ಅನ್ಯೋನ್ಯತೆಯಿಂದ ಆದರ್ಶ ಜೀವನ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.3 ತಾಲೂಕು ವಿಡಿಯೋ ಮತ್ತು ಫೋಟೋಗ್ರಾಫರ್ ಅಸೋಸಿಯೇಷನ್ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಅದೃಷ್ಟ ದಂಪತಿಗಳು ಹಾಗೂ ಛಾಯಾಂಕಣ-02 ಬಿಡುಗಡೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು.
ಅದೃಷ್ಟ ದಂಪತಿಗಳಾಗಿ 8 ಜೋಡಿ ಭಾಗವಹಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅನ್ಯೋನ್ಯತೆ ಅಗತ್ಯ: ನಂತರ ಮಾತನಾಡಿದ ಅವರು, ದಂಪತಿ ಅನ್ಯೋನ್ಯವಾಗಿ ಬಾಳಿದರೆ ಮಾತ್ರ ಆದರ್ಶಮಯ ಜೀವನ ನಡೆಸಲು ಸಾಧ್ಯ. ಭಾರತೀಯ ಸಂಸ್ಕೃತಿಯಲ್ಲಿ ದಂಪತಿ ಸಂಬಂಧಕ್ಕೆ ಪವಿತ್ರವಾದ ಸ್ಥಾನ ಇದೆ ಎಂದರು.
ಇಂದು ಹಲವು ದಂಪತಿಯ ಸಂಸಾರ ವೈಮನಸ್ಸು, ದ್ವೇಷದಿಂದಲೇ ನಡೆಯುತ್ತಿದ್ದು, ವಿವಾಹ ವಿಚ್ಛೇದನಾ ಪ್ರಕರಣ ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವುದು ಕ್ಲಿಷ್ಟಕರವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ವಿವಾಹ ವಿಚ್ಛೇದನೆ, ಆತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿದೆ. ಮಾನವೀಯ ಗುಣಗಳಿಗೆ ಅಲ್ಲಿ ಬೆಲೆಯೇ ಇಲ್ಲ. ಆದರೆ, ಭಾರತದಲ್ಲಿ ಹೆಣ್ಣನ್ನು ತಾಯಿಯಾಗಿ, ದೇವತೆಯಾಗಿ ಕಾಣುವುದು ನಮ್ಮ ಸಂಸ್ಕೃತಿ ಎಂದರು.
ಸರಿದಾರಿಗೆ: ಗಂಡನ ಹಲವು ತಪ್ಪುಗಳನ್ನು ತಿದ್ದುವ, ತೀಡುವ ಹಾಗೂ ತಪ್ಪುದಾರಿಯಿಂದ ಸರಿದಾರಿಗೆ ತರುವ ಕಾರ್ಯವನ್ನು ಮಡದಿ ಮಾಡುತ್ತಾಳೆ. ಹೆಂಡತಿ ತನ್ನ ಗಂಡ ನಿರ್ವಹಿಸುವ ಎಲ್ಲಾ ಕೆಲಸ, ಕಾರ್ಯಗಳಿಗೆ ಸ್ಫೂರ್ತಿಯ ಸೆಲೆಯಾಗಿ ಜೊತೆಯಲ್ಲಿರುತ್ತಾಳೆ. ಹೆಣ್ಣಿನಲ್ಲಿರುವ ಪ್ರಾವಿತ್ರ್ಯತೆ ಯಾವ ಜೀವಕ್ಕೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚು ನಡೆಯುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸದ್ಯ ನಡೆದಿರುವ ಪ್ರಕರಣಗಳ ಪ್ರಮುಖ ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗದಿರುವುದು ವಿಪರ್ಯಾಸ. ಇದ್ದರಿಂದ ಮತ್ತಷ್ಟು ಪ್ರಕರಣ ಹೆಚ್ಚಾಗಲಿವೆ. ಮುಂದಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ಜಾರಿಗೆ ತರಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದರು.
ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್, ಮಂಜುಳಾ ಮಂಜುನಾಥ್, ಪದ್ಮಶ್ರೀ ಕಲರ್ ಲ್ಯಾಬ್ ಮಾಲೀಕ ಅಭಿನಂದನ್, ಶಿವಮೊಗ್ಗ ತಾಲೂಕು ವೀಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಲಿಂಗರಾಜ್, ನಿರ್ದೇಶಕ ಸೋಮನಾಥ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

