ಬಿಜೆಪಿವಿರುದ್ಧ ಕೆಜೆಪಿ ವಾಗ್ದಾಳಿ
ಶಿವಮೊಗ್ಗ: ಕೆಜೆಪಿ- ಬಿಜೆಪಿ ವಾಕ್ಸಮರ ಶುಕ್ರವಾರ ಸಹ ಮುಂದುವರಿದಿದೆ. ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭೆ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ಅವರ ಹೇಳಿಕೆ ಕುರಿತು ಕೆಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ವಿವಿಧ ಆರೋಪ ಹೊರಿಸಿ ಕಟು ಟೀಕೆ ಮಾಡಿದೆ.
ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಅವರು ಕೆಜೆಪಿ ಮುಖಂಡ ರುದ್ರೇಗೌಡ ಅವರ ಬಗ್ಗೆ ಹಾಸ್ಯಸ್ಪದವಾಗಿ ಹೇಳಿಕೆ ನೀಡಿರುವುದನ್ನು ಜಿಲ್ಲಾ ಕೆಜೆಪಿ ಖಂಡಿಸಿದೆ.
ಚನ್ನಬಸಪ್ಪ ಹೇಳಿಕೆ ಆಶ್ಚರ್ಯಕರವಾಗಿದೆ. ರುದ್ರೇಗೌಡ ಕೇವಲ ಕೈಗಾರಿಕೋದ್ಯಮಿ ಅಲ್ಲ. ಅವರು ಕಾರ್ಖಾನೆಗಳಲ್ಲಿನ ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು.
ಆದರೆ, ನಗರಸಭೆ ಅಧ್ಯಕ್ಷರಾಗಿದ್ದಾಗ ಚನ್ನಬಸಪ್ಪ ಹಸಿರೀಕರಣ ಹೆಸರಲ್ಲಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ.
ಇದನ್ನು ಮೊದಲು ಚನ್ನಬಸಪ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಕೆಜೆಪಿ ಸಲಹೆ ನೀಡಿದೆ.
ರುದ್ರೇಗೌಡರು ಶ್ರೀಮಂತ ಕೈಗಾರಿಕೋದ್ಯಮಿ ಆಗಿದ್ದರೂ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ. ಆದ್ದರಿಂದ ಚನ್ನಬಸಪ್ಪನವರು ಇಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವುದಕ್ಕಿಂತ ಮೌನ ವಹಿಸುವುದು ಸೂಕ್ತ ಎಂದು ಜಿ. ಮಧುಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

