ಮರಳು ಸಮಸ್ಯೆ: ತಲೆ ಬಾಗಿದ ಲಾರಿ ಮಾಲಿಕರು
ಶಿವಮೊಗ್ಗ: ಮರಳು ಸಮಸ್ಯೆಗಿನ ಪರಿಹಾರಕ್ಕೆ ಕೊನೆ ಹಂತದ ಪ್ರಯತ್ನಗಳು ನಡೆದಿದ್ದು, ಗ್ರಾಮ ಪಂಚಾಯಿತಿಯ ಬೇಡಿಕೆಯನ್ನು ಒಪ್ಪಿದ ಲಾರಿ ಮಾಲಿಕರು, ಗುರುವಾರದಿಂದಲೇ ಮರಳು ಸಾಗಾಣಿಕೆ ಆರಂಭಿಸಲು ನಿರ್ಧರಿಸಿದ್ದಾರೆ.
ರಾತ್ರಿ ವೇಳೆ ಗ್ರಾಮಗಳೊಳಗೆ ಲಾರಿಗಳು ಪ್ರವೇಶ ಮಾಡಬಾರದು, ನಿರ್ದಿಷ್ಟ ರಸ್ತೆಯಲ್ಲಿ ಮರಳು ಸಾಗಾಣಿಕೆ ಮಾಡಬೇಕು, ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು, ಗ್ರಾಮ ಪಂಚಾಯಿತಿಗೆ ಬರಬೇಕಾದ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರದ ಹೊರತು ಮರಳು ತುಂಬಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮ ಪಂಚಾಯಿತಿಯವರು ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಲಾರಿ ಮಾಲಿಕರು, ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಪ್ರಭಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಗ್ರಾಮ ಪಂಚಾಯಿತಿಯ ಬೇಡಿಕೆಯನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆ ಕುರಿತು ಮಾತನಾಡಿದ ಕಟ್ಟಡ ಸಾಮಗ್ರಿ ಲಾರಿ ಮಾಲಿಕರ ಸಂಘದ ಅಧ್ಯಕ್ಷ ರಾಜಶೇಖರ್, ಬೆಜ್ಜವಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮರಳು ಸಂಗ್ರವಿದೆ. ಹಾಗೆಯೇ ಗ್ರಾಮ ಪಂಚಾಯಿತಿಯವರ ಬೇಡಿಕೆ ಸರಿಯಾಗಿದೆ. ಅವರ ಬೇಡಿಕೆಯಂತೆ ನಾವು ನಡೆದುಕೊಳ್ಳುತ್ತೇವೆಂದು ತಿಳಿಸಿದರು.
ಗ್ರಾಮಗಳೊಳಗೆ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ಲಾರಿ ಸಂಚಾರ, ಹಾಗೆಯೇ ನಿರ್ದಿಷ್ಟ ಪಡಿಸಿದ ರಸ್ತೆಗಳಲ್ಲಿ ಮಾತ್ರ ಲಾರಿ ಸಂಚಾರ, ನಿಗದಿಪಡಿಸಿದಷ್ಟೇ ಮರಳು ಸಾಗಾಣಿಕೆ ಮಾಡಲು ನಾವು ಬದ್ಧರಿದ್ದೇವೆ ಎಂದರು.
ಯಂತ್ರದ ಮೂಲಕ ಮರಳು ಎತ್ತುವ ಪ್ರಕ್ರಿಯೆಗೆ ಟೆಂಡರ್ ಪ್ರಕ್ರಿಯೆ ಆಗಬೇಕಾಗಿರುವ ಕಾರಣ, ಜಿಲ್ಲಾಡಳಿತ 8 ದಿನದ ಸಮಯಾವಕಾಶ ಕೋರಿದೆ. ಹೀಗಾಗಿ ಗುರುವಾರದಿಂದಲೇ ಮ್ಯಾನ್ಯುಯಲ್ ಲೋಡಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಗುರುವಾರದಿಂದಲೇ ಮರಳು ಸಾಗಾಣಿಕೆ ಆರಂಭವಾಗಲಿದೆ ಎಂದು ರಾಜಶೇಖರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

