ಸಾಮೂಹಿಕ ವಿವಾಹಕ್ಕೆ ಸಹಕಾರ ಮುಖ್ಯ
ಕ.ಪ್ರ.ವಾರ್ತೆಶಿರಾಳಕೊಪ್ಪ ಮಾ.23
ಬರಗಾಲ, ಕುಡಿಯಲು ನೀರಿಲ್ಲದಂತಹ ಸಂಹರ್ಭದಲ್ಲಿ ಉಚಿತ ಸಾಮುಹಿಕ ವಿವಾಹದಿಂದ ದುಂದು ವೆಚ್ಚ ಇಲ್ಲದಂತೆ ಎಲ್ಲರಿಗೂ ಅನುಕೂಲವಾಗುವಂತಹ ಸಾಮೂಹಿಕ ವಿವಾಹ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಹೇಳಿದರು.
ಶಿರಾಳಕೊಪ್ಪ ಹತ್ತಿರದ ತೊಗರ್ಸಿಯಲ್ಲಿ ಜಾತ್ರಾ ಅಂಗವಾಗಿ ನಡೆದ 28ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇದೊಂದು ಅತಿ ಉತ್ತಮ ಕಾರ್ಯ. ವೀರಶೈವ ಮಠಗಳು ನಾಡಿನಲ್ಲಿ ಉಚಿತ ವಿವಾಹ, ಅನ್ನ ದಾಸೋಹ, ಶಿಕ್ಷಣದಂತಹ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಇಂತಹ ಉತ್ತಮ ಕಾರ್ಯಗಳಿಗೆ ಭಕ್ತರ ಸಹಕಾರ ಅವಶ್ಯ. ಸಮಾಜದಲ್ಲಿ ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಸಮಸ್ಯೆ ಗಮನಕ್ಕೆ: ಜಿಪಂ ಸದಸ್ಯ ರುದ್ರಪ್ಪ ದಾನೇರ್ ಮಾತನಾಡಿ, ಮದುವೆಯಂತಹ ಕಾರ್ಯಗಳನ್ನು ಇಂದಿನ ದಿನಗಳಲ್ಲಿ ಮಾಡುವುದು ದುಸ್ತರ. ಹಾಗೆಯೇ ಇಂತಹ ಕ್ಷೇತ್ರಗಳಲ್ಲಿ ಹಲವಾರು ಮಠಾಧೀಶರ ಆಶೀರ್ವಾದ ಸಿಗುತ್ತದೆ. ಇಲ್ಲಿ ಶೌಚಾಲಯ, ಇತರ ಸಮಸ್ಯೆ ಇರುವುದು ಗಮನಕ್ಕೆ ತಂದಿದ್ದಾರೆ. ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಜೊತೆಗೂಡಿ ಇಬ್ಬರ ಅನುದಾನದಿಂದ ಈ ಕಾರ್ಯ ಮುಂದಿನ ಜಾತ್ರೆ ವೇಳೆಗೆ ಮಾಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿ ತಾಪಂ ಮಾಜಿ ಅಧ್ಯಕ್ಷ ಕೆ. ರೇವಣಪ್ಪ ಮಾತನಾಡಿ, ಲಕ್ಷಾಂತರ ಭಕ್ತರು ಆಗಮಿಸುವ ಈ ಕ್ಷೇತ್ರಕ್ಕೆ ಚುನಾಯಿತ ಪ್ರತಿನಿಧಿಗಳು ಏನು ಬೇಕು ಎಂಬುದನ್ನು ಅರಿತು ಕಾರ್ಯ ಮಾಡಬೇಕು. ಹಾಗೆಯೇ ಈ ಕ್ಷೇತ್ರದಲ್ಲಿ ನಿರಂತರ ಅನ್ನಸಂತರ್ಪಣೆ ನಡೆಸಲು ಭಕ್ತರು ಸಹಕರಿಸಿ. ಭಕ್ತರೆಲ್ಲ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಬೆಳ್ಳಿಯ ತೇರನ್ನು ಮಾಡೋಣ ಎಂದರು.
ಗೌರವ ನೀಡಿ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜಡೆ ಮಹಂತ ಸ್ವಾಮಿಗಳು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇಲ್ಲಿಯ ಮಠ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ನಡೆಸುತ್ತಿದೆ. ವಧು- ವರರು ಈ ಹಿಂದೆ ಬಸವಾದಿ ಪ್ರಮುಖರು ಹೇಳಿದ ಹಾಗೆ ಜೀವನವನ್ನು ಅರ್ಥಮಾಡಿಕೊಂಡು ಗುರು ಹಿರಿಯರಿಗೆ ಗೌರವಕೊಟ್ಟು ನಡೆದರೆ ಜೀವನ ಚೆನ್ನಾಗಿರುತ್ತದೆ ಎಂದರು.
ಕಡೇನಂದಿಹಳ್ಳಿ ಸ್ವಾಮಿಗಳು, ಡಿಎಸ್ಪಿ ಮಂಜುನಾಥ ಮಾತನಾಡಿದರು. ತೊಗರ್ಸಿ ಮಹಂತದೇಶೀ ಕೇಂದ್ರ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೊಗರ್ಸಿ ಚೆನ್ನವೀರದೇಶೀಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಸಾಮೂಹಿಕ ವಿವಾಹಕ್ಕೆ ಸಹಕರಿಸಿದ ದಾನಿಗಳು, ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಚುನಾಯಿತ ಪ್ರತಿನಿಧಿಗಳು ಇದ್ದರು. ಹಲವಾರು ಗಣ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

