ಶಿವಮೊಗ್ಗ

ಕೇಂದ್ರೀಯ ಪ್ರವೇಶ ನೀತಿ ಜಾರಿಗೆ ಆಗ್ರಹ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮೇ 22
ಡೊನೇಷನ್ ಹಾವಳಿ ತಡೆಗೆ ಹಾಗೂ ಕೇಂದ್ರೀಯ ಪ್ರವೇಶ ನೀತಿ ಜಾರಿಗೊಳಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಪ್ರಬಲ ಕಾನೂನು ರೂಪಿಸಲು ಮತ್ತು ಕಾನೂನು ಅನುಷ್ಠಾನಗೊಳಿಸಲು ಹಾಗೂ ಶಿಕ್ಷಣ ಕ್ಷೇತ್ರದ ಇನ್ನೂ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಂಘಟನೆ ಹೋರಾಟಕ್ಕಿಳಿದಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ತಿಳಿಸಿದ್ದಾರೆ.
ಪರಿಷತ್ ಆಕ್ರೋಶ: ಇಂದು ಶಿಕ್ಷಣ ಕ್ಷೇತ್ರ ವ್ಯಾಪಾರದ ಮಾರುಕಟ್ಟೆಯಾಗಿದ್ದು, ಶಿಕ್ಷಣವು  ಬಿಕರಿಗೆ ಸಿಗುವ ವಸ್ತುವಾಗಿದೆ. ಸಮಾಜಕ್ಕೆ ಭದ್ರ ಅಡಿಪಾಯ ಹಾಕಬೇಕಾದ ಕ್ಷೇತ್ರವೇ ಇಂದು ಮೌಲ್ಯಗಳ ಅಧಃಪತನ ಅನೈತಿಕತೆ ಸೇರಿದಂತೆ ಮುಂತಾದ ಸಮಸ್ಯೆಗಳಿಂದ ನರಳುತ್ತಿದೆ ಎಂದು ಪರಿಷತ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಮುಖ ಬೇಡಿಕೆಗಳು
1. ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಪರೀತ ಡೊನೇಷನ್ ಪಡೆದು ಪ್ರವೇಶ ನೀಡಲಾಗುತ್ತಿದೆ. ಈ ಸಂಬಂಧಿಸಿದಂತೆ ಅನಿಯಂತ್ರಿತವಾಗಿ ಶಿಕ್ಷಣದ ವ್ಯಾಪಾರೀಕರಣ, ಸೀಟುಗಳು ಮಾರಾಟ ನಡೆಯುತ್ತಿದೆ. ಇದಕ್ಕೆ ಕಠಿಣ ಕಾನೂನನ್ನು ಜಾರಿಗೊಳಿಸುವ ಮೂಲಕ ಡೋನೆಷನ್‌ಗೆ ನಿಯಂತ್ರಣ ಹಾಕಬೇಕು.
2. ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಪ್ರತಿಯೊಂದು ಹಂತದಲ್ಲಿಯೂ ರೋಸ್ಟರ್ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.
3. ರಾಜ್ಯದಲ್ಲಿ ಡೊನೇಷನ್ ಪಿಡುಗಿನಂತೆಯೇ ಟ್ಯೂಷನ್ ಹಾವಳಿ ಜಾಸ್ತಿಯಾಗಿದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರೂ ಸಹ ಟ್ಯೂಷನ್ ಮೂಲಕ ಹಣಗಳಿಸುವ ಉದ್ಯಮವನ್ನು ನಡೆಸುತ್ತಿದ್ದಾರೆ. ಈ ಕುರಿತು ವಿದ್ಯಾರ್ಥಿಗಳ ಶೋಷಣೆ ತಪ್ಪಿಸಬೇಕು ಮತ್ತು ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು.
4. ಪಠ್ಯಪುಸ್ತಕಗಳು, ಯೂನಿಫಾರ್ಮ್, ಇತರೆ ಶೈಕ್ಷಣಿಕ ಸಾಮಾಗ್ರಿಗಳನ್ನು ನಮ್ಮಲ್ಲಿಯೇ ಕೊಂಡುಕೊಳ್ಳಬೇಕೆಂದು ಕಡ್ಡಾಯಗೊಳಿಸಬಾರದು.
5. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು.
6. ಡಿಎಡ್, ಬಿಎಡ್, ಕಾಲೇಜುಗಳಲ್ಲಿ ಸಾಮೂಹಿಕ ನಕಲು ತಡೆಗೆ, ಶಿಕ್ಷಣದ ಗುಣಮಟ್ಟದ ಕಡೆಗೆ ಗಮನ ನೀಡಬೇಕು.
7. ಕಡ್ಡಾಯ ಶಿಕ್ಷಣ ಮಸೂದೆಯನ್ನು ಜಾರಿಗೊಳಿಸಬೇಕು.
8. ಬಡ-ಪ್ರತಿಭಾವಂತ ವಿದ್ಯಾರ್ಥಿಗಳೂ ಕೂಡ ಉತ್ತಮ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ರಾಜ್ಯದಲ್ಲಿನ  ಕೌನ್ಸೆಲಿಂಗ್ಮೂಲಕ ಸೀಟು ಹಂಚಿಕೆ ಮಾದರಿಯಲ್ಲಿ ಕೇಂದ್ರಿಯ ಪ್ರವೇಶ ನೀತಿಯನ್ನು ಜಾರಿಗೊಳಿಸಬೇಕು. ಈ ಕುರಿತು ಕಾನೂನು ರೂಪಿಸಬೇಕು. ಆ ಮೂಲಕ ವಿದ್ಯಾರ್ಥಿ - ಪೋಷಕರ ಶೋಷಣೆಯನ್ನು ತಪ್ಪಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ರಮೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.