ದುಪ್ಪಟ್ಟು ಕಂದಾಯ ಹಿಂಪಡೆಯಲು ಆಗ್ರಹ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ನ.12
ನಗರದಲ್ಲಿ ಕಸ ವಿಲೇವಾರಿ ಮತ್ತು ನೀರಿನ ಕಂದಾಯ ದುಪ್ಪಟ್ಟು ಮಾಡಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕೆಜೆಪಿ ಜಿಲ್ಲಾ ಘಟಕ ಮಂಗಳವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿತು.
ನಗರಸಭೆ ಆವರಣದಲ್ಲಿ ಪಕ್ಷದ ಕಾರ್ಯಕರ್ತರು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ಹಿಂದೆ ಚುನಾಯಿತ ಪ್ರತಿನಿಧಿಗಳು ಇಲ್ಲದ ವೇಳೆ ನಗರಸಭೆ ಅಧಿಕಾರಿಗಳು ಕಸ ವಿಲೇವಾರಿಗೆ ಅವೈಜ್ಞಾನಿಕವಾಗಿ 600 ತೆರಿಗೆಯನ್ನು ಸಂಗ್ರಹಿಸಲು ತೀರ್ಮಾನ ಕೈಗೊಂಡಿದ್ದಾರೆ. ಇದೀಗ ನಗರಸಭೆಗೆ ಚುನಾಯಿತ ಆಡಳಿತ ಮಂಡಳಿ ಬಂದಿದ್ದು, ಕೂಡಲೇ ಕಸ ವಿಲೇವಾರಿ ತೆರಿಗೆ ಮತ್ತು ನೀರಿನ ಕಂದಾಯವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪರವಾನಗಿ ನೀಡುತ್ತಿಲ್ಲ: ನಗರ ಮಹಾಯೋಜನೆ-2030 ರಂತೆ ಶಿವಮೊಗ್ಗ ನಗರದ ಬಡಾವಣೆಗಳಲ್ಲಿ ನಾಗರಿಕರಿಗೆ ಕಟ್ಟಡ ಪರವಾನಗಿ ನೀಡಲು ಜಾಗದ ಮಾಲೀಕರಿಂದ, 3 ರಿಂದ 6 ಮೀಟರ್ ಜಾಗವನ್ನು ನಗರಸಭೆ ಹೆಸರಿಗೆ ಯಾವುದೇ ಫಲಾಪೇಕ್ಷೆಯಿಲ್ಲದೇ ದಾನಪತ್ರದ ಮೂಲಕ ಹಸ್ತಾಂತರಿಸಿದರೆ ಮಾತ್ರ ಕಟ್ಟಡ ಪರವಾನಗಿ ನೀಡಲಾಗುವುದು ಎಂದು ತಿಳಿಸಿದ್ದರೂ ಇದುವರೆಗೂ ಕಟ್ಟಡ ಕಟ್ಟಲು ಪರವಾನಗಿ ನೀಡದೆ ಇರುವುದು ನಾಗರಿಕರ ಹಕ್ಕನ್ನು ಮೊಟಕುಗೊಳಿಸಿದೆ. ಈ ರೀತಿಯ ತೀರ್ಮಾನವನ್ನು ಈ ಕೂಡಲೇ ರದ್ದುಗೊಳಿಸಿ ಜಾಗದ ಮಾಲೀಕರಿಗೆ ಅವರ ಹಕ್ಕಿನ ಜಾಗವನ್ನು ಅವರಿಗೆ ಅನುಭವಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ಜನತೆ ಹೊಸದಾಗಿ ಕೊಂಡುಕೊಂಡ ಜಾಗಕ್ಕೆ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿಯಾದ ಹಣಕ್ಕೆ ಶೇ.1ರಂತೆ ಖಾತೆ ಮಾಡಲು ಬಲವಂತವಾಗಿ ವಸೂಲು ಮಾಡಲಾಗುತ್ತಿದೆ. ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು. ಈ ಹಿಂದೆ ಇದ್ದ ಹಳೇ ಪದ್ಧತಿಯಂತೆ ಖಾತೆ ಬದಲಾವಣೆ ಮಾಡಲು ಇದ್ದ ಶುಲ್ಕವನ್ನೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಕಸ ವಿಲೇವಾರಿ ತ್ವರಿತಗೊಳಿಸಿ: ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಮುಚ್ಚುವ ಕಾರ್ಯಕ್ಕೆ ನಗರಸಭೆ ಕೈ ಹಾಕಬೇಕು. ನಗರದ ಚರಂಡಿಗಳಲ್ಲಿ ಕಸವನ್ನು ತೆಗೆಯದೆ, ಕಸವಿಲೇವಾರಿಯಾಗದೆ ಸೊಳ್ಳೆ ಮತ್ತು ಹಂದಿಗಳ ಹಾವಳಿಯ ಹೆಚ್ಚಾಗಿ ನಗರದಲ್ಲಿ ಮಲೇರಿಯಾ, ಕಾಲರಾದಂತಹ ಮಾರಕ ರೋಗಕ್ಕೆ ಆಹ್ವಾನ ನೀಡುವುದನ್ನು ತಪ್ಪಿಸಿ ಕಸವಿಲೇವಾರಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಈ ಕೂಡಲೇ ನಮ್ಮ ಸಮಸ್ಯೆಗಳಿಗೆ ನಗರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಪಕ್ಷದಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಉಪಾಧ್ಯಕ್ಷ ಬಿ. ಯೇಸುದಾಸ್, ಎನ್. ಹೊನ್ನಪ್ಪ, ಐಡಿಯಲ್ ಗೋಪಿ, ಸಂತೋಷ್ ಬಳ್ಳೆಕೆರೆ, ಬಿಳಕಿ ಕೃಷ್ಣಮೂರ್ತಿ, ಎಂ. ಅಶೋಕ್ ಪೈ, ಅರ್ಚನಾ ಬಳ್ಳೆಕೆರೆ, ಮಹಿಳಾಘಟಕ ನಗರಾಧ್ಯಕ್ಷೆ ಮಾಲತಿ ಶೇಖರ್, ಅನಿತಾ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

