ಶಿವಮೊಗ್ಗ

ಜೋಗ ಕಾರಂಜಿ ಸ್ತಬ್ಧ: ಪ್ರವಾಸಿಗರಿಗೆ ನಿರಾಸೆ

Published On :

ಕ.ಪ್ರ.ವಾರ್ತೆ, ಜೋಗ್‌ಫಾಲ್ಸ್,  ನ.4
ದೀಪಾವಳಿ, ರಾಜ್ಯೋತ್ಸವ, ಭಾನುವಾರವು ಸೇರಿದಂತೆ ಕಳೆದ ನಾಲ್ಕು ದಿನಗಳಿಂದ ಸರ್ಕಾರಿ ಕಚೇರಿಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ ದೀಪಾವಳಿ ಹಬ್ಬಕ್ಕೆ ಆಗಮಿಸಿದ ಮಿತ್ರರು ಜೋಗ ಜಲಪಾತ ವೀಕ್ಷಿಸಲು ವಿವಿಧೆಡೆಯಿಂದ ನೂರಾರು ಮಂದಿ ಆಗಮಿಸಿದ್ದರು.
ಎರಡು ದಿನಗಳ ಹಿಂದೆ ಸತತವಾಗಿ ಮಳೆ ಸುರಿದ ಕಾರಣ ಈ ದಿನ ಜೋಗ ಜಲಪಾತ ಕೊಂಚ ಚೇತರಿಸಿಕೊಂಡು ಜನತೆಗೆ ಮುದ ನೀಡಿತಾದರೂ, ಜೋಗದ ಪ್ರಮುಖ ಆಕರ್ಷಣೆಯಾಗಿದ್ದ ಕಾರಂಜಿಯು ಕಳೆದೊಂದು ವಾರದಿಂದ ತಾಂತ್ರಿಕ ತೊಂದರೆಯಿಂದ ಸ್ತಬ್ಧಗೊಂಡ ಕಾರಣ, ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗುವ ಪರಿಸ್ಥಿತಿ ಕಂಡುಬಂದಿತು.
ಕಾರಂಜಿ ನೋಡಿದ ಪ್ರವಾಸಿಗರು ಬೇರೆಯವರಿಗೆ ವರ್ಣಿಸಿದ ವರ್ಣನೆಯಿಂದ ಕಾರಂಜಿ ನೋಡದ ಪ್ರವಾಸಿಗರು ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಕಾರಂಜಿ ಪ್ರಾರಂಭವಾದ ದಿನದಿಂದ ಒಂದಲ್ಲ ಒಂದು ದೋಷದಿಂದ ಆಗಾಗ ನಿಲುಗಡೆ ಆಗುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸಂಬಂಧಪಟ್ಟವರು ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಭಟ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.