ಶಿವಮೊಗ್ಗ

ಹೋರಿ ಬೆದರಿಸುವ ಸ್ಪರ್ಧೆ ನಿಷೇಧಿಸಿ

Published On :

ಶಿಕಾರಿಪುರ: ದೀಪಾವಳಿ ಹಬ್ಬ ಸಮಸ್ತ ಹಿಂದೂಗಳಿಗೆ ಬಹು ದೊಡ್ಡ ಹಬ್ಬವಾಗಿದ್ದು, ಹಬ್ಬದ ಸಂಭ್ರಮದಲ್ಲಿ ಹೋರಿ ಬೆದರಿಸುವ ಅಮಾನವೀಯ ಸ್ಪರ್ಧೆ ಮಾತ್ರ ಆಧುನಿಕ ಸಮಾಜದ ಅಣಕದಂತಿದೆ.
 ಶಿಕಾರಿಪುರ ಹಿಂದಿನಿಂದಲೂ  ದೀಪಾವಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಅತ್ಯಂತ ಪ್ರಸಿದ್ದವಾಗಿದ್ದು ಇಲ್ಲಿನ ಹೋರಿಗಳು ಎಲ್ಲೆಡೆ ಹೆಸರುವಾಸಿಯಾಗಿದೆ. ಈ ಹಿಂದೆ ಹೋರಿ ಬೆದರಿಸುವ ಸ್ಪರ್ದೆ ಕೇವಲ ಸಾಂಕೇತಿಕವಾಗಿ ಹಬ್ಬದ ಪ್ರತೀಕವಾಗಿದ್ದು ಇತ್ತೀಚಿನ ಕೆಲ ವರ್ಷದಲ್ಲಿ ಹೊರ ರಾಜ್ಯದಿಂದ ಲಕ್ಷಾಂತರ ಬೆಲೆ ತೆತ್ತು ಖರೀದಿಸಿದ ಹೋರಿ ವಿಶೇಷವಾಗಿ ಸ್ಪರ್ದೆಗಳಲ್ಲಿ ಬೆದರಿಸುವ ಖಯಾಲಿ ಹೆಚ್ಚಾಗತೊಡಗಿರುವುದು ಪ್ರಾಣಿ ಪ್ರಿಯರಲ್ಲಿ ಕಳವಳ ಉಂಟು ಮಾಡುತ್ತಿದೆ.
ಹೋರಿಗಳಿಗೆ ಹಿಂಸೆ: ಹೋರಿ ಬೆದರಿಸುವ ಸ್ಪರ್ಧೆ ಇದೀಗ ವಿಶೇಷ ಹಬ್ಬದ ನೆಪದಲ್ಲಿ ದೀಪಾವಳಿಯ ದಿನದಿಂದ ಆರಂಭವಾಗಿ ಕೆಲ ತಿಂಗಳ ಕಾಲ ನಡೆಯಲಿದ್ದು ಈ ಸ್ಪರ್ದೆಯಲ್ಲಿ ವಿಶೇಷವಾಗಿ ಖರೀದಿಸಿದ ಹೋರಿಯನು ಟಿವಿ,ಫ್ರಿಡ್ಜ್, ಡಿ.ವಿ.ಡಿ, ಮತ್ತಿತರ ಬಹುಮಾನ ಘೋಷಿಸಿ ಬೆದರಿಸುವ ಮೂಲಕ ಜಾನುವಾರುಗಳನು ಹಿಂಸಿಸಲಾಗುತ್ತಿದೆ.
 ಸ್ಪರ್ದೆಯಲ್ಲಿ ಕಾಲು ಮುರಿದುಕೊಳ್ಳುವ ಜತೆಗೆ ಹಲವು ರೀತಿಯ ಸಂಚಕಾರದಿಂದ ಹೋರಿಗಳ ಪ್ರಾಣಕ್ಕೆ ಕುತ್ತು ಬರುತ್ತಿರುವುದು ಸತ್ಯ. ಲಕ್ಷಾಂತರ ಹಣ ತೆತ್ತು ಸ್ಪರ್ದೆಯಲ್ಲಿ ಪ್ರಾಣಕ್ಕೆ ಎದುರಿದ ಸಂಚಕಾರದಿಂದ ಹೋರಿಗಳು ಕೆಲವೇ ಸಾವಿರಕ್ಕೆ ಕಸಾಯಿಖಾನೆಗೆ ಹೋಗುತ್ತಿರುವುದು ನಾಗರಿಕ ಸಮಾಜದ ಬಹು ದೊಡ್ಡ ಅಣಕವಾಗಿದೆ.
