ರೈಲು ಹಳಿಗೆ ಸಿಲುಕಿ ವ್ಯಕ್ತಿ ಸಾವು
ಶಿವಮೊಗ್ಗ: ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಜಿಲ್ಲಾ ಕಾರಗೃಹ ಹಿಂಭಾಗದ ಕೀರ್ತಿನಗರದ ಬಳಿ ಇರುವ ರೈಲ್ವೆ ಹಳಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಈ ಘಟನೆ ಆತ್ಮಹತ್ಯೆಯೋ, ಸ್ವಾಭಾವಿಕ ಸಾವೋ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬೆಂಗಳೂರಿನಿಂದ ತಾಳಗುಪ್ಪ ಕಡೆಗೆ ಬೆಳಿಗ್ಗೆ ಬರುವ ರೈಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಅವಘಡ ಸಂಭವಿಸಿದ ವೇಳೆ ವ್ಯಕ್ತಿಯ ತಲೆ ಬುರುಡೆ ಚೂರಾಗಿದ್ದು, ಯಾವುದೇ ಗುರುತು ಸಿಂಗದಂತಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿ ಸುಮಾರು 40 ವರ್ಷದವರಾಗಿದ್ದು, 5.6 ಅಡಿ ಎತ್ತರ, ಗೋಧಿ ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ 3 ಇಂಚು ಕಪ್ಪು ಕೂದಲಿದೆ. ಬಲಗೈಯಲ್ಲಿ ನಯನ ಎಂಬ ಹೆಸರಿನ ಹಚ್ಚೆಯ ಗುರುತಿದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಹಸಿರು ಬಣ್ಣದ ಲುಂಗಿ, ಶರ್ಟ್‌ನ ಕಾಲರ್‌ನಲ್ಲಿ ಅಶೋಕ ನ್ಯಾಮತಿ ಟೈಲರ್ ಎಂಬ ಹೆಸರಿನ ಸ್ಟಿಕ್ಕರ್ ಇದೆ.
ಪ್ರಕರಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಿವರಗಳಿಗಾಗಿ (9481405621) ಅಥವಾ ಠಾಣೆ (08182-222974) ಸಂಪರ್ಕಿಸಬಹುದು.
ಜೀವ ಬೆದರಿಕೆ: ಲಕ್ಷಾಂತರ ರು. ಅಪಹರಣ
ಶಿವಮೊಗ್ಗ: ಜಲಾನಯನ ಅಭಿವೃದ್ಧಿ ಇಲಾಖೆ ಆರ್‌ಎಫ್‌ಓಗೆ ಜೀವ ಬೆದರಿಕೆ ಹಾಕಿ ಕಾರು ಸೇರಿದಂತೆ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳನ್ನು ಅಪಹರಿಸಿರುವ ಘಟನೆ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌ಎಫ್‌ಓ ರಾಜೇಂದ್ರ ನಾಗಯ್ಯ ವಂಚನೆಗೊಳಗಾದವರು. ಇವರಿಗೆ ಪರಿಚಯವಿದ್ದ ಪೂಜಾ ಎಂಬುವವರ ಸಹಾಯ ಪಡೆದು, ಪೂಜಾ ಅವರ ಗಂಡ ಹಾಗೂ ಮತ್ತಿಬ್ಬ ಅಪರಿಚಿತರು ಈ ಕೃತ್ಯವೆಸಗಿದ್ದಾರೆ ಎಂದು ರಾಜೇಂದ್ರ ನಾಗಯ್ಯ ದೂರಿನಲ್ಲಿ ತಿಳಿಸಿದ್ದಾರೆ. ರಾಜೇಂದ್ರ ಅವರ ಕರ್ತವ್ಯ ನಿರ್ವಹಿಸುತ್ತಿರುವ ಓ.ಟಿ. ರಸ್ತೆಯ ಕಚೇರಿ ಆವರಣದಲ್ಲಿ ಪೂಜಾ ಅವರ ಗಂಡ ಸೇರಿದಂತೆ ಮೂವರು ಅಡ್ಡಗಟ್ಟಿ 1 ಟಾಟಾ ಇಂಡಿಕಾ ಕಾರು, ಬಂಗಾರದ ಉಂಗುರ ಹಾಗೂ ನಗದನ್ನು ಬೆದರಿಸಿ ಕಸಿದುಕೊಂಡು ಹೋಗಿದ್ದಾರೆ. ಇವುಗಳು ಒಟ್ಟು ಮೌಲ್ಯ 2.92 ಲಕ್ಷ ಎಂದು ಅಂದಾಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

