ಮಾನವೀಯ ಗುಣಗಳು ಬೆಳೆಯಲಿ: ರಂಭಾಪುರೀ ಶ್ರೀ
ಸೊರಬ: ಮನುಷ್ಯನಲ್ಲಿ ಮನುಷ್ಯತ್ವ, ಮಾನವೀಯತೆಯ ಆದರ್ಶಗಳು ಬೆಳೆದು ಬರಬೇಕು ಎಂದು ಬಾಳೆಹೊನ್ನೂರು ರಂಭಾಪುರೀ ಮಠದ ಶ್ರೀಗಳು ತಿಳಿಸಿದರು. ತಾಲೂಕು ಜಡೆ ಗ್ರಾಮದಲ್ಲಿ ನಡೆಯುತ್ತಿರುವ ಜಂಗಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಶಾಂತಿಯ ಬದುಕಿಗೆ ಶಾಂತಿ, ನೆಮ್ಮದಿ ಅಗತ್ಯವಿದೆ, ಶಾಂತಿ, ಸೌಹಾರ್ದತೆ ಬೆಳೆದು ಬರಲು ಧರ್ಮ ಅವಶ್ಯವಿರುತ್ತದೆ. ಭಾರತದಲ್ಲಿನ ಧರ್ಮ ಹಲವಾದರೂ ಗುರಿ ಒಂದೆ ಎಂಬುದನ್ನು ಅರಿತು ಪಾಲಿಸುವ ಮನೋಭಾವಕ್ಕೆ ಒತ್ತು ನೀಡಬೇಕು ಎಂದರು.
ಪಟ್ಟಾಭಿಷಕ್ತರಾಗಲಿರುವ ಜಡೆ ಹಿರೇಮಠದ ಅಮರೇಶ್ವರ ಶ್ರೀಗಳಿಗೆ ಶ್ರೀ ಪೀಠದಿಂದ ರೇಷ್ಮೆ ಮಡಿ, ಫಲಪುಷ್ಪವಿತ್ತು ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಅಖಿಲಭಾರತ ವೀರಶೈವ ಮಹಾ ಸಭಾದ ಅಧ್ಯಕ್ಷ ಎಸ್. ತಿಪ್ಪಣ್ಣ, ಸಾಗರ ವೀರಶೈವ ಸಮಾಜದ ಅಧ್ಯಕ್ಷ ಯು.ಸಿ.ಸಿದ್ಧಲಿಂಗೇಶ್, ಶಿವಮೊಗ್ಗ ಘಟಕದ ಅಧ್ಯಕ್ಷ ರುದ್ರಮೂರ್ತಿ ಸಜ್ಜನ್, ಸೊರಬ ಘಟಕದ ಅಧ್ಯಕ್ಷ ಇಂದೂಧರ ಒಡೆಯರ್, ಸೊರಬ ಟೌನನ್ವೀರಶೈವ ಸಮಾಜದ ಅಧ್ಯಕ್ಷ ಗುತ್ತಿ ಚೆನ್ನಬಸಪ್ಪ, ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕೂಡಲದ ಶ್ರೀ ಗುರುನಂಜೇಶ್ವರ ಶಿವಾಚಾರ್ಯರು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

