ನಗರಸಭೆ ಉದಾಸೀನಕ್ಕೆ ಜನಸಾಮಾನ್ಯರ ಅಸಮಾಧಾನ
ಶಿವಮೊಗ್ಗ: ನಗರದಲ್ಲಿ ಅಬ್ಬರಿಸುತ್ತಿರುವ ಫ್ಲೆಕ್ಸ್‌ಗಳ ನಿಯಂತ್ರಣದ ಬಗ್ಗೆ ತೀರಾ ಉದಾಸೀನ ಧೋರಣೆ ತಾಳುತ್ತಿರುವ ನಗರಸಭೆ ವಿರುದ್ಧ ವಿವಿಧ ಸಂಘಟನೆಗಳು, ಮುಖಂಡರು, ಉದ್ಯಮಿಗಳು, ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ನಗರಸಭೆ ಒಂದು ರೀತಿರಿವಾಜು ರೂಪಿಸಿಕೊಂಡಿದೆ. ಆದರೆ, ಅದು ಕಡ್ಡಾಯವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಹಿಂದಿನ ನಗರಸಭೆ ಕೌನ್ಸಿಲ್ ಇರುವವರೆಗೂ ಅಷ್ಟೋಇಷ್ಟೋ ಜಾರಿಯಲ್ಲಿದ್ದ ನಿಯಮಗಳು ಇದೀಗ ಸಂಪೂರ್ಣ ಮೂಲೆಗುಂಪಾಗಿದೆ.
ಹುಟ್ಟುಹಬ್ಬ, ಉತ್ಸವ, ಹಬ್ಬ, ರಾಜ್ಯ-ರಾಷ್ಟ್ರ ನಾಯಕರ ಆಗಮನ ಇತ್ಯಾದಿ ವಿಚಾರವನ್ನಿಟ್ಟುಕೊಂಡು ಅಗಾಧಪ್ರಮಾಣದ ಫ್ಲೆಕ್ಸ್ ಅಳವಡಿಸುತ್ತಿರುವುದು ಜನರ ತಾಳ್ಮೆಯನ್ನೂ ಕೆಡಿಸಿದ್ದು, ನಗರಸಭೆಯ ಉದಾಸೀನ ಧೋರಣೆಗೆ ಛೀಮಾರಿ ಹಾಕಲಾರಂಭಿಸಿದ್ದಾರೆ.
ಈ ವಿಚಾರವನ್ನಿಟ್ಟುಕೊಂಡು ಕನ್ನಡಪ್ರಭ ವಿವಿಧ ಸಂಘಟನೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರನ್ನು ಮಾತನಾಡಿಸಿದಾಗ, ನಗರಸಭೆಯ ವರ್ತನೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು.
ಹೀಗಿದೆ ಫ್ಲೆಕ್ಸ್ ಹಾವಳಿ
1. ನಗರದ ಪ್ರಮುಖ ವೃತ್ತ, ಪಾದಚಾರಿ ಮಾರ್ಗಗಳು ಸೇರಿದಂತೆ ಕಂಬಕಂಬಗಳಲ್ಲಿ ಫ್ಲೆಕ್ಸ್‌ಗಳು ನೇತಾಡುತ್ತಿವೆ.
2. ಫ್ಲೆಕ್ಸ್ ಹಾಕುವ ಮುನ್ನ ನಗರಸಭೆಯಲ್ಲಿ ಶುಲ್ಕ ಕಟ್ಟಿ ನೊಂದಾಯಿಸುತ್ತಿಲ್ಲ. ನಗರಸಭೆ ಸದಸ್ಯರೇ ನಿಯಮ ಉಲ್ಲಂಘಿಸಿದ್ದಾರೆ.
3. ಕಾಲಮಿತಿ ಇಲ್ಲದೇ ತಿಂಗಳಾನುಗಟ್ಟಲೇ ಫ್ಲೆಕ್ಸ್‌ಗಳು ನೇತಾಡುತ್ತಲೇ ಇವೆ.
4. ಭಾರೀ ಗಾತ್ರದ ಫ್ಲೆಕ್ಸ್‌ಗಳು ಅಳವಡಿಸಲಾಗುತ್ತಿದ್ದು, ಇದರಿಂದ ಅಪಾಯವೇ ಹೆಚ್ಚಾಗಿದೆ. ರಸ್ತೆ ಅಪಘಾತಕ್ಕೂ ಕಾರಣವಾಗುತ್ತಿದೆ.
5. ಪ್ರಮುಖ ವೃತ್ತಗಳಲ್ಲಿ ಅತಿಯಾದ ಫ್ಲೆಕ್ಸ್ ಅಳವಡಿಕೆಯಿಂದ ವಾಹನ ಚಾಲಕರ ಏಕಾಗ್ರತೆಗೂ ಧಕ್ಕೆಯಾಗುತ್ತಿದೆ. ಜತೆಗೆ ಶಿವಮೊಗ್ಗ ನಗರದ ಸೌಂದರ್ಯಕ್ಕೂ ಚ್ಯುತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

