ಶಿವಮೊಗ್ಗ

ವಾರಸುದಾರರ ಪತ್ತೆಗೆ ನೆರವು ಕೋರಿಕೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಮೇ 29
ನಗರದಲ್ಲಿ ವಿವಿಧ ಕಾರಣಗಳಿಂದಾಗಿ ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟಿರುವ ಐವರು ವ್ಯಕ್ತಿಗಳ ವಾರಸುದಾರರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಏಪ್ರಿಲ್ 17ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಗೋಪಾಲಪ್ಪ ಎಂಬ ವ್ಯಕ್ತಿಯು ಅನಾರೋಗ್ಯದಿಂದ ನಿಧನರಾಗಿರುತ್ತಾರೆ. ಮೃತ ವ್ಯಕ್ತಿಯು ಎಣೆಗೆಂಪು ಬಣ್ಣ, ಉದ್ದನೆ ಮುಖ, ಬಿಳಿ ಷರಟು ಹಾಗೂ ಹಳದಿ ಟವಲ್ ಇದೆ.
ಮಾರ್ಚ್ 27ರಂದು ನ್ಯೂಮೇನಿಯಾ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆಂದು ದಾಖಲಾಗಿದ್ದ ಕುಮಾರ ಕುಬೇರಪ್ಪ, 50 ವರ್ಷದ ವ್ಯಕ್ತಿ ವಾಸ ಚನ್ನಗಿರಿ ಎಂದು ತಿಳಿಸಿದ್ದು, ಇವರು ಏಪ್ರಿಲ್ 8ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುತ್ತಾರೆ. ಮೃತ ವ್ಯಕ್ತಿಯು ಸಾಧಾರಣ ಶರೀರ, ಎಣ್ಣೆಗೆಂಪು ಬಣ್ಣ, ಉದ್ದನೆಯ ಮುಖ, ದೇಹದ ಮೇಲೆ ಕಾಫಿ ಕಲರ್‌ಪ್ಯಾಂಟ್ ಇರುತ್ತದೆ.
ಏಪ್ರಿಲ್ 11ರಂದು ಬೆಳಿಗ್ಗೆ 8.40ಕ್ಕೆ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಯಾರೋ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದು, ಇವರು ಏಪ್ರಿಲ್ 22ರಂದು ಬೆಳಿಗ್ಗೆ 6ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುತ್ತಾರೆ. ಇವರು ಅನಾಮಧೇಯ ವ್ಯಕ್ತಿಯಾಗಿದ್ದು, ಹೆಸರು, ವಿಳಾಸ ಮತ್ತು ವಾರಸುದಾರರು ಪತ್ತೆಯಾಗಿರುವುದಿಲ್ಲ.
ಏಪ್ರಿಲ್ 17ರಂದು ರಾಮಣ್ಣ ಬಿನ್ ಬಾಲಯ್ಯ, 55 ವರ್ಷ, ವಾಸ ಚಿಕ್ಕಣ್ಣ ದೇವಸ್ಥಾನದ ಹತ್ತಿರ, ಕುಂದಾಪುರ ಎಂದು ಹೆಸರು ನೀಡಿ ಚಿಕಿತ್ಸೆಗೆಂದು ದಾಖಲಾಗಿದ್ದು, ಇವರು ಏಪ್ರಿಲ್ 26ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೇ 18ರಂದು ಅನಾಮಧೇಯ ಪುರುಷನೊಬ್ಬ ಮಿಳಘಟ್ಟ ಕ್ರಾಸ್ ಆಟೋ ಸ್ಟ್ಯಾಂಡ್ ಬಳಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ. ದುಂಡನೆಯ ಮುಖ, ಎಣ್ಣೆಗೆಂಪು ಬಣ್ಣ, ದೇಹದ ಮೇಲೆ ಬಿಳಿ ಹಾಫ್ ಶರ್ಟ್. ನಶ್ಯ ಕಲರ್‌ಪ್ಯಾಂಟ್ ಇರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.