ವಿಜೃಂಭಣೆಯ ಬಳ್ಳಿಗಾವಿ ಕೇದಾರೇಶ್ವರ ಜಾತ್ರೆ
ಕ.ಪ್ರ.ವಾರ್ತೆ,ಶಿರಾಳಕೊಪ್ಪ, ಮಾ.31
ದಕ್ಷಿಣ ಕೇದಾರವೆಂದು ಪ್ರಸಿದ್ಧಿ ಪಡೆದಿರುವ ಬಳ್ಳಿಗಾವಿ ಕೇದಾರೇಶ್ವರ ಜಾತ್ರೆ ಭಾನುವಾರ ಯಶಸ್ವಿಯಾಗಿ ನಡೆಯಿತು.
30ರಂದು ಸಣ್ಣ ರಥೋತ್ಸವ ನಡೆಯಿತು. 31ರಂದು ದೊಡ್ಡ ರಥೋತ್ಸವ ಸಕಲವಾದ್ಯಗಳೊಂದಿಗೆ ನಡೆಯಿತು. ಹಿಂದೆ ಭಕ್ತರಿಗೆ ಉತ್ತರ ಕೇದಾರಕ್ಕೆ ಹೋಗಲು ಆಗುತ್ತಿರಲಿಲ್ಲ, ದಕ್ಷಿಣ ಭಾರತದ ಭಕ್ತರಿಗೆ ಕೇದಾರೇಶ್ವರನ ದರ್ಶನ ಸುಲಭವಾಗಿ ದೊರಕಲಿ ಎಂದು ಬಳ್ಳಿಗಾವಿಯಲ್ಲಿ ಕೇದಾರೇಶ್ವರನನ್ನು ಸ್ಥಾಪಿಸಲಾಯಿತು ಎಂಬ ಪ್ರತೀತಿ ಇದೆ.
ಹಾಗೆಯೇ ಬೇಲೂರು-ಹಳೇಬೀಡು ದೇವಸ್ಥಾನಗಳ ಸ್ಥಾಪನೆಯ ಮೊದಲು ಬಳ್ಳಿಗಾವಿಯ ದೇವಸ್ಥಾನಗಳು ನಿರ್ಮಾಣವಾಗಿವೆ ಎಂಬ ದಾಖಲೆಗಳು ಇವೆ. ಹಲವಾರು ರಾಜಮಹರಾಜರು, ಮಹಾನ್ ಶಿವ-ಶರಣರು ಹಾಗೂ ನಾಟ್ಯರಾಣಿ ಶಾಕುಂತಲೇ ಈ ನಾಡಿನಲ್ಲಿ ಹುಟ್ಟಿ ಬೆಳೆದು ಈ ನಾಡಿನ ಕ್ಷೀರ್ತಿ ಬೆಳಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪುರಾತನ ವಿಶ್ವವಿದ್ಯಾಲಯಗಳನ್ನು ಹೊಂದಿದ್ದ ಈ ಪ್ರದೇಶದಲ್ಲಿ ಇನ್ನೂ ಹಲವಾರು ಕುರುಹುಗಳು ಈಗಲೂ ಲಭ್ಯವಿದೆ. ಆಗಿನಿಂದಲೂ ಬಳ್ಳಿಗಾವಿಯ ರಥೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಸುತ್ತಮುತ್ತಲ ಭಾಗಗಳಿಂದ ಆಗಮಿಸುವ ಭಕ್ತರು ಭಾಗವಹಿಸುತ್ತಾರೆ. ಸಂಜೆ ವಿಶೇಷವಾಗಿ ಸಾವಿರಾರು ಭಕ್ತರು ಕೇದಾರೇಶ್ವರನ ದರ್ಶನಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

