ಯತಿ ಅಮರೇಶ್ವರರಿಗೆ ಹಿರೇಮಠದಲ್ಲಿ ಪಟ್ಟಾಭಿಷೇಕ
ಸೊರಬ: ಅಷ್ಟಾಂಗ ಯೋಗ, ಶಿವಯೋಗದಲ್ಲಿ ಸಾಧಕರಾದ, ವೀರಶೈವ ಸಿದ್ಧಾಂತದ ಸಮನ್ವಯ ಮಾರ್ಗಗಳೊಂದಿಗೆ ಪರಿಸರ ಸಂರಕ್ಷಣೆ, ಸಹಜ ಕೃಷಿ, ಭಾರತೀಯ ಸಂಸ್ಕೃತಿಯ, ಸಮಾಜದ ಪರಿವರ್ತಕರೆಂದೆ ಹೆಸರಾದ ಯುವ ಯತಿ ಅಮರೇಶ್ವರರಿಗೆ ಗುರುವಾರ ಜಡೆ ಗ್ರಾಮದ ಹಿರೇಮಠದಲ್ಲಿ ಪಟ್ಟಾಭಿಷೇಕ ನಡೆಯಿತು.
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಜಡೆಯ ಹಿರಿಯ ಗುರುಗಳಾದ ಮೌನತಪಸ್ವಿ ಶಾಂತಲಿಂಗ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಹಾಗೂ ಆಚಾರ್ಯರ ಸಮ್ಮುಖದಲ್ಲಿ ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯರು ಪಟ್ಟಾಭಿಷೇಕದೊಂದಿಗೆ ಪಂಚಮುದ್ರಾ, ಆಸನ, ದಂಡ, ಕಮಂಡಲ ಸಹಿತ ಯುವ ಯತಿಗಳಿಗೆ ಘನಬಸವ ಅಮರೇಶ್ವರ ಶಿವಾಚಾರ್ಯ ಶ್ರೀಗಳೆಂದು ನಾಮಾಭಿದಾನ ಪ್ರದಾನ ಮಾಡಿದರು.
ನಂತರ ಆಗಮಿಕರಿಂದ ಧಾರ್ಮಿಕ ವಿಧಿ, ವಿಧಾನಗಳು ನಡೆದವು, ಶ್ರೀಗಳ ಪುರ ಪಲ್ಲಕ್ಕಿ ಮೆರವಣಿಗೆಯಲ್ಲಿ ತುಮಕೂರು ಚಿಕ್ನಹಳ್ಳಿ ಶಿವರಾಜ್ ತಂಡದವರಿಂದ ವೀರಭದ್ರ ಕುಣಿತ, ಶಿಕಾರಿಪುರ ಶರಾವತಿ ಯುವತಿ ಮಂಡಳಿಯ ದಾಕ್ಷಾಯಣಿ ತಂಡದವರಿಂದ ಡೊಳ್ಳು ಕುಣಿತ, ಹಿರೇಕೆರೂರು ಲಿಂಗದೇವರಕೊಪ್ಪದ ವೀರಭದ್ರ ಪುರವಂತಿಕೆ ಕಲಾ ಸಂಘದ ವೀರಭದ್ರಗೌಡ ತಂಡದವರಿಂದ ಪುರವಂತಿಕೆ, ಸಿರ್ಸಿ ಮಧುರವಳ್ಳಿ ಲಕ್ಕಿಬಾಯ್ಸ್ನ ಚಾಮರಾಜ್ ವಿ.ನಾಯ್ಕ್ ತಂಡದವರ ಜಾಂಝ್, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಎ. ಅವಲಮೂರ್ತಿ ಗೌರಿಬಿದನೂರು ತಂಡದವರ ನಾದಸ್ವಾರ ಗಮನ ಸೆಳೆಯಿತು.
ಪೀಠಾರೋಹಣ ಸಮಾರಂಭದಲ್ಲಿ ಮೌನತಪಸ್ವಿ ಶಾಂತಲಿಂಗ ಶ್ರೀಗಳು, ಗೊಗ್ಗೆಹಳ್ಳಿ ಸಂಗಮೇಶ್ವರ ಶ್ರೀಗಳು, ರಾಜ್ಯದ ಅನೇಕ ವೀರಶೈವ ಮಠದ ಹಾಗೂ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ನ ಎಲ್ಲ ಪೂಜ್ಯಪಾದರು, ವೀರಶೈವ ಸಮಾಜದ ಗಣ್ಯರು ಇದ್ದರು.
ಜಡೆ ಸಂಸ್ಥಾನ ಮಠದ ಡಾ.ಮಹಾಂತಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ಹಾವೇರಿ ಕಲಾವಿದ ಕೆ.ಆರ್. ಹಿರೇಮಠ್ ಸಂಗಡಿಗರಿಂದ ಚಹಾದ ಜೋಡಿ ಚೂಡದ್ಹಂಗ ಪ್ರಹಸನ ನಡೆಯಿತು. ಪಟ್ಟಾಭಷೇಕ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆ, ತಾಲೂಕಿನ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

