ಶಿವಮೊಗ್ಗ

ಸಾಂತ್ವನದ ನೆಲೆಯಲ್ಲಿ ಮಾತ್ರ ಉತ್ತಮ ಕವಿತೆ ಸಾಧ್ಯ

Published On :

ಸೊರಬ: ಉತ್ತಮ ಕವಿತೆ ಭಾವನೆಗಳ ಮಹಾಪೂರದಲ್ಲಿ, ಉದ್ವೇಗದ ಪರಾಕಾಷ್ಠೆಯಲ್ಲಿ, ಸಾಂತ್ವನದ ನೆಲೆಯಲ್ಲಿ ಮಾತ್ರ ಹೊರಹೊಮ್ಮಲು ಸಾಧ್ಯ ಎಂದು ಇಲ್ಲಿನ ಸಪ್ರದ ಕಾಲೇಜು ಪ್ರಾಧ್ಯಾಪಕ ರವೀಂದ್ರಭಟ ಕಳಿವೀಡು ತಿಳಿಸಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಗಮಕ ಕಲೆ, ಪ್ರಸಿದ್ಧ ಕವಿಗಳ ಗೀತ ಗಾಯನ, ಕುಂಚ ಕಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈಚೆಗೆ ಕನ್ನಡ ಸಾಹಿತ್ಯದಲ್ಲಿ ಜನರ ದೌರ್ಬಲ್ಯವೇ ನಮ್ಮ ಶಕ್ತಿ ಎಂದು ಕವಿತೆ ರಚಿಸಲಾಗುತ್ತಿದೆ, ಅಂತಹ ಕವಿತೆ ಭಾವಗೀತೆಗಳಾಗದೆ ಜನಮಾನಸದಿಂದ ಬಹುಬೇಗ ದೂರವಾಗುತ್ತವೆ ಎಂದರು.
ಗೀತ ಗಾಯನದಲ್ಲಿ ಗೀತಾ ಮುರಳೀಧರ್, ಸುಮಿತ್ರಾನಾಯ್ಕ್, ಚಂದ್ರಪ್ಪ ಅತ್ತಿಕಟ್ಟೆ, ಪೂರ್ಣಿಮಾ ಭಾವೆ ಪಾಲ್ಗೊಂಡು ಸುಶ್ರಾವ್ಯ ಭಾವಗೀತೆಗಳ ಮೂಲಕ ರಂಜಿಸಿದರು.
ದತ್ತಿ ದಾನಿ ಹೊಸಬಾಳೆ ಸೀತಾರಾಮ್ ರಾವ್, ಬಿ.ವೈ. ಬಂಡಿವಡ್ಡರ್, ಹೆಚ್.ಎಸ್. ಮಂಜಪ್ಪ, ತಾಲೂಕು ಕಸಾಪ ಅಧ್ಯಕ್ಷ ಕೃಷ್ಣಾನಂದ್, ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಡಿ.ಎಸ್. ರವಿಶಂಕರ್, ಕಸಾಪ ಕಾರ್ಯದರ್ಶಿ ಆಶಾ ರಂಗನಾಥ್, ಖಜಾಂಚಿ ದಿನಕರಭಟ್ ಭಾವೆ, ಎನ್.ಕೆ. ಶಿಲ್ಪಾ, ಜಯಣ್ಣ, ಜ್ಞಾನೇಶ್, ಪ್ರಿಯಾಂಕ ಜಿ. ಹೆಗಡೆ, ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.