ಇಂದು ರಿಯಾಯಿತಿ ದರದಲ್ಲಿ ಚಿನ್ನದ ನಾಣ್ಯ ಮಾರಾಟ
ಶಿವಮೊಗ್ಗ: ಅಕ್ಷಯ ತೃತಿಯ ಅಂಗವಾಗಿ ಮೇ 13ರಂದು ಶಿವಮೊಗ್ಗದ ಪ್ರಧಾನ ಅಂಚೆ ಕಚೇರಿಯಲ್ಲಿ ಪರಿಶುದ್ಧ ಬಂಗಾರದ ನಾಣ್ಯಗಳನ್ನು ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ. ಸಾರ್ವಜನಿಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಪರಿಶುದ್ಧ ಚಿನ್ನವನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬೇಕೆಂಬುದು ಇಲಾಖೆಯ ಉದ್ದೇಶವಾಗಿದ್ದು, ಇಲಾಖೆಯು ವರ್ಲ್ಡ್‌ಗೋರ್ಲ್ಡ್ ಕೌನ್ಸಿಲ್ ಮುಖಾಂತರ ಶೇ.99.99ರಷ್ಟು ಪರಿಶುದ್ಧ ಬಂಗಾರದ ನಾಣ್ಯಗಳನ್ನು ಸ್ವಿಸ್ ಅಂತಾರಾಷ್ಟ್ರೀಯ ಗ್ಯಾರೆಂಟಿ ಹಾಗೂ ಭಾರತ ಸರ್ಕಾರದ ಅಂಚೆ ಇಲಾಖೆಯ ಭರವಸೆಯೊಂದಿಗೆ 0.5, 1, 5, 8, 10 ಮತ್ತು 20 ಹಾಗೂ 50ಗ್ರಾಂನ ತೂಕದ ಸಂಪೂರ್ಣವಾಗಿ ಪ್ಯಾಕ್ ಮಾಡಿದ ಬಂಗಾರದ ನಾಣ್ಯಗಳನ್ನು ಅಂತರಾಷ್ಟ್ರೀಯ ದೈನಂದಿನ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅಕ್ಷಯ ತೃತಿಯ ಸವಿನೆನಪಿಗಾಗಿ ಅಂಚೆ ಮೂಲಕ ಖರೀದಿಸುವ ಬಂಗಾರದ ನಾಣ್ಯಗಳಿಗೆ ಶೇ.7ರಷ್ಟು ರಿಯಾಯಿತಿ ಇರುತ್ತದೆ ಎಂದು ಶಿವಮೊಗ್ಗದ ಅಂಚೆ ಪ್ರಧಾನ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಗೆ 08182-223605, 222207.
22ರಿಂದ ಜಿಲ್ಲಾ ಮಟ್ಟದ ಕೃಷಿ ಮೇಳ
ಶಿವಮೊಗ್ಗ: ಆಸರೆ ಸೋಷಿಯನ್ ಸರ್ವಿಸ್ ಟ್ರಸ್ಟ್ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ಮೇ 20ರಿಂದ 22ರವರೆಗೆ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಕೃಷಿಮೇಳ ಏರ್ಪಡಿಸಿದೆ. ರೈತರು ತಮ್ಮ ಕುಂದು ಕೊರತೆ, ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕಾಗಿ ಕೃಷಿ ವಿಜ್ಞಾನಿ, ಕೃಷಿ ಪಂಡಿತ ಹಾಗೂ ಪ್ರಗತಿಪರ ರೈತರೊಂದಿಗೆ ಚರ್ಚಿಸಲು ವೇದಿಕೆಯ ಒದಗಿಸಲಾಗುವುದು. ಆಧುನಿಕ ಉಪಕರಣ ಹಾಗೂ ಬೆಳೆಗಳಿಗೆ ತಗುಲುವ ರೋಗಗಳಿಗೆ ಕೀಟ ನಾಶಕ ಬಳಸುವ ಕುರಿತು ರೈತರಿಗೆ ತಿಳುವಳಿಕೆ ನೀಡಲಾಗುವುದು. ಕೃಷಿಗೆ ಸಂಬಂಧಿಸಿದ ಹೊಸ ಯಂತ್ರೋಪಕರಣಗಳು, ಹೊಸ ತಂತ್ರಜ್ಞಾನ ಮತ್ತು ವಸ್ತುಪ್ರದರ್ಶನ ಇರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ರೈತರು, ಕೃಷಿ ಪರಿಕರಗಳ ಉತ್ಪಾದಿತ ಕಂಪನಿಗಳು, ಸರ್ಕಾರಿ ಇಲಾಖೆಗಳು, ರೈತರಿಗೆ ಕೃಷಿ ಜೊತೆಗೆ ಆರೋಗ್ಯ, ಕ್ರೀಡೆ, ಶಿಕ್ಷಣ, ವಿಮಾ ಯೋಜನೆಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಕೃಷಿ ಸಂಬಂಧ ವ್ಯವಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ ಉದ್ದೇಶದಿಂದ ಶಿವಮೊಗ್ಗದ ಆಸರೆ ಸಂಸ್ಥೆಯು ಕೃಷಿ ಮೇಳವನ್ನು ಆಯೋಜಿಸುತ್ತಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ. ಸತೀಶ್‌ಗೌಡ ತಿಳಿಸಿದ್ದಾರೆ. ವಿವರಗಳಿಗಾಗಿ-9972221153.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

