ಶಿವಮೊಗ್ಗ

ವಾಣಿಜ್ಯ ಮಳಿಗೆ ಹರಾಜು ವಿರೋಧಿಸಿ ಪ್ರತಿಭಟನೆ

Published On :

ಮೊಳಕಾಲ್ಮುರು: ತಾಲೂಕಿನ ರಾಂಪುರದ ಮಧ್ಯ ಭಾಗದಲ್ಲಿ ಪ್ರತಿವಾರ ಸಂತೆ ನಡೆಯುತ್ತಿದ್ದು, ಬಸ್ ನಿಲ್ದಾಣದ 20 ಕ್ಕೂ ಹೆಚ್ಚು ಮಳಿಗೆಗಳ ಹರಾಜು ಪ್ರಕ್ರಿಯೆ ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
 ಗ್ರಾಪಂನಿಂದ ಇಲ್ಲಿನ ಬಸ್ ನಿಲ್ದಾಣದ ಮಳಿಗೆಗಳು ಹಾಗೂ ಸಂತೆ ಮೈದಾನ ಹರಾಜು ಪ್ರಕ್ರಿಯೆಗೆ ಸಂಬಂಧಿಸಿ ಬಸ್ ನಿಲ್ದಾಣದಲ್ಲಿ 20 ಕ್ಕೂ ಹೆಚ್ಚು ಮಳಿಗೆ ನಿರ್ಮಿಸಿ 3-4 ವರ್ಷಗಳು ಕಳೆದು ಸೇವೆಯಿಂದ ದೂರವಾಗಿವೆ. ಹರಾಜು ಪ್ರಕ್ರಿಯೆ ನಡೆದು ವರ್ಷಗಳೇ ಕಳೆದರೂ ಸೇವೆ ಕಲ್ಪಿಸಿಕೊಟ್ಟಿಲ್ಲ. ವಾಣಿಜ್ಯ ಮಳಿಗೆಗಳು ಠೇವಣಿ ಹಣ ಕಟ್ಟಿದ ಲೆಕ್ಕ ಪತ್ರ ಮತ್ತು ಬಾಡಿಗೆ ಹಣದ ಲೆಕ್ಕ ಕೊಡಬೇಕು. ಜೊತೆಗೆ ಸಂತೆ ಮೈದಾನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸದೇ ಏಕಾಏಕಿ ಪಂಚಾಯ್ತಿ ಅಧಿಕಾರಿಗಳು ಹರಾಜು ಪ್ರಕ್ರಿಯೆಗೆ ಮುಂದಾಗಿರುವುದು ಸೂಕ್ತವಲ್ಲ. ಈ ಹಿಂದೆ ಮಳಿಗೆಗಳಿಗೆ ತಲಾ 50 ಸಾವಿರ ಠೇವಣಿ ಎಂದು ನಿಗದಿಪಡಿಸಿದ್ದು, ಈಗಾ ಏಕಾಏಕಿ 75 ಸಾವಿರಕ್ಕೆ ಹೆಚ್ಚಿಗೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ವಿರೋಧಿಸಿ ಹರಾಜು ಪ್ರಕ್ರಿಯೆಯನ್ನು ತಡೆ ಹಿಡಿದರು.
 ಹರಾಜು ಪ್ರಕ್ರಿಯೆ ಸದ್ಯಕ್ಕೆ ಮುಂದೂಡಲಾಗಿದ್ದು, ಇದೇ ತಿಂಗಳ ಅಂತ್ಯದೊಳಗೆ ಪುನಃ ಹರಾಜು ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು. ಹಿಂದೆ ನಡೆದ ಮಳಿಗೆಗಳ ಹರಾಜು ಪ್ರಕ್ರಿಯೆ ಪಂಚಾಯ್ತಿ ಅಧ್ಯಕ್ಷ ಹಾಗೂ ಸದಸ್ಯರ ಸರ್ವಾನುಮತದ ತೀರ್ಮಾನದಂತೆ 50 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ನಂತರ 75 ಸಾವಿರ ಎಂದು ನಿಗದಿಪಡಿಸಿದ್ದು, ಇದನ್ನು ಹರಾಜುದಾರರು ವಿರೋಧಿಸಿದ್ದಾರೆ. ಈ ಸಂಬಂಧ ಪಂಚಾಯ್ತಿ ಸಭೆ ಕರೆದು ಚರ್ಚಿಸಿ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ತಿಳಿಸಿದ್ದಾರೆ.
 ದಸಂಸ ಮುಖಂಡ ಪರಮೇಶ್ವರಪ್ಪ, ರಾಮಕೃಷ್ಣ, ನಾಗರಾಜ ಹಾಗೂ ಹರಾಜುದಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.