ಮೂರು ಸೈಬರ್ ಕೇಂದ್ರಗಳ ಪ್ರಾಂಚೈಸಿ ರದ್ದು
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 29
ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹಿಸುತ್ತಿದ್ದ ಆರೋಪದ ಮೇರೆಗೆ ಪಡಿತರ ಚೀಟಿಗೆ ಅರ್ಜಿ, ಫೋಟೋ, ಬಯೋವುಟ್ರಿಕ್ ವಿವರ ಸಂಗ್ರಹಿಸಲು ಅನುಮತಿ ಪಡೆದಿದ್ದ ಶಿವಮೊಗ್ಗ ನಗರದ ಮೂರು ಸೈಬರ್ ಕೇಂದ್ರಗಳ ಪ್ರಾಂಚೈಸಿಯನ್ನು ಆಹಾರ ಇಲಾಖೆ ರದ್ದು ಮಾಡಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಹಾಗೂ 2010ರ ಹಿಂದಿನ ಶಾಶ್ವತ ಪಡಿತರ ಚೀಟಿಗಳ ನವೀಕರಣಕ್ಕಾಗಿ ಬಯೋ ಮೆಟ್ರಿಕ್ ವಿವರ ಸಂಗ್ರಹಿಸಲು ಆಹಾರ ಇಲಾಖೆಯು ನಿರ್ದಿಷ್ಟ ಸೈಬರ್ ಕೇಂದ್ರಗಳಲ್ಲಿ ತನ್ನ ಪ್ರಾಂಚೈಸಿ ತೆರೆದಿದೆ. ಈ ಕೇಂದ್ರಗಳ ಮಾಲೀಕರಿಗೆ ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನೀಡಲಾಗಿದೆ. ಈ ಕೇಂದ್ರಗಳಲ್ಲಿ ಮಾತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ಶಾಶ್ವತ ಪಡಿತರ ಚೀಟಿಗೆ ಫೋಟೋ, ಬಯೋವುಟ್ರಿಕ್ ವಿವರಗಳನ್ನು ನಾಗರಿಕರಿಂದ ಸಂಗ್ರಹಿಸಲಾಗುತ್ತಿದೆ. ಸರ್ಕಾರ ಈ ಪ್ರಕ್ರಿಯೆ ನಡೆಸಿದ್ದಕ್ಕಾಗಿ 50 ರುಪಾಯಿ ಶುಲ್ಕ ನಿಗದಿ ಮಾಡಿತ್ತು. ಆದರೆ ಕೆಲವು ಪ್ರಾಂಚೈಸಿ ಕೇಂದ್ರಗಳ ಮಾಲೀಕರು ಸರ್ಕಾರ ನಿಗಿದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನು ನಾಗರಿಕರಿಂದ ಸಂಗ್ರಹಿಸುತ್ತಿದ್ದರು. ವಿವರಗಳನ್ನು ನಾಗರಿಕರಿಂದ ಸಂಗ್ರಹಿಸಲಾಗುತ್ತಿದೆ. ಸರ್ಕಾರ ಈ ಪ್ರಕ್ರಿಯೆ ನಡೆಸಿದ್ದಕ್ಕಾಗಿ 50 ರುಪಾಯಿ ಶುಲ್ಕ ನಿಗದಿ ಮಾಡಿತ್ತು.
ಆದರೆ ಕೆಲವು ಪ್ರಾಂಚೈಸಿ ಕೇಂದ್ರಗಳ ಮಾಲೀಕರು ಸರ್ಕಾರ ನಿಗಿದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನು ನಾಗರಿಕರಿಂದ ಸಂಗ್ರಹಿಸುತ್ತಿದ್ದರು.
ಪಾಸ್ವರ್ಡ್ ಲಾಕ್: ಈ ಸಂಬಂಧ ಸಾರ್ವಜನಿಕರು ಇಲಾಖೆಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿನ ಮೂರು ಕೇಂದ್ರಗಳಿಗೆ ನೀಡಲಾಗಿದ್ದ ಅನುಮತಿಯನ್ನು ಆಹಾರ ಇಲಾಖೆ ರದ್ದುಪಡಿಸಿದೆ. ಈ ಕೇಂದ್ರಗಳಿಗೆ ನೀಡಲಾಗಿದ್ದ ಪಾಸ್ವರ್ಡ್ನ್ನು ಲಾಕ್ ಮಾಡಲಾಗಿದ್ದು, ಇನ್ನು ಮುಂದೆ ಈ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುವುದಿಲ್ಲ.
