ಅನಧಿಕೃತ ಗೋಡೆ: ಖಾದ್ರಿ ಸಂಘಟನೆ ಪ್ರತಿಭಟನೆ
ಶಿವಮೊಗ್ಗ: ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು ಯಾವುದೇ ಮಾಹಿತಿ ಇಲ್ಲದೇ ದರ್ಗಾ ಆವರಣದಲ್ಲಿ ಅನಧಿಕೃತ ಗೋಡೆ ನಿರ್ಮಾಣ ಮಾಡಲು ಮುಂದಾಗಿದ್ದು, ಕೂಡಲೇ ಜಿಲ್ಲಾಡಳಿತ ತಡೆಯುವಂತೆ ಒತ್ತಾಯಿಸಿ ಋತುಬ್ ಎ ಶಿವಮೊಗ್ಗ ಹಜತ್ ಸೈಯ್ಯದ್ ಷಾ ಆಲೀಮ್ ರೀವಾನ್ ಷಾ ಖಾದ್ರಿ ಸಂಘಟನೆ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದರ್ಗಾ ಆವರಣದಲ್ಲಿ ಅಕ್ರಮವಾಗಿ ಗೋಡೆ ನಿರ್ಮಾಣ ಮಾಡುವ ಮೊದಲು ವಕ್ಫ್ ಬೋರ್ಡ್ ಸಾರ್ವಜನಿಕವಾಗಿ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ಈ ಹಿಂದೆಯೇ ಗೋಡೆ ನಿರ್ಮಾಣ ಮಾಡಲು ಮುಂದಾಗಿದ್ದರು. ರೀವಾನ್ ಷಾ ಖಾದ್ರಿ ಕಮಿಟಿ ಪೊಲೀಸ್ ಠಾಣೆಗೆ ದೂರು ನೀಡಿ, ಗೋಡೆ ನಿರ್ಮಾಣ ಕಾಮಗಾರಿಯನ್ನು ತಡೆದಿತ್ತು.
ನಂತರ ಅಂದಿನ ಜಿಲ್ಲಾಧಿಕಾರಿ ಕೂಡ ಗೋಡೆ ನಿರ್ಮಾಣ ಮಾಡದಂತೆ ಸೂಚಿಸಿ, ಬರವಣಿಗೆಯ ಮೂಲಕ ತಿಳಿಸಿದ್ದರು. ಇದನ್ನು ಧಿಕ್ಕರಿಸಿ ಅಧ್ಯಕ್ಷರು ಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಸಂಬಂಧವಾಗಿ ರೀವಾನ್ ಷಾ ಖಾದ್ರಿ ಕಮಿಟಿ ಸದಸ್ಯರು, ಸಾರ್ವಜನಿಕರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಗೋಡೆ ನಿರ್ಮಾಣ ಮಾಡದಂತೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಯವರು ಪತ್ರ ಕೂಡ ನೀಡಿದ್ದರೂ, ಆದರೆ ಇದೀಗ ಪುನಃ ಅಕ್ರಮವಾಗಿ ಗೋಡೆ ನಿರ್ಮಾಣ ಮಾಡಲು ಪ್ರಾರಂಭಿಸಿದ್ದಾರೆ.
ಇದರಿಂದ ದರ್ಗಾದಲ್ಲಿ ಹಬ್ಬಗಳನ್ನು ಆಚರಿಸುವ ವೇಳೆ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ಗೋಡೆ ನಿರ್ಮಾಣ ಕಾಮಗಾರಿಯನ್ನು ತಡೆಯಬೇಕು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಮಿಟಿ ಅಧ್ಯಕ್ಷ ಟಿ. ಮೊಹಮದ್ ಗೌಸ್, ಕಾರ್ಯದರ್ಶಿ ನಫೀಜ್ ಅಹಮದ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

