ಶಿವಮೊಗ್ಗ

ಮಕ್ಕಳಿಗೆ ಸಾಹಸ ಪ್ರಜ್ಞೆ ಮೂಡಿಸಿ

Published On :

ಶಿವಮೊಗ್ಗ: ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸಾಹಸ ಪ್ರಜ್ಞೆ ಮೂಡಿಸುವುದು ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್‌ನ ಆಫ್ ಇಂಡಿಯಾದ ರಾಜ್ಯ ಘಟಕದ ನಿರ್ದೇಶಕ ಜಿ. ವಿಜಯಕುಮಾರ್ ಹೇಳಿದರು.
ನಗರದ ಯೂತ್ ಹಾಸ್ಟೆಲ್ ಹಾಗೂ ತರುಣೋಧಯ ಘಟಕ ಆಶ್ರಯದಲ್ಲಿ ಯೂತ್ ಹಾಸ್ಟೆಲ್‌ನ 16 ವಿದ್ಯಾರ್ಥಿಗಳಿಗೆ ಹಿಮಾಲಯದ ಅತ್ಯಂತ ಸುಂದರ ಹಾಗೂ ಕಷ್ಟಕರವಾದ ಸರ್‌ಕ್ಕುಂಡಿ ಪಾಸ್‌ಗೆ 11 ದಿನದ ಚಾರಣಕ್ಕೆ ಬೀಳ್ಕೊಡುಗೆ ನೀಡಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಕಂಪ್ಯೂಟರ್ ಹಾಗೂ ಮೊಬೈಲ್‌ಗಳಿಗೆ ಮಾರುಹೋಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯೂತ್ ಹಾಸ್ಟೆಲ್‌ನಿಂದ ಪ್ರತಿವರ್ಷ ಹಿಮಾಲಯದ ಕಣಿವೆಗಳಲ್ಲಿ ನಡೆಯುತ್ತಿರುವ ಪ್ರಕೃತಿ ಅಧ್ಯಯನ ಶಿಬಿರ ಚಾರಣಗಳಿಗೆ ಮಕ್ಕಳನ್ನು ಕಳುಹಿಸುವುದರಿಂದ ಬುದ್ದಿಮಟ್ಟ ಮತ್ತು ಇತರೆ ರಾಜ್ಯದ ಮಕ್ಕಳೊಂದಿಗೆ ಸಂಪರ್ಕ ಹೊಂದುವುದರಿಂದ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು. ಇದೇ ವೇಳ ಶಿವಮೊಗ್ಗದ ಯೂತ್ ಹಾಸ್ಟೆಲ್‌ನ ಅಧ್ಯಕ್ಷ ದಯಾನಂದ್, ಮನುಕುಮಾರ್, ಹರಿಶ್ ಪಂಡಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.