ಶಿವಮೊಗ್ಗ

ಅನ್ಯ ಭಾಷಾ ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ

Published On :

ಶಿವಮೊಗ್ಗ: ನವೆಂಬರ್ ಮಾಸದಲ್ಲಿ ತಮಿಳು ಚಿತ್ರ ಪ್ರದರ್ಶನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಗರದ ವಿನಾಯಕ ಚಿತ್ರಮಂದಿರಕ್ಕೆ ಶುಕ್ರವಾರ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ ಪ್ರಸಂಗ ನಡೆಯಿತು.
ಚಿತ್ರಪ್ರದರ್ಶನದ ವೇಳೆ ದಿಢೀರ್ ದಾಳಿ ನಡೆಸಿದ ಕಾರ್ಯಕರ್ತರು ಚಿತ್ರಮಂದಿರ ಆವರಣದೊಳಗೆ ನುಗ್ಗಲು ಯತ್ನಿಸಿದರು.
 ಸಿಬ್ಬಂದಿ ತಡೆದರಾದರೂ ಗೇಟ್ ನೂಕಿ ಒಳ್ಳನುಗಿದ್ದರು. ನಂತರ ಟಾಕೀಸ್ ಆವರಣದಲ್ಲಿರುವ ಎಲ್ಲಾ ಪೋಸ್ಟರ್, ಬ್ಯಾನರ್‌ಗಳನ್ನು ಹರಿದು ಹಾಕಿದರು. ಅಲ್ಲದೇ, ಗ್ರಿಲ್ ಗೇಟ್ ತೆಗೆದು ಚಿತ್ರಮಂದಿರದೊಳಗೆ ನುಗ್ಗಲು ಮುಂದಾದರು. ಈ ಸಂದರ್ಭದಲ್ಲಿ ಚಿತ್ರಮಂದಿರದ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಕೊನೆಗೂ ಒತ್ತಾಯಪೂರ್ವಕವಾಗಿ ಗ್ರಿಲ್ ಗೇಟ್
ತಳ್ಳಿಕೊಂಡು ಒಳ್ಳ ನುಗ್ಗಿದ್ದ ಕಾರ್ಯಕರ್ತರು ಚಿತ್ರ ವೀಕ್ಷಣೆ ಮಾಡುತ್ತಿದ್ದ ಎಲ್ಲರನ್ನೂ ಹೊರಹೋಗುವಂತೆ ಮನವಿ ಮಾಡಿದರು.
ಪೋಸ್ಟರ್, ಬ್ಯಾನರ್‌ಗಳಿಗೆ ಬೆಂಕಿ: ಟಾಕೀಸ್ ಆವರಣದಲ್ಲಿ ಪೋಸ್ಟರ್, ಬ್ಯಾನರ್‌ಗಳಿಗೆ ಬೆಂಕಿ ಹಾಕಿ ಚಿತ್ರಮಂದಿರದ ಮಾಲಿಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು
 ಈ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರು ಹಾಗೂ ಸಂಘಟನೆ ಕಾರ್ಯಕರ್ತರ ನಡುವೆ ಮಾತುಕತೆ ಜೋರಾಗಿಯೇ ನಡೆಯಿತು. ಒಂದು ಹಂತದಲ್ಲಿ ಒಬ್ಬರನೊಬ್ಬರು ತಳ್ಳಾಡಿಕೊಂಡರು. ಅಂತಿಮವಾಗಿ ಹೋರಾಟದ ಕಾವು ಹೆಚ್ಚಾದಂತೆ ತಗ್ಗಿದ ಚಿತ್ರಮಂದಿರ ಮಾಲೀಕರು ಚಿತ್ರಪ್ರದರ್ಶನ ನಿಲ್ಲಿಸಿ, ವೀಕ್ಷಕರಿಗೆ ಹಣ ವಾಪಸು ನೀಡಿದರು.
ಮಾತಿನ ಚಕಮಕಿ: ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಹೊರತು ಪಡಿಸಿ ಪರಭಾಷೆ ಚಿತ್ರಗಳನ್ನು ಪ್ರದರ್ಶನಮಾಡಬಾರದು.
 ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ನವೆಂಬರ್. ತಿಂಗಳಿನಲ್ಲಿ ಶಿವಮೊಗ್ಗ ನಗರದ ಎಲ್ಲಾ ಚಿತ್ರಮಂದಿರಗಳಲ್ಲೂ ಕಡ್ಡಾಯವಾಗಿ ಕನ್ನಡ ಚಿತ್ರವನ್ನು ಪ್ರದರ್ಶನ ಮಾಡುವುದು ಶಿವಮೊಗ್ಗದ ಇತಿಹಾಸ. ಆದರೆ, ನಗರದ ವಿನಾಯಕ ಚಿತ್ರಮಂದಿರದಲ್ಲಿ ಅಳಗುರಾಜ ಎಂಬ ತಮಿಳು ಚಿತ್ರ ಪ್ರದರ್ಶನ ಮಾಡುತ್ತಿರುವುದು ವಿಷಾದನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರಮಂದಿರದ ಮಾಲಿಕರು, ಕಾನೂನು ಉಲ್ಲಂಘಿಸಿ ತಮಿಳು ಚಿತ್ರಪ್ರದರ್ಶನ ಮಾಡುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ಚಿತ್ರ ಪ್ರದರ್ಶನ ಮಾಡುತ್ತಿದ್ದೇವೆ.
ನವೆಂಬರ್ ಮೊದಲ ವಾರ ಕನ್ನಡ ಚಿತ್ರಪ್ರದರ್ಶನ ಮಾಡುವುದು ಕಡ್ಡಾಯ.
 ನಂತರ ಅನುಕೂಲಕ್ಕೆ ತಕ್ಕಂತೆ ಕನ್ನಡ ಸಿನಿಮಾ ಪ್ರದರ್ಶನ ಮಾಡಬಹುದು. ಇದನ್ನು ಅರಿಯದ ಕನ್ನಡ ಸಂಘಟನೆ ಕಾರ್ಯಕರ್ತರು ವಿನಾಕಾರಣ ಗೊಂದಲ ಸೃಷ್ಠಿಸಿ, ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ನಗರಾಧ್ಯಕ್ಷ ಮಂಜುನಾಥ, ನರಸಿಂಹ, ಪಿ. ಶೇಖರ್, ಸಂತೋಷ, ಕಿಶೋರ, ಸತೀಶ, ಆಸಿಫ್, ಲೋಕೆಶ್, ನಾಗರಾಜ, ಮಧು, ಪ್ಲವರ್ ಕುಮಾರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.