲ್ಲಿ ಭದ್ರಾ ಅಣೆಕಟ್ಟಿದ್ದರೂ ಕುಡಿಯುವ ನೀರಿಗೆ ತೊಂದರೆಪಡಬೇಕಿದೆ.
ತಾಲೂಕಿನಲ್ಲಿ ಭೀಕರ ಬರಗಾಲ ತಲೆದೋರಿರುವುದರಿಂದ ಅಡಕೆ, ತೆಂಗು, ಬಾಳೆ ತೋಟಗಳು ಮಾವಿನ ತೋಪುಗಳು ಒಣಗಿ ನಿಂತಿವೆ. ಎಷ್ಟೋ ತೋಟಗಳಲ್ಲಿ ಹಸಿರು ವಾತಾವಣರಣವೇ ಸಂಪೂರ್ಣವಾಗಿ ಮಾಯವಾಗಿದೆ. ಮಾವಿನ ಮರಗಳಲ್ಲಿ ಈ ಸಾರಿ ಹೂ ಹೆಚ್ಚು ಬಿಟ್ಟಿಲ್ಲ, ಪರಿಣಾಮವಾಗಿ ಮಾವು ಪಸಲು ಅಷ್ಟಕಷ್ಟೆಯಾಗಿದೆ. ಜಿಲ್ಲಾಡಳಿತ ಬೋರ್‌ವೆಲ್‌ಗಳನ್ನು ಕೊರೆಸುವ ಕಾರ್ಯಕ್ರಮ ಕೈಬಿಟ್ಟು ಸಮೀಪದ ನದಿಯಿಂದ ನೀರನ್ನು ಟ್ಯಾಂಕರ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಗ್ರಾಮೀಣ ಭಾಗದ ಜನತೆಯ ಆಶಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.