ಮುಕ್ತಿ ಮಾರ್ಗದಲ್ಲಿ ಹೋಗಲು ಗುರು ಅಗತ್ಯ
ಕ.ಪ್ರ.ವಾರ್ತೆ , ಶಿರಾಳಕೊಪ್ಪ , ನ. 7
ಗುರು ಎಂದರೆ ಜ್ಞಾನದ ಆಗರ. ಮುಕ್ತಿ ಮಾರ್ಗದಲ್ಲಿ ಹೋಗಲು ಗುರುವಿನ ಮಾರ್ಗದರ್ಶನ ಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ತಿಳಿಸಿದರು.
ಶಿರಾಳಕೊಪ್ಪ ಹತ್ತಿರದ ಐತಿಹಾಸಿಕ ಕ್ಷೇತ್ರ ಶಿವ ತನ್ನ ಪಾದಗಳನ್ನು ಬಿಟ್ಟುಹೋದ ಶಿವನಪಾದ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ಕ್ಷೇತ್ರದಲ್ಲಿ ಶಿವಾನಂದ ಶ್ರೀಗಳ 27 ನೇವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಕಾರ್ಯ: ಈ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯ ಸಾರ್ವಜನಿಕ ಕಾರ್ಯ. ಈ ಹಿಂದೆ ಶಿಕ್ಷಣ ಪಡೆಯಲು ಮಕ್ಕಳು ಹಾಗೂ ಯುವಕರು ದಾವಣಗೆರೆ ಮತ್ತು ಇತರ ದೊಡ್ಡ ನಗರಗಳಿಗೆ ಹೋಗುತ್ತಿದ್ದರು. ಮುಂಬರುವ ದಿನಗಳಲ್ಲಿ ಈ ಗ್ರಾಮಾಂತರ ಪ್ರದೇಶದ ಜನರು ಬೇರೆ ಭಾಗಗಳಿಗೆ ಹೋಗದಂತೆ ಶಿಕ್ಷಣ ದೊರಕುವಂತೆ ಮಾಡಲಾಗುವದು ಎಂದರು.
ಅಧ್ಯಕ್ಷತೆಯನ್ನು ಕ್ಷೇತ್ರದ ಸಮಿತಿ ಅಧ್ಯಕ್ಷ ಸುಣ್ಣದಕೊಪ್ಪ ಪರಮೇಶ್ವರಪ್ಪ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ಮಾಜಿ ಶಾಸಕ ಮಹಲಿಂಗಪ್ಪ ಜಿಪಂ ಸದಸ್ಯ ಈಶ್ವರಪ್ಪ ಸಿರಿಗೆರೆ ಕೇಂದ್ರ ಸಮಿತಿಯ ಎಸ್ ಎಸ್ ಪಾಟೀಲ, ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್, ಗ್ರಾಪಂ ಅಧ್ಯಕ್ಷೆ,ಶಿಕ್ಷಕ ಮಲ್ಲಪ್ಪ, ರಾಜಶೇಖರ ಮೊದಲಾದವರು ಇದ್ದರು.
ರಾಘವೇಂದ್ರ ಭೇಟಿ; ಶಿವನಪಾದ ಕ್ಷೇತ್ರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಗರ್ಭಗುಡಿ, ಹಾಸ್ಟೆಲ್, ಕಟ್ಟಡ ಕಾಮಗಾರಿ ವೀಕ್ಷಿಸಿದರು. ಮುಂದಿನ ಕೆಲಸಕಾರ್ಯಗಳಿಗೆ ಒತ್ತುಕೊಟ್ಟು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

