ಬೀದಿಬದಿ ವ್ಯಾಪಾರಸ್ಥರಿಗೆ ನಿವೇಶನ
ಶಿಕಾರಿಪುರ: ಪಟ್ಟಣದ ಸುಂದರ ಬಸ್ಸು ನಿಲ್ದಾಣದ ಸುತ್ತಮುತ್ತಲಿನ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ಸವಾಲಾಗಿರುವ ಹೂವು, ಹಣ್ಣು, ಎಲೆ, ತರಕಾರಿ ಮತ್ತಿತರ ಬೀದಿಬದಿ ವ್ಯಾಪಾರಸ್ಥರಿಗೆ ಬಸ್ಸು ನಿಲ್ದಾಣದ ಸಮೀಪದಲ್ಲಿನ ಕಸಬಾ ಸಹಕಾರ ಸಂಘದ ಖಾಲಿ ನಿವೇಶನವನ್ನು ಕಡಮೆ ಬಾಡಿಗೆ ದರದಲ್ಲಿ ನೀಡಲು ಸಿದ್ದವಿರುವುದಾಗಿ ಕಸಬಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಡಗಿ ಮಹಾದೇವಪ್ಪ ಹೇಳಿದರು.
ಪಟ್ಟಣದ ಕಸಬಾ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಸಬಾ ಬ್ಯಾಂಕ್ ಸದಸ್ಯರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಹಕಾರಿ ಸಂಘ ಎಂದು ಪ್ರಸಿದ್ಧವಾಗಿದೆ ಎಂದರು.
ಸಹಕಾರಕ್ಕೆ ಮನವಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಪುರಸಭೆ, ಪೊಲೀಸ್ ಇಲಾಖೆ, ಬೀದಿ ಬದಿ ವ್ಯಾಪಾರಸ್ಥರು, ಪಟ್ಟಣದ ಹಿರಿಯರ ಸಭೆ ನಡೆಸಿ, ಒಮ್ಮತದ ತೀರ್ಮಾನ ಕೈಗೊಳ್ಳಲು ಉದ್ದೇಶಿಸಿದ್ದು, ಈ ಕಾರ್ಯಕ್ಕೆ ಎಲ್ಲಾ ಅಧಿಕಾರಿಗಳು, ನಾಗರಿಕರು ಸಹಕರಿಸುವಂತೆ ಮನವಿ ಮಾಡಿದರು.
ಅಧ್ಯಕ್ಷ ಬಡಗಿ ಮಹಾದೇವಪ್ಪನವರನ್ನು ಮಾಜಿ ಅಧ್ಯಕ್ಷ ಚಾರುಗಲ್ಲಿ ತಿಪ್ಪಣ್ಣ, ಜಿ. ಶಿವಮೂರ್ತಿ, ಜಿ.ಬಿ. ದೇವೇಂದ್ರಪ್ಪ, ನಿರ್ದೇಶಕ ಪರಮೇಶ್ವರಪ್ಪ, ಪರಶುರಾಮಪ್ಪ, ಗೆಲುವಮ್ಮ, ಗೋಣಿ ಮಾಲತೇಶ್, ಪ್ರಬಂಧಕ ಶ್ರೀಹರ್ಷ, ಜಿ.ಬಿ. ಕುಮಾರ್, ಎಚ್.ಎಂ. ಪುಷ್ಪಾ, ಬಿ.ಎಂ. ಸೌಭಾಗ್ಯವತಿ, ಡಿ. ರಾಜು, ಸಿ. ಹರೀಶ್, ಚುನಾವಣಾಧಿಕಾರಿ ಸತ್ಯನಾರಾಯಣರಾವ್ ಮೊದಲಾದವರು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

