ಔಷಧಿ ವ್ಯಾಪಾರಿ ವಿರೋಧಿ ನೀತಿ: ಪ್ರತಿಭಟನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 10
ಕೇಂದ್ರ ಸರ್ಕಾರದ ಔಷಧಿ ವ್ಯಾಪಾರಿ ವಿರೋಧಿ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಎಲ್ಲಾ ಔಷಧಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಜನ ವಿರೋಧಿ: ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್ಛೇದ 65(15)(ಸಿ) ಔಷಧಿ ವ್ಯಾಪಾರಿಗಳಿಗೆ ಕರಾಳವಾಗಿದೆ. ಅತ್ಯಂತ ಜನ ವಿರೋಧಿಯಾಗಿದೆ. ಹಾಗೆಯೇ ಆಸ್ಪತ್ರೆ-ಕ್ಲಿನಿಕ್ ಒಳಭಾಗದಲ್ಲಿ ಔಷಧಿ ವ್ಯಾಪಾರ ಮಾಡುವುದರಿಂದ ಬಡ ರೋಗಿಗಳಿಗೆ ತೀವ್ರ ತೊಂದರೆಯಾಗಲಿದೆ. ಔಷಧ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೇಂದ್ರದ ನೂತನ ಔಷಧ ನೀತಿಯಿಂದ ಸಗಟು ಹಾಗೂ ಚಿಲ್ಲರೆ ಔಷಧ ವ್ಯಾಪಾರಿಗಳಿಗೆ ಔಷಧ ಮಾರಾಟದ ಮೇಲೆ ಸಿಗುತ್ತಿದ್ದ ಕಮೀಷನ್ ಮೊತ್ತವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ ಸನ್ನಿವೇಶದಲ್ಲಿ ಕಮೀಷನ್ ಮೊತ್ತ ಕಡಿಮೆ ಮಾಡುವುದರಿಂದ ಔಷಧ ವ್ಯಾಪಾರಿಗಳ ಜೀವನದ ಮೇಲೆ ವೈತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬೇಡಿಕೆಗಳು: ಔಷಧಿ ವ್ಯಾಪಾರಿಗಳನ್ನು ಬಲಿಪಶು ಮಾಡುತ್ತಿರುವ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್ಛೇದ 19ರ ತಿದ್ದುಪಡಿಮಾಡಬೇಕು, ವಿದೇಶಿ ನೇರ ಬಂಡವಾಳವನ್ನು ಹಿಂಪಡೆಯಬೇಕು, ಫಾರ್ಮಸಿಸ್ಟ್ಗಳ ಕೊರತೆಯನ್ನು ನೀಗಿಸಲು ಡ್ರಗ್ಸ್ಮತ್ತು ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್ಛೇದ 65(15)(ಸಿ)ಗೆ ತಿದ್ದುಪಡಿ ಮಾಡಬೇಕು, ಚಿಲ್ಲರೆ ಔಷಧಿ ವ್ಯಾಪಾರೋದ್ಯಮವನ್ನು ಗಂಡಾಂತರಕ್ಕೆ ಈಡು ಮಾಡಿರುವ ಮತ್ತು ರೋಗಿಗಳಿಗೆ ಅನಾವಶ್ಯಕ ಹೊರೆಯಾಗುತ್ತಿರುವ ವೈದ್ಯರ ಔಷಧಿ ವ್ಯಾಪಾರದ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡಬೇಕು, ಔಷಧಿ ಮೇಲಿನ ಲಾಭಾಂಶವನ್ನು ಕಡಿಮೆ ಮಾಡುವ ನೀತಿಯನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಿವೇಕಾನಂದ ನಾಯಕ್, ಕಾರ್ಯದರ್ಶಿ ಜಿ. ಹಾಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