ಸ್ಪರ್ಧೆ ನಿಷೇಧಿಸಿ: ಈ ಬಗ್ಗೆ ಧಾರ್ಮಿಕ ಮುಖಂಡರು, ಪ್ರಜ್ಞಾವಂತರು, ಸಮಾಜದ ಮುಖಂಡರು, ಜನಪ್ರತಿನಿಧಿಗಳು ಚಿಂತಿಸಿ ಹೋರಿ ಬೆದರಿಸುವ ಸ್ಪರ್ಧೆಗೆ ಅಂತ್ಯ ಹಾಡಿ ಸ್ಪರ್ಧೆಯ ನೆಪದಲ್ಲಿ ಪ್ರಾಣಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುವ ಪ್ರಕ್ರಿಯೆಯನು ಸ್ಥಗಿತಗೊಳಿಸಬೇಕಾಗಿದೆ. ಪ್ರಸ್ತುತ ರಾಜ್ಯಾದ್ಯಾಂತ ಕಾಲುಬಾಯಿ ರೋಗ ವ್ಯಾಪಕವಾಗಿದ್ದು ಹೋರಿ ಬೆದರಿಸುವ ಸ್ಪರ್ದೆ ಸಂದರ್ಭದಲ್ಲಿ ಜಾನುವಾರುಗಳು ಬೆರೆತು ರೋಗ ಉಲ್ಭಣಿಸುವ ಅಪಾಯ ಹೆಚ್ಚಾಗಿದೆ.
ಕೂಡಲೇ ಜಿಲ್ಲಾಡಳಿತ,ಪೋಲಿಸ್ ಇಲಾಖೆ ಹೋರಿ ಬೆದರಿಸುವ ಸ್ಪರ್ದೆಯನು ಸಂಪೂರ್ಣವಾಗಿ ನಿಷೇಧಿಸುವ ದಿಟ್ಟ ಕ್ರಮವನು ಕೈಗೊಳ್ಳಬೇಕಾಗಿದೆ.
ಅಪಾಯಕಾರಿ ಸ್ಪರ್ಧೆ: ಹಬ್ಬದ ಹೆಸರಿನಲ್ಲಿ ಮೂಕ ಪ್ರಾಣಿಯ ರೋಧನೆಯ ಜತೆಗೆ ಜನಸಾಮಾನ್ಯರು ಹೋರಿ ಹಿಡಿಯುವ ಭರದಲ್ಲಿ ಕೈ ಕಾಲು ಪ್ರಾಣ ಹಾನಿಯನು ಅನುಭವಿಸಿದ ಹಲವು ಸಂದರ್ಭಗಳು ದಾಖಲಾಗಿದ್ದು ಇಂತಹ ಅಮಾನವೀಯ ಹಿಂಸೆಯ ಸ್ಪರ್ದೆಯನು ನಿಷೇಧಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಹಬ್ಬದ ನೆಪದಲ್ಲಿ ಹೋರಿ, ಜಾನುವಾರುಗಳ ಜತೆ ಹಲವು ಕುಟುಂಬಗಳು ಸಹ ಬೀದಿಪಾಲಾಗುವ ಅಪಾಯ ಕಟ್ಟಿಟ್ಟ ಬುತ್ತಿ.
 ಹೊರ ರಾಜ್ಯದಲ್ಲಿ ಜಲ್ಲಿಕಟ್ಟು ಹೆಸರಿನ ಹೋರಿ ಬೆದರಿಸುವ ಅಮಾನವೀಯ ಸ್ಪರ್ದೆಯನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು ಈ ಕ್ರಮ ರಾಜ್ಯದಲ್ಲಿಯೂ ಕೂಡಲೇ ಜಾರಿಯಾಗಬೇಕಾಗಿದೆ.
 ಈ ಕೂಡಲೇ ಸರ್ಕಾರ, ಜಿಲ್ಲಾಡಳಿತ, ಪೋಲಿಸ್ ಇಲಾಖೆ ಈ ಸ್ಪರ್ದೆಯನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ವಿಶ್ವ ಹಿಂದೂ ಪರಿಷತ್ನ ಉಪಾಧ್ಯಕ್ಷ ಎಸ್.ಎಂ ಪ್ರಕಾಶ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.