ಶಿವಮೊಗ್ಗ

ಆಧಾರ್ ನೋಂದಣಿ ಪ್ರಕ್ರಿಯೆ ಪ್ರಾರಂಭ

Published On :

ಜೋಗ್‌ಫಾಲ್ಸ್: ಇಲ್ಲಿನ ಜೋಗ್ ಕಾರ್ಗಲ್ ಪಪಂನಲ್ಲಿ ಪಪಂ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದಿನಂಪ್ರತಿ 200 ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಮಾರನೇ ದಿನ ಗುರುತಿನ ಪತ್ರ ಮತ್ತು ವಿಳಾಸ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಸ್ವಾಮಿ, ವೆಂಕಟೇಶ್, ಮಂಜು ಮೊದಲಾದವರು ಹಾಜರಿದ್ದರು.
ಅರ್ಜಿ ಆಹ್ವಾನ
ಚಿಕ್ಕಮಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 2013-14 ನೇ ಸಾಲಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸರ್ಕಾರೇತರ ಸಂಘ ಸಂಸ್ಥೆಗಳಿಂದ (ಎನ್.ಜಿ.ಓ) ಅರ್ಜಿ ಆಹ್ವಾನಿಸಲಾಗಿದೆ.

ನೀರು ಪೂರೈಕೆ: ಕೋಟ್ಯಂತರ ರು. ಲೂಟಿ
ಕನ್ನಡಪ್ರಭ ವಾರ್ತೆ, ಮೂಡಿಗೆರೆ,  ಮೇ 29
ತಾಲೂಕಿನ ಕಳಸ ಮತ್ತು ಬಾಳೂರು ಹೋಬಳಿ ಹೊರತುಪಡಿಸಿ ಉಳಿದ 15ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೋಟ್ಯಂತರ ರು. ಲೂಟಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ಅಮರನಾಥ್ ಆರೋಪಿಸಿದರು.  
ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಿಂದ 2012ರವರೆಗೆ ಗ್ರಾಪಂಗಳಲ್ಲಿ ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಮೋಟರ್ ಹಾಗೂ ಕೈಪಂಪು ರಿಪೇರಿ ಹೆಸರಲ್ಲಿ ನಕಲಿ ಬಿಲ್ ಹಾಗೂ ಕೋಟೇಶನ್‌ಗಳನ್ನು ಸೃಷ್ಟಿ ಮಾಡಿ, ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ಅವರು ಆರೋಪಿಸಿದರು.
ತೆರಿಗೆ ವಂಚನೆ: ದುರಸ್ತಿ ಕಾರ್ಯಗಳಿಗೆಂದು ನೀಡಿದ ಎಲ್ಲಾ ಬಿಲ್‌ಗಳಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡಿದ ಬಗ್ಗೆ ಮಾಹಿತಿ ಇರುವುದಿಲ್ಲ. ಲಕ್ಷಾಂತರ ರು. ಬಿಲ್ ಪಾವತಿಸಿದ್ದರೂ, ಯಾವುದೇ ಬಿಲ್‌ನಲ್ಲಿ ಟಿನ್ ಸಂಖ್ಯೆ ಕಂಡುಬರುತ್ತಿಲ್ಲ ಎಂದು ದೂರಿದರು.
ವಿನಾಯಕ ಮೋಟರ್ ಡ್ರೈವಿಂಗ್ ವರ್ಕ್ಸ್, ವಿನ್‌ಎಲೆಕ್ಟ್ರಿಕಲ್ಸ್ ಹಾಗೂ ವಿಶ್ವಾಸ್ ಮೋಟರ್ ರಿವೈಂಡಿಂಗ್ ಹೆಸರಿನಲ್ಲಿ ಕೊಟೇಶನ್ ನೀಡಲಾಗಿದ್ದು, ಈ ಮೂರು ಸಂಸ್ಥೆಗಳನ್ನು ಹೊರತುಪಡಿಸಿ, ಬೇರಾವ ಸಂಸ್ಥೆಯೂ ಕೂಡ ಯಾವುದೇ ಗ್ರಾಪಂಗಳಿಗೆ ಕೊಟೇಶನ್ ನೀಡದಿರುವುದು ಅನುಮಾನಕ್ಕೆ ಆಸ್ಪದವಾಗಿದೆ.
ಅನುಮಾನಕ್ಕೆ ಆಸ್ಪದ: ಅಲ್ಲದೇ ಎಲ್ಲಾ ಟೆಂಡರ್‌ಗಳಲ್ಲಿ ಸಣ್ಣ ಮೊತ್ತದ ಹಣ ವ್ಯತ್ಯಾಸಗೊಳಿಸಿ ಇಡೀ ತಾಲೂಕಿನ ಎಲ್ಲಾ ಪಂಚಾಯಿತಿಗಳ ಮೋಟರ್ ರಿಪೇರಿ ಗುತ್ತಿಗೆಯನ್ನು ವಿನಾಯಕ ಮೋಟರ್ ವೈಂಡಿಂಗ್ ವರ್ಕ್ಸ್‌ಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾಮಗ್ರಿಗಳ ಖರೀದಿ ಹೆಸರಲ್ಲಿ ಮೂಡಿಗೆರೆ ನಗರದಲ್ಲಿ ಅಸ್ತಿತ್ವದಲ್ಲಿಲ್ಲದ ಅಂಗಡಿಗಳ ಹೆಸರುಗಳಲ್ಲಿ ಕೊಟೇಷನ್ ನೀಡಲಾಗಿದೆ ಎಂದು ಆರೋಪಿಸಿದರು.
ಕುಡಿಯುವ ನೀರಿನ ಅಭಾವ ಇರುವುದನ್ನು ಮನಗಂಡ ಸರ್ಕಾರ ಈ ಸಮಸ್ಯೆ ಪರಿಹಾರಕ್ಕಾಗಿ ಲಕ್ಷಾಂತರ ರೂ.  ಬಿಡುಗಡೆ ಮಾಡುತ್ತಿದ್ದರೆ ಇದನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.