ಹೈನುಗಾರಿಕೆ, ಕುರಿ ಸಾಕಾಣಿಕೆ ತರಬೇತಿ
ಶಿವಮೊಗ್ಗ: ಹೊಳಲೂರಿನ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಾಭದಾಯಕ ಹೈನುಗಾರಿಕೆ ಮತ್ತು ನವೀನ ಪದ್ಧತಿಯ ಕುರಿ ಸಾಕಾಣಿಕೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ನಿರುದ್ಯೋಗಿಗಳು ತರಬೇತಿಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬಹುದಾಗಿದ್ದು, ಹೈನುಗಾರಿಕೆ ಮತ್ತು ಕುರಿ ಸಾಗಾಣಿಕೆ ತರಬೇತಿಗಳನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗುತ್ತದೆ. ಅಭ್ಯರ್ಥಿಯು 18ರಿಂದ 45 ವರ್ಷ ವಯೋವುತಿ ಒಳಗಿನವರಾಗಿದ್ದು, ಓದು ಬರಹ ಬಲ್ಲವರಾಗಿದ್ದು ಸ್ವ ಉದ್ಯೋಗ ಪ್ರಾಂಭಿಸುವ ಆಸಕ್ತಿ ಇರಬೇಕು. 6 ದಿನಗಳ ತರಬೇತಿ ಅವಧಿಯಲ್ಲಿ ಉಚಿತ ಊಟ- ವಸತಿ ವ್ಯವಸ್ಥೆ ಇರುತ್ತದೆ. ತರಬೇತಿಯು ಸೆ.23ರಿಂದ ಆರಂಭವಾಗಲಿದೆ. ಆಸಕ್ತರು ಸ್ವ ವಿವರಗಳೊಂದಿಗೆ ಹೊಳಲೂರಿನಲ್ಲಿರುವ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು. ಮಾಹಿತಿಗೆ ಮೊ-9538271653ನ್ನು ಸಂಪರ್ಕಿಸಿ.
ಶ್ರೀ ಚಂಡಿಕಾ ಹೋಮ
ಶಿವಮೊಗ್ಗ: ನಗರದ ಕೋಟೆ ಅಂಚೆ ಕಚೇರಿ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆ.4ರಂದು ಶ್ರೀ ಚಂಡಿಕಾ ಹೋಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30ರಿಂದ 1.30ರವರೆಗೆ ಹೋಮ ಕಾರ್ಯ ನಡೆಯಲಿದ್ದು, ಹೋಮಕ್ಕೆ ಅಕ್ಕಿ, ಬೆಲ್ಲ, ತುಪ್ಪ, ಹಣ್ಣು ಕಾಯಿ ಕೊಡುವವರು ಬೆಳಿಗ್ಗೆ 9 ಗಂಟೆಯೊಳಗೆ ತಲುಪಿಸಬೇಕು.
ಉಚಿತ ಚಿತ್ರಕಲಾ ತರಬೇತಿ
ಶಿವಮೊಗ್ಗ: ವಿಶ್ವ ಸ್ಫೂರ್ತಿ ಕಲ್ಯಾಣ ಸಂಸ್ಥೆಯು ಗೌರಿ ಗಣಪತಿ ಹಬ್ಬದ ಪ್ರಯುಕ್ತ ನಗರದ ಕಲಾಸಕ್ತರಿಗೆ ಸೆ.9ರಿಂದ 21ರ ವರೆಗೆ ಚಿತ್ರಕಲಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಪ್ರತಿದಿನ ಸಂಜೆ 6ರಿಂದ 7.30ರ ವರೆಗೆ 10 ದಿನಗಳ ವರೆಗೆ ತರಬೇತಿ ನಡೆಯಲಿದ್ದು, ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಬೇಕು. ಮಾಹಿತಿಗೆ ಮಲ್ಲಿಕಾರ್ಜುನ (ಮೊ- 9964797431) ಸಂಪರ್ಕಿಸಿ.
ಇಂದು ಪ್ರತಿಭಟನೆ
ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದ ಅವ್ಯವಸ್ಥೆ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯು ಸೆ.2ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಅನೇಕ ಸರ್ಕಾರಿ ಕಾರ್ಯಕ್ರಮಗಳು, ಇತರೆ ಸಂಘ ಸಂಸ್ಥೆಯ ಕಾರ್ಯಕ್ರಮಗಳು ಕಡಿಮೆ ವೆಚ್ಚದಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದರೂ ಕೆಲವು ಕುತಂತ್ರಿಗಳ ನಿರ್ಲಕ್ಷ್ಯದಿಂದ ಭವನ ಹಾಳುಗೆಡವಲಾಗಿದೆ. ಸರ್ಕಾರಕ್ಕೂ ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡುವ ಕ್ರಮ ಖಂಡಿಸಿ ಉಪವಾಸ ನಡೆಸುತ್ತಿರುವುದಾಗಿ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

