ಶಿವಮೊಗ್ಗ

ಸಂಗೀತ ಶ್ರವಣದಿಂದ ಮನಸ್ಸಿನ ಒತ್ತಡ ದೂರ

Published On :

ಶಿವಮೊಗ್ಗ: ನಾವು ಪ್ರತಿನಿತ್ಯ ಒಂದಲ್ಲಾ ಒಂದು ಗೊಂದಲದಲ್ಲಿ ಇರುತ್ತೇವೆ. ಇಂತಹ ಸಮಯದಲ್ಲಿ ಒಂದಿಷ್ಟು ಒಳ್ಳೆಯ ಮನರಂಜನೆ ಹಾಗೂ ಸಂಗೀತ ಮನಸನ್ನು ಹಗುರವಾಗಿಸುತ್ತದೆ. ಅಲ್ಲದೇ ಒತ್ತಡದಿಂದ ದೂರವಿರಲು ಸಂಗೀತ ಸಹಕಾರಿಯಾಗಿದೆ ಎಂದು ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷ ಸುಜಯ ಪುರುಷೋತ್ತಮ್ ಹೇಳಿದರು.
 ರೋಟರಿ ಸಭಾಂಗಣದಲ್ಲಿ ಇನ್ನರ್‌ವೀಲ್ ಸಭೆ, ತತ್ವಪದಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಮನುಷ್ಯನ ಮನಸ್ಸಿಗೆ ಮತ್ತುತರುವ ದಿವ್ಯಔಷಧ ಈ ನಿಟ್ಟಿನಲ್ಲಿ ನಾವು ಕಲಾವಿದರನ್ನು ಗುರುತಿಸಿ, ಗೌರವಿಸಿದರೆ ಆ ಕಲೆ ಉಳಿಯುತ್ತದೆ ಎಂದರು.
 ಜನಪದ ಕಲಾವಿದ ಸಿಹಿಮೊಗ್ಗೆ ಶ್ರೀನಿವಾಸ್, ರಂಗೇನಹಳ್ಳಿ ಮಂಜುನಾಥ್ ಹಾಗೂ ಚುಟುಕು ಸಾಹಿತಿ ಪ್ರಸನ್ನ ಮತ್ತು ಜನಪದ ಕಲಾವಿದ ಜಿ. ವಿಜಯಕುಮಾರ್ ಇವರ ತಂಡದಿಂದ ರಂಗಗೀತೆಗಳು, ಜನಪದ ಗೀತೆಗಳು, ಹಾಸ್ಯ ಗೀತೆಗಳು ಮತ್ತು ಸಮಾಜದ ತತ್ವಪದಗಳ ಕಾರ್ಯಕ್ರಮ ಸಭಿಕರನ್ನು ರಂಜಿಸಿತು.
ಇನ್ನರ್‌ವೀಲ್ ಕಾರ್ಯದರ್ಶಿ ಶ್ವೇತಾ ಆಶಿತ್, ರೋಟರಿ ಪೂರ್ವ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ್, ಕಾರ್ಯದರ್ಶಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.