ಶಿವಮೊಗ್ಗ

ಮುಂದುವರಿದ ತಾರತಮ್ಯ ನೀತಿ: ವಿಷಾದ

Published On :

ಕ.ಪ್ರ.ವಾರ್ತೆ, ಸೊರಬ, ಮೇ 14
ಸುಮಾರು 12ನೇ ಶತಮಾನದ ಹೊತ್ತಿಗೆ ಚಾಲ್ತಿ ಇದ್ದ ಶ್ರಮಿಕರ ಮೇಲಿನ ದಬ್ಬಾಳಿಕೆ ಮತ್ತು ತಾರತಮ್ಯ ನೀತಿ ಇಂದಿಗೂ ಮುಂದುವರೆದಿದೆ ಎಂದು ಚಿಂತಕ ಭಾರ್ಗವ ನಾಡಿಗ್ ಖೇದ ವ್ಯಕ್ತಪಡಿಸಿದರು.
 ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಇಂದೂ ಕೂಡಾ ಶೋಷಣೆಯ ಮಾರ್ಗಗಳ ರೂಪ ತುಸು ಬದಲಾಗಿದೆಯಷ್ಟೆ. ಅಂದಿನ ದಿನಗಳಲ್ಲಿ ಇಂತಹ ಅನಿಷ್ಟ ಜಾಢ್ಯಗಳನ್ನು ತೊಡೆಯುವ ಉದ್ದೇಶದಿಂದ ವಚನ ಕ್ರಾಂತಿ ಮೂಲಕ ಬಸವಣ್ಣನವರಂತವರು ಸಾಮಾಜಿಕ ಚಿಂತನೆಗೆ ಹೊಸ ಆಯಾಮವನ್ನೇ ಸೃಷ್ಟಿಸಿದರು ಎಂದರು.
  ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಮಾತನಾಡಿ, ಸರಳ ಹಾಗೂ ತತ್ವಾದರ್ಶಗಳನ್ನುಳ್ಳ ಬಸವಣ್ಣನವರ ವಚನಗಳು ಬದುಕಿನ ನಿರಂತರ ದಾರಿ ದೀವಿಗೆ, ಸುವರ್ಣಯುಗವೆನಿಸಿಕೊಂಡ  12 ನೇ ಶತಮಾನದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಿದ ಮಹಾನ್ ಚೇತನ ಅವರು ಎಂದರು.
 ಬಸವೇಶ್ವರ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಮತ್ತಿತರ ವಾದ್ಯಗೋಷ್ಠಿಗಳೊಂದಿಗೆ ವರ್ಣರಂಜಿತ ಮೆರವಣಿಗೆ ನಡೆಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು  ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ  ಗುರುಕುಮಾರ್ ಪಾಟೀಲ್, ತಹಸೀಲ್ದಾರ್ ತೇಜಸ್ ಕುಮಾರ್, ಪಪಂ ಮುಖ್ಯಾಧಿಕಾರಿ ಜಿ.ಟಿ. ವೀರೇಶ್ ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಕೃಷ್ಣಾನಂದ್, ತಾಲೂಕು ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ. ನಾಗಪ್ಪ ವಕೀಲ್, ಜಿಪಂ ಮಾಜಿ ಸದಸ್ಯ ಪಾಣಿರಾಜಪ್ಪ, ಕೆ.ಜೆ. ಲೋಲಾಕ್ಷಮ್ಮ, ಶಿಕ್ಷಕ ರಾಜಪ್ಪ ಮಾಸ್ತರ್, ನಾಗಪ್ಪ, ಬಂಗಾರಸ್ವಾಮಿ, ಮಲ್ಲಿಕಾರ್ಜುನ್ ದ್ವಾರಳ್ಳಿ ಶಿವರಾಂ ಜಿ. ನಾಯಕ್, ದೀಪಕ್, ಹಾಲೇಶ್ ನವುಲೆ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.