ಯಕ್ಷಗಾನ ಎಲ್ಲ ಕಲೆಗೂ ಮುಕುಟಪ್ರಾಯ
ಕ.ಪ್ರ.ವಾರ್ತೆ ಟಿ ಹೊಸನಗರ ಟಿ ಮಾ.28
ವೇಷ, ಭಾಷೆಯಲ್ಲಿ ತನ್ನದೇ ಪ್ರಭುತ್ವ ಸಾಧಿಸಿರುವ ಯಕ್ಷಗಾನ ಎಲ್ಲಾ ಕಲೆಗಳ ಮುಕುಟಪ್ರಾಯವಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಹೇಳಿದರು.
ತಾಲೂಕಿನ ಮಾರುತಿಪುರ ಗುಬ್ಬಿಗ ರಮೇಶ ಹೆಗಡೆ ಮನೆ ಆವರಣದಲ್ಲಿ ರಾಮಾರ್ಪಣ ಕಲಾವೇದಿಕೆ ಹಮ್ಮಿಕೊಂಡ ಪರಂಪರೆಯ ಕಿರೀಟ ಪೂಜೆ ಮತ್ತು ಸಂಪ ನಿನಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗೌರವದ ಪ್ರತೀಕ: ಕಿರೀಟ ವೈಭವದ ಪ್ರತೀಕವಲ್ಲ. ತಾನು ಕುಣಿದು, ದಣಿದು ಕಲಾಪ್ರೀಯರಿಗೆ ರಸದೌತಣ ನೀಡುವ ಅರ್ಪಣಾಭಾವಕ್ಕೆ ಸಿಗುವ ಗೌರವದ ಪ್ರತೀಕ. ಶ್ರೀರಾಮರ್ಪಣ ಕಲಾವೇದಿಕೆ ಕಿರೀಟ ಪೂಜೆ ನಡೆಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರು.
ಯಕ್ಷಗಾನ ಕೇವಲ ನಟನೆಗೆ ಮಾತ್ರ ಸೀಮಿತವಲ್ಲ. ವಾದನಕ್ಕೂ ಅಷ್ಟೆ ಮಹತ್ವದ ಸ್ಥಾನವಿದೆ. ಚಂಡೆ ವಾದನ ವಿರದ ಯಕ್ಷಗಾನವನ್ನು ಊಹಿಸಿಕೊಲ್ಳುವುದೂ ಕಷ್ಟ ಎಂದರು. ಈ ಸಂದರ್ಭದಲ್ಲಿ ಶ್ರೀಗಳು ಕಿರೀಟ ಪೂಜೆ ನೆರವೇರಿಸಿದರು ಮತ್ತು ಸಂಪ ನಿನಾದ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಯಕ್ಷಗಾನ ಭಾಗವತ ಮಂಜುನಾಥ ಹೊಸ್ತೋಟ ಮಾತನಾಡಿ, ವ್ಯಕ್ತಿಯಲ್ಲಿ ಪ್ರತಿಭೆ ಎಷ್ಟಿದೆ ಎಂಬುದಕ್ಕಿಂತ ಆ ಪ್ರತಿಭೆಯಿಂದ ಸಮಾಜಕ್ಕೆ ಎಷ್ಟು ಉಪಯೋಗವಾಗಿದೆ ಎಂಬುದು ಮುಖ್ಯ. ಏಳುಬೀಳುವ ಹಾದಿಯಲ್ಲಿ ಮುಗ್ಗರಿಸಿದೆ ಮಾಡುವ ಸಾಧನೆ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದರು.
ಸನ್ಮಾನ: ಯಕ್ಷಕ್ಷೇತ್ರದಲ್ಲಿ ಸಾಧನೆಗಾಗಿ ಮಧುಸೂದನ ಐತಾಳ್, ಭಾಸ್ಕರ ನಿರೇರಿ, ಮಳಲಿ ಶೀನಯ್ಯ, ನಾಗರಕೊಡಿಗೆ ರಾಮಕೃಷ್ಣಮೂರ್ತಿ, ಗುಂಡೂಮನೆ ನರಸಿಂಹರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಚಂಡೆವಾದಕ ಸಂಪ ಲಕ್ಷ್ಮೀನಾರಾಯಣ, ವಿದ್ವಾನ್ ಜಗದೀಶ ಶರ್ಮಾ, ಡಾ. ಗಜಾನನ ಶರ್ಮಾ, ರಮೇಶ ಹೆಗಡೆ ಗುಂಡೂಮನೆ, ಲಕ್ಷ್ಮಣ ಪೂಜಾರಿ, ಎಂ.ಎಸ್. ವಿಶ್ವೇಶ್ವರ ಹೆಗಡೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

