ವಿದ್ಯುತ್ ಮಾರ್ಗಕ್ಕೆ ಚಾಲನೆ
ಶಿವಮೊಗ್ಗ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಕೆಎಚ್ಬಿ ವತಿಯಿಂದ ಸೋಮಿನಕೊಪ್ಪದಲ್ಲಿ ನಿರ್ಮಿಸಿರುವ ಲೇಔಟ್ಗೆ ವಿದ್ಯುದ್ದೀಕರಣ ವ್ಯವಸ್ಥೆ ಕಲ್ಪಿಸಲು ಹಾಲ್ಕೊಳದ ವಿದ್ಯುತ್ ವಿತರಣಾ ಕೇಂದ್ರದಿಂದ ಸೋಮಿನಕೊಪ್ಪದ ಕೆಎಚ್ಬಿ ಲೇಔಟ್ವರೆಗೆ ನೂತನವಾಗಿ ಅಳವಡಿಸಿರುವ ವಿದ್ಯುತ್ ಮಾರ್ಗ ಚಾಲನೆಗೊಳಿಸಲಿದೆ.
ಸಾರ್ವಜನಿಕರು ವಿದ್ಯುತ್ ಕಂಬಗಳನ್ನು ಹತ್ತುವುದು, ಮಾರ್ಗದ ಕೆಳಗೆ ಮನೆ ಕಟ್ಟಡ ನಿರ್ಮಾಣ, ಜಾನುವಾರುಗಳನ್ನು ಕಂಬಕ್ಕೆ ಕಟ್ಟುವುದು, ಡಿಶ್ ಕೇಬಲ್ ಎಳೆಯುವುದು ಮುಂತಾದವುಗಳನ್ನು ಸುರಕ್ಷತಾ ದೃಷ್ಟಿಯಿಂದ ಮಾಡಬಾರದೆಂದು ಮೆಸ್ಕಾಂನ ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ತಜ್ಞರ ವೈದ್ಯಕೀಯ ಉಚಿತ ಶಿಬಿರ
ಶಿವಮೊಗ್ಗ: ಆರೋಗ್ಯ ಇಲಾಖೆಯು ಜಿಲ್ಲಾಡಳಿತ, ಜಿಪಂ, ರಕ್ಷಣಾ ಇಲಾಖೆ, ತಾಲೂಕು ಆಡಳಿತದ ಸಹಯೋಗದಲ್ಲಿ ಹೊಸನಗರ ತಾಲೂಕಿನ ದೂರ ಮತ್ತು ಅತೀ ಹಿಂದುಳಿದ ಪ್ರದೇಶಗಳ ವ್ಯಾಪ್ತಿಯ ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಹತ್ತಿರದಲ್ಲೆ ದೊರಕಿಸಿಕೊಡುವ ಸದುದ್ದೇಶದಿಂದ ವೈದ್ಯಕೀಯ ಶಿಬಿರ ಹಮ್ಮಿಕೊಂಡಿದೆ.
ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ಮಾಹೆಯ ನಿಗದಿತ ದಿನಾಂಕಗಳಂದು ಹೊಸನಗರ ತಾಲೂಕಿನ ಕಟ್ಟಿಹೊಳೆ, ಮತ್ತಿಕೈ, ಕುಂಬ್ರಿಬೈಲ್ ಮತ್ತು ಹೊಲಗಾರುಗಳಲ್ಲಿ ವಿಶೇಷ ತಜ್ಞ, ವೈದ್ಯಕೀಯ ಶಿಬಿರ ಮತ್ತು ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮ ನಡೆಸಲಾಗುತ್ತಿದೆ.
ನ. 27ರಂದು ಕಟ್ಟಿಹೊಳೆ, ಡಿ. 13ರಂದು ಮತ್ತಿಕೈ, ಜ. 17ರಂದು ಕುಂಬ್ರಿಬೈಲು ಮತ್ತು ಫೆ. 19ರಂದು ಹೊಲಗಾರುಗಳಲ್ಲಿ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ತಜ್ಞ ವೈದ್ಯಕೀಯ ಶಿಬಿರಗಳನ್ನು ಹಾಗೂ ಡಿ. 11ರಂದು ಮತ್ತಿಕೈ, ಜ. 15ರಂದು ಕುಂಬ್ರಿಬೈಲು ಮತ್ತು ಫೆ. 17ರಂದು ಹೊಲಗಾರು ಗ್ರಾಮಗಳಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮ ನಡೆಸಲಾಗುತ್ತದೆ.
