ಆಧುನಿಕ ಸೋಗಿಗೆ ಗ್ರಾಮೀಣರ ಆಕರ್ಷಣೆ
ಕ.ಪ್ರ.ವಾರ್ತೆ, ಹೊಸನಗರ, ನ.14
ಆಧುನಿಕತೆಯ ಸೋಗಿಗೆ ಗ್ರಾಮೀಣರು ಆಕರ್ಷಿತರಾಗುವ ಕಾರಣ ಗ್ರಾಮೀಣ ಕಲಾ ಪ್ರಾಕಾರಗಳು ಮರೆಯಾಗುತ್ತಿವೆ ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಹೇಳಿದರು.
ತಾಲೂಕಿನ ಮಾರುತಿಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀರಾಮಾರ್ಪಣ ಕಲಾ ವೇದಿಕೆ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಏಕಾದಶಿ ಪಾಕ್ಷಿಕ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಪ್ರದೇಶದಲ್ಲಿ ತಾಳಮದ್ದಲೆ ತನ್ನ ಮಹತ್ವ ಸಾರಿರುವುದು ಯಕ್ಷಗಾನದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.
ನೀತಿಪಾಠ: ಯಕ್ಷಗಾನ ಕಲಾವಿದ ಪುರಪ್ಪೆಮನೆ ಎ.ಆರ್.ಗಣಪತಿ ಮಾತನಾಡಿ, ಪಾಶ್ಚಿಮಾತ್ಯ ಕಲೆ ಅಬ್ಬರದ ಶಬ್ದವಾದರೆ ನಮ್ಮ ಜಾನಪದ ಕಲೆಗಳು ನೀತಿಪಾಠ ಇದ್ದಂತೆ. ಗ್ರಾಮೀಣ ಕಲೆಗಳ ಜೀವಂತಿಕೆ ಶಾಶ್ವತವಾಗಿರುತ್ತದೆ. ಯಕ್ಷಗಾನದಿಂದ ಗ್ರಾಮೀಣ ಸೊಗಡು, ಪೌರಾಣಿಕ ಮಾಹಿತಿ ಹಾಗೂ ಐತಿಹಾಸಿಕ ವಿಷಯವನ್ನು ಸಾಮಾಜಿಕವಾಗಿ ವಿಸ್ತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ಅಲ್ಲದೆ ಮರೆಯಾಗುತ್ತಿರುವ ಕಲೆಯ ಸತ್ವವನ್ನು ಹೊತ್ತು ಸಾರುವ ಮನಸ್ಸುಗಳು ಬೇಕಿದೆ. ಇಂದಿನ ಯುವ ಪೀಳಿಗೆ ಯಕ್ಷಗಾನದಲ್ಲಿ ಆಸಕ್ತಿ ವಹಿಸಿದರೆ ಮುಂದೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕಲಾವಿದ ಎ.ಆರ್. ಗಣಪತಿಯವನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀರಾಮಾರ್ಪಣ ಕಲಾ ವೇದಿಕೆಯ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪಪಂ ಸದಸ್ಯ ಹಾಲಗದ್ದೆ ಉಮೇಶ್, ಸನ್‌ಟೈಮ್ ವಿಶ್ವೇಶ್ವರ, ರಮೇಶ ಹೆಗಡೆ ಗುಂಡೂಮನೆ, ಗಣೇಶ ಹುಲಿಮನೆ ಉಪಸ್ಥಿತರಿದ್ದರು. ನಂತರ ಗೋಭಾರತಿ ಯಕ್ಷಗಾನ ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