ಸದ್ಯ ಶಿವಮೊಗ್ಗದಲ್ಲಿ 26, ಭದ್ರಾವತಿಯಲ್ಲಿ 9, ಸಾಗರದಲ್ಲಿ 5, ಹೊಸನಗರದಲ್ಲಿ 1, ಶಿಕಾರಿಪುರದಲ್ಲಿ 6, ಸೊರಬದಲ್ಲಿ 3 ಹಾಗೂ ತೀರ್ಥಹಳ್ಳಿಯ 1 ಕೇಂದ್ರಗಳಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಾಗೂ ಶಾಶ್ವತ ಪಡಿತರ ಚೀಟಿಗೆ ಬಯೋ ಮೆಟ್ರಿಕ್ ವಿವರ ಸಂಗ್ರಹಿಸಲಾಗುತ್ತಿದೆ.
ಹೆಚ್ಚಿನ ಶುಲ್ಕ ಸಂಗ್ರಹಿಸಬಾರದೆಂದು ಮುಂಚಿತವಾಗಿ ಕೇಂದ್ರಗಳಿಗೆ ಸೂಚಿಸಲಾಗಿತ್ತಾದರೂ ಇಲಾಖೆಯ ಸೂಚನೆಯನ್ನು ಕಿವಿಗೆ ಹಾಕಿಕೊಳ್ಳದೇ ಜನರಿಂದ ಹೆಚ್ಚಿನ ಹಣ ಕೀಳುತ್ತಿದ್ದರು.
ಕೆಲವು ಕೇಂದ್ರಗಳಲ್ಲಿ 100 ವರೆಗೂ ಸಂಗ್ರಹಿಸಲಾಗುತ್ತಿತ್ತು. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಉಳಿದ ಕೇಂದ್ರಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದೆ.
1ಕ್ಕೆ ಕೆಜಿ ಅಕ್ಕಿ ಫಲಾನುಭವಿಗಳು
ಶಿವಮೊಗ್ಗ: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿದಾರರಿಗೆ ಜೂನ್ನಿಂದ ಕೆಜಿ ಅಕ್ಕಿಗೆ 1 ದರದಲ್ಲಿ ಮಾಸಿಕ 30 ಕೆಜಿ ಅಕ್ಕಿ ನೀಡುವುದಾಗಿ ಹೊಸ ಸರ್ಕಾರ ಘೋಷಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಪೂರ್ವಭಾವಿ ಸಿದ್ಧತೆ ಆರಂಭಿಸಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಬಂದರೆ ಜಿಲ್ಲೆಯಲ್ಲಿ 2,69,648 ಬಿಪಿಎಲ್ ಪಡಿತರ ಚೀಟಿದಾರರು ಇದರ ಲಾಭ ಪಡೆಯುವ ಅಂದಾಜಿದೆ. ಬುಧವಾರದ ವರೆಗೆ ಜಿಲ್ಲೆಯಲ್ಲಿ 4,26,276 ಪಡಿತರ ಚೀಟಿದಾರರಿದ್ದಾರೆ. ಇವರ ಪೈಕಿ 38683 ಅಂತ್ಯೋದಯ, 1,17,945 ಎಪಿಎಲ್ ಕಾರ್ಡ್ ದಾರರಿದ್ದಾರೆ. ಉಳಿದವರು ಬಿಪಿಎಲ್ ಕಾರ್ಡುದಾರರು.
ಸರ್ಕಾರದ ಘೋಷಣೆಯಂತೆ ಪ್ರತಿ ಬಿಪಿಎಲ್ ಕಾರ್ಡ್ಗೆ 30 ಕೆಜಿ ಅಕ್ಕಿ ನೀಡುವುದಾದರೆ ಜಿಲ್ಲೆಗೆ ಮಾಸಿಕ 80,89,440 ಕೆಜಿ ಅಕ್ಕಿ ಬೇಕು ಎಂಬುದು ಆಹಾರ ಇಲಾಖೆ ಅಂಕಿಅಂಶ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

