ಶಿವಮೊಗ್ಗ

ಅಭಿನಂದನೆ

Published On :

ಶಿವಮೊಗ್ಗ: ನವೆಂಬರ್-7ರಿಂದ 10ರವರೆಗೆ ಸಿಮ್ಸ್ನಲ್ಲಿ ನಡೆದ ವೈದ್ಯಕೀಯ ವಸ್ತುಪ್ರದರ್ಶನದ ಯಶಸ್ಸಿಗೆ ಸಹಕರಿಸಿದ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳಿಗೆ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಿಮ್ಸ್ ನಿರ್ದೇಶಕ ಡಾ.ಎಂ.ವಿ. ಸಾಗರ್ ಅಭಿನಂದಿಸಿದ್ದಾರೆ.
ಶಾಂತಾ ಶೆಟ್ಟಿ ಆಯ್ಕೆ
ಶಿವಮೊಗ್ಗ: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸಂಚಾಲಕರಾಗಿ ಶಾಂತಾ ಎಸ್. ಶೆಟ್ಟಿಯವರನ್ನು ನೇಮಿಸಲಾಗಿದೆ ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಕ್ರಿಯಾಶೀಲತೆಗೆ ಕ್ರೀಡೆ ಸಹಕಾರಿ
ಹೊಸನಗರ: ಶಾರೀರಿಕ ಕಸರತ್ತಿಗೆ ಒತ್ತು ನೀಡುವ ಕ್ರೀಡೆಗಳ ದೈಹಿಕ ಕ್ರಿಯಾಶೀಲತೆಗೆ ಸಹಕಾರಿಯಾಗಿದೆ ಎಂದು ತಾಪಂ ಅಧ್ಯಕ್ಷೆ ನಾಗರತ್ನ ದೇವರಾಜ್ ಹೇಳಿದರು. ಪಟ್ಟಣದ ನೆಹರು ಮೈದಾನದಲ್ಲಿ ಸಹಾಯಕ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಆಯೋಸಿದ್ದ ಪಂಚಾಯತ್ ಯುವ ಕ್ರೀಡಾ ಖೇಲ್ ಅಭಿಯಾನ (ಪೈಕಾ) ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ, ಯುವ ಪೀಳಿಗೆಯ ನಡುವೆ ಸಾಮರಸ್ಯ ಬೆಸೆಯಲು ಕ್ರೀಡೆಯಿಂದ ಸಾಧ್ಯ ಎಂದರು. ಯುವಕರಿಗೆ ಪ್ರೇರಣೆ ಮತ್ತು ಸಾಧನೆಗೆ ಪೂರಕವಾಗಿರುವ ಪೈಕಾ ಕ್ರೀಡಾಕೂಟ ನಾಮ್ ಕೇ ವಾಸ್ತೆಯಾಗದೇ ಕ್ರೀಡೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಿ ಎಂದರು. ತಾಪಂ ಉಪಾಧ್ಯಕ್ಷೆ ಗೀತಾ ನಿಂಗಪ್ಪ ಅಧ್ಯಕ್ಷತೆ ವಹಿಸಿ, ಇಂತಹ ಕ್ರೀಡಾಕೂಟಗಳು ಕ್ರೀಡಾಪಟುಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರಹಾಕಲು ಸೂಕ್ತವಾಗಿವೆ. ಅವಕಾಶ ವಂಚಿತರಾಗಿರುವ ಗ್ರಾಮೀಣ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ತಹಸೀಲ್ದಾರ್ ಕುಲಕರ್ಣಿ, ತಾಪಂ ಇಒ ಎಸ್.ಜಿ. ಭಟ್, ಎಚ್.ಎಲ್. ಗುರುಮೂರ್ತಿ, ಕೆ.ಬಿ. ಈಶ್ವರಪ್ಪ, ಚಂದ್ರಬಾಬು, ಉಡುಪಿ ಸದಾನಂದ ದೈಹಿಕ ಶಿಕ್ಷಕರು ಕ್ರೀಡಾಪಟುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.