ರಂಗಗೀತೆ ರಕ್ಷಣೆ ಅಗತ್ಯ: ವೇಣುಗೋಪಾಲ್
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 10
ಪ್ರಸ್ತುತ ರಂಗಗೀತೆಗಳು ನಶಿಸುತ್ತಿದ್ದು, ಅದನ್ನು ರಕ್ಷಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹಿಂದುಸ್ತಾನಿ ಗಾಯಕ ಶಿವಮೊಗ್ಗ ವೇಣುಗೋಪಾಲ್ ಹೇಳಿದರು.
ಸಹ್ಯಾದ್ರಿ ರಂಗತರಂಗ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಗರದ ಶ್ರೀ ಶಾರದದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ರಂಗಗೀತೆಗಳ ಕಲಿಕಾ ಶಿಬಿರದಲ್ಲಿ ಅವರು, ಹಳ್ಳಿಯ ಮನೆಗಳಲ್ಲಿ ರಂಗಗೀತೆಗಳು ಹಾಡುವುದನ್ನು ಕಾಣಬಹುದಿತ್ತು. ಆದರೆ, ಇತ್ತೀಚೆಗೆ ಅದು ಕೂಡ ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಬಹಳಷ್ಟು ಮಹತ್ವ: ಕನ್ನಡ ರಂಗಭೂಮಿಯಲ್ಲಿ ರಂಗಗೀತೆಗಳಿಗೆ ಬಹಳಷ್ಟು ಮಹತ್ವವಿದ್ದು, ಅನಕ್ಷರಸ್ತರು ಮತ್ತು ಸಾಮಾನ್ಯ ಜನರು ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ರಂಗಗೀತೆಗಳು ಹೊರಹೊಮ್ಮುತ್ತಿದ್ದವು. ಈ ವೇಳೆ ದಣಿವಾಗುತ್ತಿರುವುದೇ ತಿಳಿಯುತ್ತಿರಲ್ಲ. ಅಂತಹ ಶಕ್ತಿ ರಂಗಗೀತೆಗಳಿಗೆ ಇದೆ ಎಂದರು.
ಪ್ರಸ್ತುತ ರಂಗಗೀತೆಗಳಿಗೆ ಹೆಚ್ಚು ಮನ್ನಣೆ ಸಿಗದೇ ಮೂಲೆ ಗುಂಪಾಗುತ್ತಿವೆ ಎಂದ ಅವರು, ರಂಗಗೀತೆಗಳನ್ನು ಶಾಸ್ತ್ರೀಯ ನೆಲೆಗಟ್ಟಿನಲ್ಲಿ ಕಲಿಸುವ ಮೂಲಕ ಆದರ ಪುನಶ್ಚೇತನ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಂತೇಶ್ ಕದರಮಂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಹರಿಕುಮಾರ್, ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ಅಧ್ಯಕ್ಷ ಎಚ್.ವಿ. ಸುಬ್ರಹ್ಮಣ್ಯ, ಸಹ್ಯಾದ್ರಿ ರಂಗತರಂಗದ ಅಧ್ಯಕ್ಷ ಬಿ.ಆರ್. ಚಂದ್ರಯ್ಯ, ಬಸವಲಿಂಗಯ್ಯ, ನಿದಿಗೆ ನವಿಲೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

