ಬೆಂಕಿ ಹಚ್ಚಿ ಪತ್ನಿ ಹತ್ಯೆಗೆ ಪತಿ ಯತ್ನ
ಶಿರಾಳಕೊಪ್ಪ: ಅಕ್ಕಮಹಾದೇವಿ ಜನ್ಮ ಸ್ಥಳ ಉಡಗಣಿ ಗ್ರಾಮದಲ್ಲಿ ಸಯ್ಯದ್ ಸಾದತ್ ತನ್ನ ಹೆಂಡತಿ ಲಕ್ಕೀನಬಾನುಗೆ(21) ಸೀಮೆಯಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಘಟನೆ ನ.14ರ ರಾತ್ರಿ ನಡೆದಿದೆ.
ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸಯ್ಯದ್ ಸಾದತ್ ಒಂದು ವರ್ಷದ ಹಿಂದೆ ಶಿರಾಳಕೊಪ್ಪದ ಲಕ್ಕೀನಬಾನು ಅವರನ್ನು ಮದುವೆ ಆಗಿದ್ದು,ನ.14ರ ರಾತ್ರಿ ಸಯದ್ ಸಾದತ್ ಕುಡಿದು ಮನೆಗೆ ಬಂದಾಗ ಲಕ್ಕೀನ ಬಾನು ಗಂಡನೊಂದಿಗೆ ಕುಡಿತದ ಬಗ್ಗೆ ತಕರಾರು ತೆಗೆದಿದ್ದಾಳೆ. ಇದರಿಂದ ಕುಪಿತಗೊಂಡು ಸಾದತ್ ಮನೆಯಲ್ಲಿ ಇದ್ದ ಸೀಮೆಯಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ಲಕ್ಕೀನ್ ಬಾನು ಪೊಲೀಸರಿಗೆ ತಿಳಿಸಿದ್ದಾರೆ. ಬೆಂಕಿಹಚ್ಚಿದ ಕಾರಣ ಮನೆಯ ಮುಂಬಾಗಿಲಿಗೆ ಹಾಕಿದ ಪರದೆ ಇತರ ವಸ್ತು ಬೆಂಕಿಹತ್ತಿ ತೀವ್ರ ಹೊಗೆ ಕಾಣಿಸಿದ ಕಾರಣ ತಕ್ಷಣ ಅಕ್ಕಪಕ್ಕದ ಜನರು ಬೆಂಕಿನಂದಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಶೇ.70-80ರಷ್ಟು ಸುಟ್ಟಗಾಯವಾದಕಾರಣ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ವೈದ್ಯರು ಬದುಕುಳಿಯುವುದು ಕಷ್ಟವೆಂದಿರುವುದಾಗಿ ತಿಳಿದಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಎಸ್ಪಿ ಭೇಟಿ: ಶಿಕಾರಿಪುರ ನೂತನ ಡಿಎಸ್ಪಿ ಸಯ್ಯದ್ ಇಸಾಕ್ ಅವರು ಎಸ್ಐ ಗುರುಪ್ರಸಾದ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆರೋಪಿ ತಲೆಮರಿಸಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

