ಶಿವಮೊಗ್ಗ

ಅಭಿವೃದ್ಧಿ ನೋಡಿ ಮತ ಹಾಕಿ: ಬಿಎಸ್ವೈ

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮಾ.29:
ನಾನು ಸಿಎಂ ಆಗಿದ್ದೇ ಶಿಕಾರಿಪುರದ ಖುಣ ತೀರಿಸಲು. ಹಿಂದೆ ನಂಜುಂಡಪ್ಪ ವರದಿಯಲ್ಲಿ ಶಿಕಾರಿಪುರ ಹಿಂದುಳಿದ ತಾಲೂಕು ಎಂದಿತ್ತು. ಆದರೆ ಇಂದು ಅದೇ ವರದಿಯಲ್ಲಿ ರಾಜ್ಯದ ಮುಂದುವರೆದ ತಾಲೂಕು ಎಂದು ಸೇರಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
 ಸಮೀಪದ ಉಡಗಣಿ, ಬಳ್ಳಿಗಾವಿ, ಮಾಳಗೊಂಡನಕೊಪ್ಪ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಿಂಚಿನ ಪ್ರವಾಸ ಕೈಗೊಂಡು ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆದಾಗ ಮಾಡಿದ ಅಭಿವೃದ್ಧಿ ಕಣ್ಣು ಮುಂದಿದೆ. ದೇಶದಲ್ಲಿ ಎಲ್ಲೂ ಇಲ್ಲದ ಜಾನಪದ ವಿಶ್ವ ವಿದ್ಯಾಲಯವನ್ನು ನಾನು ಪ್ರಾರಂಭಿಸಿದೆ. ಬೆಳಗಾವಿಯಲ್ಲಿ ಮೂರು ದಿನ ಜಗತ್ತು ಮೆಚ್ಚುವಂತೆ ವಿಶ್ವ ಸಮ್ಮೇಳನ ಮಾಡಿದೆ. ವಿಕಾಶಸೌಧ ಕಟ್ಟಿಸಿ ಸಮ್ಮೇಳನ ನಡೆಯುವಂತೆ ಮಾಡಿದೆ ಎಂದರು.
ಮಾಡಿದ ಕೆಲಸ ಹೇಳಿ ಓಟು ಕೇಳಲು ನಾಚಿಕೆ: ನಾನು ಮುಖ್ಯಮಂತ್ರಿ ಆಗುವ ಮೊದಲು ತಾಲೂಕನ್ನು ಆದರ್ಶ ತಾಲೂಕನ್ನಾಗಿ ಮಾಡುವದಾಗಿ ಹೇಳಿ ಕಾರ್ಯನಿರ್ವಹಿಸಿದರೂ ಮಾಡಿದ ಕೆಲಸಕಾರ್ಯಗಳ ಪಟ್ಟಿಕೊಟ್ಟು ಮತಯಾಚನೆ ಮಾಡುವುದು ನನಗೆ ನಾಚಿಕೆ ಆಗುತ್ತಿದೆ.
 ನಾನು ಮುಖ್ಯಮಂತ್ರಿಯಾದಾಗ  ಮಾಡಿದ ಕಾರ್ಯಗಳನ್ನು ಗಮನಿಸಿದರೆ ನಾನು ಮತಯಾಚಿಸದೇ ಮತ ಹಾಕಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
 ಯಡಿಯೂಪ್ಪನವರ ಸಮ್ಮುಖದಲ್ಲಿ ಕೆಜೆಪಿ ಸೇರುವವರ ಸಂಖ್ಯೆ ಪ್ರಾರಂಭವಾಗಿ ಶಿರಾಳಕೊಪ್ಪ ಭಾಗದ ಸಯ್ಯದ್ ಜಬ್ಬೀರ ಸಾಬ್, ಅಯೂಬ್ ಸಾಹೇಬ್, ಬಳ್ಳಿಗಾವಿಯಲ್ಲಿ ಕಾಂಗ್ರೆಸ್ನಿಂದ ಮಲ್ಲಣ್ಣ ಬಳ್ಳಿಗಾವಿ, ಹಿಂದೆ ಬಿಜೆಪಿಯಲ್ಲಿದ್ದ ಶಿವಾನಂದಸ್ವಾಮಿ ಹಾಗೂ ಹಲವಾರು ಪ್ರಮುಖರನ್ನು ಯಡಿಯೂರಪ್ಪ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
 ಪ್ರಾಸ್ತಾವಿಕವಾಗಿ ಗುರುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಕೈಗೊಂಡ ಕೆಲಸಕಾರ್ಯಗಳನ್ನು ಗ್ರಾಮಸ್ಥರಿಗೆ ತಿಳಿಸಿದರು. ಅಗಡಿ ಅಶೋಕ, ರೇವಣಪ್ಪ, ಹನುಮಂತಪ್ಪ, ಜಿಪಂ ಸದಸ್ಯ ಬಂಗಾರ ನಾಯ್ಕ್, ಕಾರ್ಯದರ್ಶಿ ಸಿದ್ದರಾಮಣ್ಣ, ಈಶ್ವರಪ್ಪ,ನಾಗರಾಜ್ ಬಳ್ಳಿಗಾವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.