ಶಿವಮೊಗ್ಗ

ಅಭಿಮಾನ ಸಾಕಾರ ರೂಪದಲ್ಲಿ ಪ್ರಕಟವಾಗಲಿ

Published On :

ಕ.ಪ್ರ.ವಾರ್ತೆ, ಸೊರಬ, ಮೇ 13
ನಾವು ಬೆಳೆದು ಬಂದ ನೆಲೆಯ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಅಭಿಮಾನವಿರಿಸಿದರೆ ಸಾಲದು, ಅಭಿಮಾನ ಸಾಕಾರ ರೂಪದಲ್ಲಿ ಪ್ರಕಟವಾಗುವಂತಿರಬೇಕು, ಆಗ ಮಾತ್ರ ನಮ್ಮ ಸಂಕಲ್ಪ ಸಿದ್ಧಿಯಾದಂತೆ ಎಂದು ಹೊರಬೈಲು ಗ್ರಾಮದ ಗಾಳಿ ಯಕ್ಷಕಲಾ ಬಳಗದ ಸಂಚಾಲಕ ಗಾಳಿ ಸತ್ಯನಾರಾಯಣಭಟ್ ತಿಳಿಸಿದರು.
ತಾಲೂಕಿನ ಹೊರಬೈಲು ಗ್ರಾಮದಲ್ಲಿ ಈಚೆಗೆ ಗಾಳಿ ಬಳಗದ ವತಿಯಿಂದ 8 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಾಟಕ ಮತ್ಚು ಯಕ್ಷಗಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂಚಾಲಕರಾದ ಸತ್ಯಾನಾರಾಯಣ ಭಟ್ ಅವರನ್ನು ಗ್ರಾಮಸ್ಥರು ಮತ್ತು ಬ್ರಾಹ್ಮಣ ಸಮಾಜದ ವತಿಯಿಂದ ಕೊಡಮಾಡಿದ ಗೌರವ ಸ್ವೀಕರಿಸಿ ಮಾತನಾಡಿದರು.
ಅಮೂಲ್ಯ ಕಾರ್ಯಕ್ರಮ: ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸೀತಾರಾಮಯ್ಯ ಮಾತನಾಡಿ, ಪ್ರತಿವರ್ಷ ತಮ್ಮೆಲ್ಲ ಜಂಜಾಟದ ನಡುವೆಯೂ ಬೆಂಗಳೂರಿನಲ್ಲಿದ್ದು ಇಲ್ಲಿ ಬಂದು ಸೃಜನಾತ್ಮಕ ಚಟುವಟಿಕೆ ನಡೆಸುವ ಮೂಲಕ ಜನರ ನಡುವಿನ ಅಂತರವನ್ನು ಹತ್ತಿರವಾಗಿಸುವ  ಅಮೂಲ್ಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ನಾಟಕದ ಪಾತ್ರದಾರಿಗಳಾಗಿ ಸಂಚಾಲಕ  ಸತ್ಯನಾರಾಯಣ್ ಭಟ್ ಸೇರಿದಂತೆ ಗಾಳಿ ಜಿ.ಜಿ. ಹೆಗಡೆ, ರಾಧಾಕೃಷ್ಣ, ಮಾಧವ, ಸದಾನಂದ್ ಹೆಗಡೆ, ಕೆ.ವಿ. ಸುಮುಖ, ಹೆಚ್.ಎಲ್. ಸುಮಂತ್, ಪ್ರಶಾಂತ ವರ್ಧನ್, ಅಚ್ಯುತ್ ಗಾಳಿ ಪಾಲ್ಗೊಂಡು ನಾಟಕದ ಅಂದ ಹೆಚ್ಚಿಸಿದರು.
ಯಕ್ಷಗಾನ ಹಿಮ್ಮೇಳದಲ್ಲಿ ವೆಂಕಟರಾವ್, ಕಾರ್ತೀಕ ಧಾರೇಶ್ವರ, ನಾಗಭೂಷಣ್, ಆದಿತ್ಯ, ನಾಗರಾಜ, ಅಶೋಕ್ ಭಟ್, ಅಮೃತ ದೇವ, ಮುಮ್ಮೇಳದಲ್ಲಿ ಸಂಜಯ್ಬೆಳೆಯೂರು, ಅಶೋಕ್ ಭಟ್ ಸಿದ್ಧಾಪುರ, ಶಂಕರನಾರಾಯಣ್, ಸತ್ಯನಾರಾಯಣ ಗಾಳಿ, ಪ್ರಶಾಂತ ವರ್ಧನ್, ಸುಮುಖ, ಸುಮಂತ್, ಸದಾನಂದಹೆಗಡೆ, ರಾಧಕೃಷ್ಣ ಇದ್ದರು.
ಗ್ರಾಮದ ಹಿರಿಯ ಗಣ್ಯರು ವೇದಿಕೆಯಲ್ಲಿದ್ದರು.ಗಾಳಿ ವೆಂಕಟೇಶ್ ಭಟ್ ಸ್ವಾಗತಿಸಿದರು. ಸತ್ಯನಾರಾಯಣ ಭಟ್ ವಂದಿಸಿದರು, ಗಾಳಿ ಭಾರತಿಭಟ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.