ಪೊದಾರ್ ಶಾಲೆಯಲ್ಲಿ ದೀಪಾವಳಿ, ದಾಂಡಿ ಉತ್ಸವ
ಶಿವಮೊಗ್ಗ: ಒಡ್ಡಿನಕೊಪ್ಪದ ಪೊದಾರ್ ಶಾಲೆಯಲ್ಲಿ ದೀಪಾವಳಿ ಮತ್ತು ದಾಂಡಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ಸಮುದಾಯವು ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಬೇಕೆಂಬ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು. ದೀಪಾವಳಿಯ ಇತಿಹಾಸದಲ್ಲಿ ಪಟಾಕಿ ಹಚ್ಚುವ ಪುರಾವೆ ಎಲ್ಲಿಯೂ ಇಲ್ಲ. ಇದರ ಬಗ್ಗೆ ಧರ್ಮಗ್ರಂಥಗಳಲ್ಲಿಯೂ ಉಲ್ಲೇಖವಿಲ್ಲ. ಕೇವಲ ರಾಜ ಮಹಾರಾಜರು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಡಿಮದ್ದುಗಳನ್ನು ಹಚ್ಚುತ್ತಿದ್ದರು. ಇದು ಆ ಕಾಲದ ಸಂವಹನ ಮಾಧ್ಯಮವಾಗಿತ್ತು. ಆದರೆ, ಕಳೆದ 40 ವರ್ಷಗಳಿಂದ ಪ್ರತಿ ಮನೆಯಲ್ಲಿಯೂ ಪಟಾಕಿ ಹಚ್ಚುವ ಸಂಪ್ರದಾಯವನ್ನು ನಾವು ಹೊಸದಾಗಿ ಪ್ರಾರಂಭಿಸಿಕೊಂಡಿದ್ದೇವೆ.
ಪ್ರಮಾಣ: ಪಟಾಕಿ ಸುಡುವುದರಿಂದ ಸಿಗುವ ಅಲ್ಪ ಸಂತೋಷದ ಹಿಂದೆ ಭೀಕರ ಪರಿಣಾಮ ಆಡಗಿರತ್ತದೆ. ಇದು ಎಷ್ಟೋ ಜನರ ದೃಷ್ಟಿ ಹೀನತೆಗೆ ಕಾರಣವಾಗಿದೆ ಹಾಗೂ ವಾಯುಮಾಲಿನ್ಯಕ್ಕೆ ನೇರ ಹೊಣೆಯಾಗುತ್ತದೆ.
ಪಟಾಕಿಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅರಿವು ಮೂಡಿಸಲು ಬೊಂಬೆಯಾಟವನ್ನು ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ಪಟಾಕಿ ಸುಡುವುದರ ವಿರುದ್ಧ ಜಾಥಾ ಮಾಡಿ ಘೋಷಣೆಗಳನ್ನು ಕೂಗಿ ಕರಪತ್ರಗಳನ್ನು ಹಂಚಿದರು. ನಂತರ ಮಕ್ಕಳು ಮತ್ತು ಪೋಷಕರು ಪಟಾಕಿ ಹಚ್ಚುವುದಿಲ್ಲವೆಂದು ಪ್ರಮಾಣ ಮಾಡಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಪೋಷಕರಿಗೆ ರಂಗೋಲಿ ಬಿಡಿಸುವ, ಶುಭಾಷಯ ಪತ್ರ ರಚಿಸುವ ಮತ್ತು ಆಕಾಶ ಪುಟ್ಟಿ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಲ್ಲಿ ಮಕ್ಕಳು, ಶಿಕ್ಷಕ ವೃಂದ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

