ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ
ಜೋಗ್ಫಾಲ್ಸ್: ಪರಿಸರ ಸಂರಕ್ಷಣೆ ಒಬ್ಬರ ಹೊಣೆಯಲ್ಲ. ಪ್ರತಿಯೊಬ್ಬರ ಹೊಣೆ. ನಾವು ಬದುಕಿರುವವರೆಗೂ ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ್ ತಿಳಿಸಿದರು.
ಇಲ್ಲಿನ ಸಮೀಪದ ಕಾರ್ಗಲ್ನ ಶ್ರೀ ಚೌಡೇಶ್ವರಿ ಕಲ್ಯಾಣ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಡೆದ ಪರಿಸರ ಜಾಥಾ, ಮಾಹಿತಿ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಅವರು, ನಾವು ನೆಮ್ಮದಿ, ಆರೋಗ್ಯದಿಂದ ಬದುಕಬೇಕೆಂದಲ್ಲಿ ಪರಿಸರ ಕಾರ್ಯ ತಂತ್ರಗಳ ಕುರಿತು ಪ್ರತಿದಿನ ಮಂಥಿಸುವುದರ ತುರ್ತುಅಗತ್ಯವಿದೆ.
ಆದ್ದರಿಂದ ಪರಿಸರ ಜಾಗೃತಿ ಕಾರ್ಯಕ್ರಮ ಒಂದು ದಿನದ ಕಾರ್ಯಕ್ರಮವಲ್ಲದೆ ನಾವು ಬದುಕಿರುವವರೆಗೂ ಮಾಡಬೇಕು ಎಂದರು.
ಆರೋಗ್ಯ ಸುಧಾರಣೆ: ಸಮಾಜ ಸೇವಕ, ವರ್ತಕ ಶ್ರೀನಿವಾಸ್ ಎಂ. ಪೈ ಮಾತನಾಡಿ, ಇಂದು ಹೆಚ್ಚುತ್ತಿರುವ ನಗರೀಕರಣದಿಂದ ಅರಣ್ಯವನ್ನು ಅವ್ಯಾಹತವಾಗಿ ಕಡಿಯುತ್ತಿದ್ದಾರೆ. ಇದರ ಜೊತೆಗೆ ಕಳ್ಳ ಮರ ಸಾಗಣೆ ಮತ್ತು ಅಕಸ್ಮಿಕ ಬೆಂಕಿ ತಗಲುವುದರಿಂದ ಸಹ ಪರಿಸರ ನಾಶವಾಗುತ್ತಿದೆ. ಮನುಷ್ಯ ಆರೋಗ್ಯದಿಂದಿರಬೇಕಾದರೆ ಪರಿಸರವನ್ನು ಉಳಿಸಬೇಕಾದ ಅಗತ್ಯವಿದೆ. ಪರಿಸರ ಸಂರಕ್ಷಣೆಯಿಂದ ಆರೋಗ್ಯ ಸುಧಾರಣೆ ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯೆಯರು ಕಾರ್ಗಲ್ನ ತಲಕಳಲೆ ವೃತ್ತದಿಂದ ಸುಮಾರು 3 ಕಿ.ಮೀ ವರೆಗೆ ಪರಿಸರ ಜಾಗೃತಿ ಜಾಥಾ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೋಗ್- ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುನೀತಾ ನಾಯಕ್, ಅರಣ್ಯ ರಕ್ಷಕ ಕಿರಣ್, ಶಾರದಾ ಮಹಿಳಾ ಸಮಾಜದ ಅಧ್ಯಕ್ಷೆ ಲಕ್ಷ್ಮೀರಾಜು, ವಲಯ ಒಕ್ಕೂಟದ ಅಧ್ಯಕ್ಷ ಗುರುರಾಜ್ ಜೈನ್ ಇದ್ದರು.
ಶಾರದಾ ಮಹಿಳಾ ಸಮಾಜದ ಸದಸ್ಯೆಯರು ಪ್ರಾರ್ಥಿಸಿದರು. ಸಚಿನ್ ಸ್ವಾಗತಿಸಿದರು. ತಾಳಗುಪ್ಪ ವಲಯದ ಮೇಲ್ವಿಚಾರಕ ಪ್ರಶಾಂತ್ ನಾಯ್ಕ ನಿರೂಪಿಸಿ, ವಸಂತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

