ಭಗವದ್ಗೀತಾ ಅಭಿಯಾನ
ಶಿವಮೊಗ್ಗ: ಭಗವದ್ಗೀತಾ ಅಭಿಯಾನ ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸೋಂದಾ ಸ್ವರ್ಣ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಶ್ರೀಗಳು ನಗರದ ಭಾರತೀಯ ವಿದ್ಯಾಭವನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಡಳಿತ ಮಂಡಳಿ ಚೇರ್ಮನ್ ದಿವಾಕರ, ಉಪಾಧ್ಯಕ್ಷ ಸುಬ್ರಹ್ಮಣ್ಯ, ಪ್ರಾಂಶುಪಾಲ ಇಂದು ಕೆ.ಪಿಳ್ಳೆ, ಅಭಿಯಾನದ ಜಿಲ್ಲಾ ಸಮಿತಿಯ ಪದಾಧಿಕಾರಿ ಪಿ.ಪಿ. ಹೆಗಡೆ, ಡಾ. ಬಾಲಕೃಷ್ಣ ಹೆಗಡೆ, ಡಾ. ಟಿ.ಜೆ. ಲಕ್ಷ್ಮೀನಾರಾಯಣ ಮೊದಲಾದವರು ಇದ್ದರು.
ಸಾಮೂಹಿಕ ಗೋ ಪೂಜೆ ಡಿ.1ರಂದು
ಶಿವಮೊಗ್ಗ: ರಾಮಚಂದ್ರಾಪುರ ಮಠದ ಶಿವಮೊಗ್ಗ - ಭದ್ರಾವತಿ ವಲಯ ಸಮಿತಿ ವತಿಯಿಂದ ಡಿ.1ರಂದು ನಗರದ ಹವ್ಯಕ ಭವನದ ಭಗವಾನ್ ಶ್ರೀಧರಸ್ವಾಮಿ ಸಭಾಂಗಣದಲ್ಲಿ ಸಾಮೂಹಿಕ ಗೋ ಪೂಜೆ, ಗಾಯತ್ರಿ ಹೋಮ, ರುದ್ರಪಾರಾಯಣ, ಸ್ತ್ರೋತ್ರ ಪಠಣ, ಉಪನ್ಯಾಸ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಮಠಕ್ಕೆ ಹೊರೆಕಾಣಿಕೆ ಸಲ್ಲಿಸಲೂ ಈ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಠದ ಶಿವಮೊಗ್ಗ- ಭದ್ರಾವತಿ ವಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳು
ಶಿಮೊಮಗ್ಗ: ನಗರ ಬಿಜೆಪಿ ಯುವಮೋರ್ಚಾಕ್ಕೆ ಪದಾಧಿಕಾರಿಗಳನ್ನು ನಗರಾಧ್ಯಕ್ಷರಾದ ಜೆ. ಹಿರಣ್ಣಯ್ಯ ನೇಮಕ ಮಾಡಿದ್ದು, ಯುವಮೋರ್ಚಾ ನಗರ ಕಾರ್ಯದರ್ಶಿಯಾಗಿ ನಾಗಭೂಷಣ, ನಗರ ಸಮಿತಿ ಸದಸ್ಯ ತಿಲಕ್ ಯಾಧವ್ ಅವರನ್ನು ನೇಮಕ ಮಾಡಲಾಗಿದೆ.
ವಸ್ತು ಪ್ರದರ್ಶನ
ಶಿವಮೊಗ್ಗ: ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ವಸ್ತು ಪ್ರದರ್ಶನ ವಿಜ್ಞಾನ ಸಂಘದಿಂದ ಆಯೋಜನೆಗೊಂಡಿತ್ತು. ಇದರಲ್ಲಿ 6ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಸುಮಾರು 250 ವಿಜ್ಞಾನದ ಬೇರೆ ಬೇರೆ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಪ್ರದರ್ಶನವನ್ನು ಅರಬಿಂದೋ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಉದ್ಘಾಟಿಸಿದರು. ಆಡಳಿತಾಧಿಕಾರಿ ಮಧು, ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ. ಹೆಗಡೆ, ವಾಣಿ ಕೃಷ್ಣಪ್ರಸಾದ್, ರೆಜಿ ಜೋಸೆಫ್ ಹಾಗೂ ಶಿಕ್ಷಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

