ವಸೂಲಾತಿ ಆಂದೋಲನ
ಶಿವಮೊಗ್ಗ: ಶಿವಮೊಗ್ಗ ನಗರಸಭಾ ವ್ಯಾಪ್ತಿಯ ಉದ್ದಿಮೆ ಮಾಲೀಕರು ಮಾರ್ಚ್ 31ರೊಳಗಾಗಿ ನಿಗದಿತ ಶುಲ್ಕ ಪಾವತಿಸಿ ಪರವಾನಿಗೆ ನವೀಕರಿಸಿಕೊಳ್ಳುವಂತೆ ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಉದ್ದಿಮೆ ಪರವಾನಿಗೆಯನ್ನು 2014ರ ಮಾರ್ಚ್ 31ರೊಳಗಾಗಿ ಪಾವತಿಸಬೇಕು. ನಗರಸಭೆಯ 19, 20 ಮತ್ತು 21ನೇ ವಾರ್ಡ್‌ಗಳಲ್ಲಿ ಡಿಸೆಂಬರ್ 2ರಿಂದ 6ರವರೆಗೆ ಉದ್ದಿಮೆ ಪರವಾನಿಗೆ ಹೊಸ ಅಥವಾ ನವೀಕರಣ ಮಾಡಲು ಉದ್ದಿಮೆ ಪರವಾನಿಗೆ ವಸೂಲಾತಿ ಆಂದೋಲನ ಏರ್ಪಡಿಸಲಾಗಿದೆ.
ನಗರಸಭೆ ಅಧಿಕಾರಿ- ಸಿಬ್ಬಂದಿ ನಿಗದಿಪಡಿಸಲಾದ ದಿನಾಂಕದಂದು ಸೂಚಿಸಿದ ವಾರ್ಡ್‌ಗಳಿಗೆ ಖುದ್ದಾಗಿ ಬರಲಿದ್ದಾರೆ. ಈ ಸಮಯದಲ್ಲಿ ಉದ್ದಿಮೆಗಳ ಮಾಲೀಕರು ಉದ್ದಿಮೆಯ ಮಳಿಗೆಯು ಬಾಡಿಗೆಯದ್ದಾಗಿದ್ದಲ್ಲಿ, ಮಾಲೀಕರಿಂದ ಪಡೆದಿರುವ ಕರಾರು ಪತ್ರದ ನಕಲು ಪ್ರತಿ, ಹಿಂದಿನ ಸಾಲಿನಲ್ಲಿ ಪಡೆದಿರುವ ಪರವಾನಿಗೆ ಪತ್ರದ ನಕಲು ಹಾಗೂ ವ್ಯಾಟ್ ಮ್ಯಾಜಿಸ್ಟ್ರೇಷನ್‌ನ ನಕಲು ಪ್ರತಿ ಹಾಗೂ ಸಂಬಂಧಿಸಿದ ಇತರೆ ದಾಖಲೆಗಳನ್ನು ನಗರಸಭಾ ಸಿಬ್ಬಂದಿಗೆ ನೀಡಬೇಕು. ತಪ್ಪಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದೆಂದು ಪೌರಾಯುಕ್ತರು ತಿಳಿಸಿದ್ದಾರೆ.
--
ಮಹಿಳೆಗೆ ಯಶಸ್ವಿ ಬೆಂಟಾಲ್ ಶಸ್ತ್ರಚಿಕಿತ್ಸೆ
ಶಿವಮೊಗ್ಗ: ಇಲ್ಲಿನ ನಾರಾಯಣ ಹೃದಯಾಲಯದಲ್ಲಿ ಹೃದಯ ಸಂಬಂಧಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಬೆಂಟಾಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಶಸ್ತ್ರ ಚಿಕಿತ್ಸೆ ನೇತೃತ್ವ ವಹಿಸಿದ್ದ ಡಾ. ಸುಧೀರ್ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆಯ ಮಹಾಪಧಮನಿಯ ಭಾಗದಲ್ಲಿ ದೊಡ್ಡ ರಂಧ್ರವಾಗಿತ್ತು. ಅದು ಆಕೆಯ ದೇಹದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಿದ್ದು, ಅತಿರೇಕವಾಗಿ ಬ್ಲಡ್ ವೆಸೆಲ್ಸ್‌ನಲ್ಲಿ ಸಮಸ್ಯೆಯಾಗಿ ಕಾಡಿತ್ತು. ಅದನ್ನು ವೈದ್ಯಕೀಯ ಭಾಷೆಯಲ್ಲಿ ಆರ್ಟಿಕ್ ಎಗ್ಯರ್ಗಿಟೇಶನ್ ಎಂದು ಕರೆಯಲಾಗುತ್ತದೆ ಎಂದರು.
ಈ ಸಮಸ್ಯೆಯಿಂದಾಗಿ ಮಹಾಪಧಮನಿಯ ಕವಾಟದಿಂದ ರಕ್ತ ಸೋರಿಕೆಯಾಗುತ್ತಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು ಎಂದ ಅವರು, ಬೆಂಟಲ್ ಶಸ್ತ್ರ ಚಿಕಿತ್ಸೆ ನಡೆಸಿ ಹೃದಯದ ಕವಾಟ ಮತ್ತು ಅಯೋರ್ಟ ಎಂಬ ಅಪಧಮನಿ ಎರಡನ್ನೂ ಸಂಯುಕ್ತವಾಗಿ ಬದಲಿಸಲಾಯಿತು. ಮಹಾನಗರಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸುವುದು ಸುಲಭ. ಆದರೆ, ಮಲೆನಾಡಿನಂತಹ ಪ್ರದೇಶಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸಿರುವುದು ಇದೇ ಮೊದಲು. ಈ ಪ್ರಕರಣದಲ್ಲಿ ಸತತ 7 ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡ ಡಾ. ಜೆ.ರಾಮಸುಂದರ್, ಡಾ. ಶ್ರೀನಿವಾಸ ಖರೆ, ಡಾ. ಜನಾರ್ದನ, ಡಾ. ಸುಶೀತ್ ಶೆಟ್ಟಿ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

