30ರಂದು ಗಣತಿ ಕರಡು ಪಟ್ಟಿ ಪ್ರಕಟ: ಡಿಸಿ
ಕ.ಪ್ರ.ವಾರ್ತೆ ಶಿವಮೊಗ್ಗ ನ. 26
ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011ರ ಕರಡುಪಟ್ಟಿಯನ್ನು ನ. 30ರಂದು ಸಂಬಂಧಿಸಿದ ಎಲ್ಲಾ ಗ್ರಾಪಂ, ಪುರಸಭೆ, ಪಪಂ ವಾರ್ಡ್ಗಳ ಸಭೆಯಲ್ಲಿ ಪ್ರಕಟಿಸಲಾಗುತ್ತಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ ನಿಗದಿತ ನಮೂನೆ ಪಡೆದು ಹೆಸರು ಸೇರಿಸುವಂತೆ ಅವರು ಕರೆ ನೀಡಿದರಲ್ಲದೆ, ಮುಂದಿನ 5 ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಕೈಗೊಳ್ಳಲಿರುವ ಮಹತ್ವದ ಯೋಜನೆಗಳಿಗೆ ಈ ಗಣತಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಇದನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ನ. 30ರಂದು ಕರಡು ಪಟ್ಟಿ ಪ್ರಕಟಿಸಲಾಗುತ್ತಿದ್ದು, ಡಿ. 7ರೊಳಗೆ ಗ್ರಾಮ ಸಭೆ ನಡೆಸುವುದು. ಅಲ್ಲಿ ಪಟ್ಟಿಯ ಬಗ್ಗೆ ಚರ್ಚಿಸುವುದು. ಡಿ. 21ರವರೆಗೆ ಹಕ್ಕು ಬಾಧ್ಯತಾ ಮತ್ತು ಆಕ್ಷೇಪಣಾ ಅರ್ಜಿಗಳ ಸ್ವೀಕಾರ, ಜ. 14ರವರೆಗೆ ಹಕ್ಕು ಬಾಧ್ಯತಾ ಆಕ್ಷೇಪಣಾ ಅರ್ಜಿ ವಿಲೇಗೊಳಿಸಲಾಗುವುದು. ಜ. 21ರಂದು ಅಂತಿಮ ಗಣತಿ ಪಟ್ಟಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.
ಮೇಲ್ಮನವಿ: ಜ. 21ರೊಳಗೆ ಮೇಲ್ಮನವಿ ಸ್ವೀಕರಿಸಿ, ಜ. 28ರೊಳಗೆ ಮೇಲ್ಮನವಿ ವಿಲೇ ಮಾಡುವುದಲ್ಲದೆ, ಫೆ. 20ರಂದು ತಿದ್ದುಪಡಿಯಾದ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರು ಕರಡು ಪಟ್ಟಿಯಲ್ಲಿ ತಮ್ಮ ಸದಸ್ಯರ ಹೆಸರು ಸೇರ್ಪಡೆ ಆಗದಿದ್ದರೆ ಅಥವಾ ತಪ್ಪಾಗಿ ಮುದ್ರಣವಾಗಿದ್ದರೆ ಪರಿಶೀಲಿಸಬಹುದಾಗಿದೆ.
ದೂರು ನೀಡಲು ಅವಕಾಶ: ಒಂದೊಮ್ಮೆ ಕರಡುಪ ಟ್ಟಿಯಲ್ಲಿ ತಿದ್ದುಪಡಿಯ ಅವಶ್ಯಕತೆ ಇದ್ದಲ್ಲಿ ಅಥವಾ ಹೊಸದಾಗಿ ಸೇರ್ಪಡೆ ಮಾಡಬೇಕಾದಲ್ಲಿ ಸ್ಥಳೀಯ ಸಂಸ್ಥೆಯ ಆಯಾ ವಾರ್ಡ್ಗಳ ಸಭೆಯಲ್ಲಿ ಉಚಿತವಾಗಿ ನೀಡಲಾಗುವ ಎ, ಬಿ, ಸಿ, ಡಿ, ಮತ್ತು ಇ ನಮೂನೆ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಹಾಗೆಯೇ ತಮ್ಮ ಅಕ್ಕಪಕ್ಕದ ಮನೆಯವರು ಸುಳ್ಳು ಮಾಹಿತಿ ನೀಡಿದ್ದರೆ ದೂರು ನೀಡಲೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಗಣತಿ ಪ್ರಕ್ರಿಯೆಯಲ್ಲಿ ರಾಜ್ಯದ 2- 3 ಜಿಲ್ಲೆಗಳು ಮುಂಚೂಣಿಯಲ್ಲಿದ್ದು, ಶಿವಮೊಗ್ಗ ಕೂಡ ಸೇರಿದೆ. ಗಣತಿ ಬಗ್ಗೆ ಜಿಲ್ಲೆಯಲ್ಲಿ ಈವರೆಗೆ 7001 ಬ್ಲಾಕ್ಗಳ 437066 ಕುಟುಂಬಗಳ ಸರ್ವೆ ಮಾಡಲಾಗಿದೆ. ಗಣತಿ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಶಿವಮೊಗ್ಗ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಹೇಳಿದರು.
ಗಣತಿ ಕರಡು ಕುರಿತು ಮಾಹಿತಿಗೆ ನೋಡಲ್ ಅಧಿಕಾರಿಗಳಾದ ವೀರಭದ್ರಯ್ಯ (ಮೊ. 9480505710), ಸುಬ್ಬರಾವ್ ಮೊ. 9480876004) ಅವರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