ಈ ಪ್ರದೇಶಗಳ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಆರೋಗ್ಯ ಸಂಬಂಧ ಸಮಸ್ಯೆಗಳನ್ನು ವೈದ್ಯರಲ್ಲಿ ತಪಾಸಿಸಿ ಔಷಧೋಪಚಾರ ಪಡೆದುಕೊಳ್ಳುವಂತೆ ಹೊಸನಗರ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಕಾಶಿಗೆ ಅಭಿನಂದನೆ
ಶಿವಮೊಗ್ಗ: ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಿ.ವಿ. ವಿಶ್ವನಾಥ್ (ಕಾಶಿ) ಅವರಿಗೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ತಂಡ ಅಭಿನಂದಿಸಿದೆ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿವಿನ್ಸೆಂಟ್ ರೋಡ್ರಿಗಸ್, ಯೋಗೇಶ್ ಗೌಡ, ಕಾರ್ಯದರ್ಶಿ ಮರಿಯಪ್ಪ ಗೌಡ್ರು, ಸುರೇಂದ್ರನಾಯ್ಕ, ಥಾಮಸ್, ಪ್ರದೀಪ್, ವೆಂಕಟೇಶ್, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಸೈಕಲ್ ವಿತರಣೆ
ಶಿವಮೊಗ್ಗ: ನಗರದ ಶಾಂತಿನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ಮಕ್ಕಳಿಗೆ ಸೈಕಲಲ್ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜಪ್ಪ, ಶಾಲಾ ಮುಖ್ಯೋಪಾಧ್ಯಾಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಯಶೋದಮ್ಮ, ಪ್ರಮುಖರಾದ ಬಳ್ಳೇಕೆರೆ ಸಂತೋಷ್, ಬಾಷಾ ಸಾಬ್, ಬಸವರಾಜು, ಜಯಮ್ಮ, ಕುಸುಮ, ದಾಕ್ಷಾಯಿಣಿ ಮೊದಲಾದವರು ಉಪಸ್ಥಿತರಿದ್ದರು.
ರೈತಮೋರ್ಚಾಕ್ಕೆ ಆಯ್ಕೆ
ಶಿವಮೊಗ್ಗ: ಜಿಲ್ಲಾ ಬಿಜೆಪಿ ರೈತಮೋರ್ಚಾ ಪದಾಧಿಕಾರಿಗಳನ್ನು ಘಟಕದ ಜಿಲ್ಲಾಧ್ಯಕ್ಷ ಎಂ.ಎಸ್. ಮಹೇಂದ್ರನಾಥ್ ಅವರು ನೇಮಕ ಮಾಡಿದ್ದು, ಉಪಾಧ್ಯಕ್ಷರಾಗಿ ಯೋಗೇಂದ್ರ ಗೌಡ, ಎಸ್.ಟಿ. ಮಹಾಬಲೇಶ್ವರ, ಚನ್ನವೀರಪ್ಪ ಮರಸೇರಾ, ನಂದ್ಯಪ್ಪ ಯಡೇಹಳ್ಳಿ, ಸುರೇಶ್, ಪಿ. ರತ್ನಾಕರ ಶೆಣೈ, ಕಾರ್ಯದರ್ಶಿಗಳಾಗಿ ಕೃಷ್ಣಮೂರ್ತಿ ಕಾನುವಳ್ಳಿ, ಗುರುಸ್ವಾಮಿ ಅಂತರಗಂಗೆ, ಶ್ರೀನಿವಾಸ ಇಂಬ್ರಗೋಡು, ಶಿವಶಂಕರ್ ನಾಯರ್ ಆಯನೂರು, ಕೋಶಾಧ್ಯಕ್ಷರಾಗಿ ನೀಲಕಂಠ ಕೊರಗಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

