ಶಿವಮೊಗ್ಗ

ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಅಗತ್ಯ

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಸೆ.3
ಈ ಬಾರಿ ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಡಿಟಿಎಸ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಶಿಕಾರಿಪುರ ಡಿಎಸ್ಪಿ ಮಂಜುನಾಥ ತಿಳಿಸಿದರು.
ಶಿರಾಳಕೊಪ್ಪ ಪಪಂ ಕಚೇರಿಯಲ್ಲಿ ನಡೆದ ಗಣಪತಿ ಹಬ್ಬದ ಪ್ರಯುಕ್ತನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಆಡಳಿತ ಈ ಬಾರಿ ಡಿಟಿಎಸ್ ನಿಷೇಧಿಸಿದೆ. ಆದ್ದರಿಂದ ಆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಕಾನೂನು ಕ್ರಮ ಕೈಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಅನುಮತಿ ಕಡ್ಡಾಯ: ಪಟ್ಟಣದಲ್ಲಿ ಎಲ್ಲಿಯೇ ಗಣೇಶನನ್ನು ಪ್ರತಿಷ್ಠಾಪಿಸುವುದಾದರೂ, ಪೊಲೀಸ್ ಇಲಾಖೆ ಹಾಗೂ  ಪಪಂ ಅನುಮತಿ ಕಡ್ಡಾಯ ಎಂದ ಅವರು ಸಮಿತಿಯವರು ಯಾವುದೇ ಗಲಾಟೆ ಆಗದಂತೆ ಎಚ್ಚರವಹಿಸಬೇಕು. ಹಾಗೆಯೇ ಮೆರವಣಿಗೆ ಅನುಮತಿ ಪಡೆದ ಮಾರ್ಗದಲ್ಲಿ ಮಾತ್ರ ಹೋಗಬೇಕು. ಪ್ರಚೋದನೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದರು. ಸಿಪಿಐ ಮಾದಪ್ಪ ಮಾತನಾಡಿ, ಯುವಕರು ಇಂದು ಹಿರಿಯರ ಮಾತನ್ನು ಕೇಳದೇ ಅಸಭ್ಯವಾಗಿ ವರ್ತಿಸುವದನ್ನು ತಡೆಯಬೇಕು. ಗಣೇಶನ ಆಚರಣೆ ಇನ್ನೊಬ್ಬರನ್ನು ಅನುಕರಣೆ ಮಾಡುವಂತೆ ಆಚರಿಸಬೇಕು ಎಂದರು.
ಮಲಿನವಾಗದಿರಲಿ: ಪಪಂ ಮುಖ್ಯಾಧಿಕಾರಿ ರಾಜ್ ಕುಮಾರ್ ಮಾತನಾಡಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ಸಲಹೆ ನೀಡಿದೆ. ಆ ಪ್ರಕಾರ ತ್ಯಾಜ್ಯವನ್ನು ಎಲ್ಲಿ ಬೇಕಾದರೂ ಹಾಕದೇ ನೀರನ್ನು ಮಲಿನವಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದೆ ಎಂದು ಹೇಳಿದ ಅವರು, ಹಾಗೆಯೇ ಶಬ್ದ ಮಾಲಿನ್ಯ ಇತರ ಮಾಲಿನ್ಯ ವಾಗದಂತೆ ಎಚ್ಚರವಹಿಸ ಬೇಕು ಎಂದರು. ಜಿಪಂ ಸದಸ್ಯ ರುದ್ರಪ್ಪ ದಾನೇರ್, ಪಪಂ ಮಾಜಿ ಉಪಾಧ್ಯಕ್ಷ ಮಕಬುಲ್ ಸಾಬ್ ಮಾತನಾಡಿದರು. ಜಿಪಂ ಸದಸ್ಯ ಈಶ್ವರಪ್ಪ, ಪಪಂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.