ಸಂಸ್ಕೃತ ಸಾಹಿತ್ಯದಲ್ಲಿ ವಿಜ್ಞಾನ ಕುರಿತ ಉಪನ್ಯಾಸ
ಕ.ಪ್ರ. ವಾರ್ತೆ ಸಾಗರ ಸೆ.8
ವಿಶ್ವದ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಷ್ಟು ಜ್ಞಾನಕ್ಕೆ ಸ್ಥಾನಮಾನ ನೀಡುವ ದೇಶ ಮತ್ತೊಂದಿಲ್ಲ ಎಂದು ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ನಿರ್ದೇಶಕ (ಯೋಜನೆಗಳು) ಡಾ. ಕೆ.ಎಸ್. ಕಣ್ಣನ್ ಹೇಳಿದರು.
ಇಲ್ಲಿನ ಸಂಸ್ಕೃತಸಾಗರ ಪ್ರತಿಷ್ಠಾನ, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಹಾಗೂ ಶೃಂಗೇರಿ ಶಂಕರಮಠ ಸಾಗರ ಶಾಖೆ ಆಶ್ರಯದಲ್ಲಿ ಸಂಸ್ಕೃತ ದಿನ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಸ್ಕೃತ ಸಾಹಿತ್ಯದಲ್ಲಿ ವಿಜ್ಞಾನ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನಿಂದಲೂ ಅರಿವು: ಭಾರತದಲ್ಲಿ ಮುಕ್ತಿ, ಶಕ್ತಿ, ಯಶಸ್ಸು ಹಾಗೂ ಸಾಫಲ್ಯ ಜೀವನದ ಗುಟ್ಟು ಅಡಗಿರುವುದು ಜ್ಞಾನದಲ್ಲಿ ಎನ್ನುವ ನಂಬಿಕೆ ಬಲವಾಗಿ ಬೇರೂರಿದೆ. ಜ್ಞಾನ ಸಿದ್ಧಾಂತವಾದರೆ ವಿಜ್ಞಾನ ಪ್ರಯೋಗಶೀಲತೆ ಮತ್ತು ಅನ್ವಯಿಕತೆ ಇರುವಂತದ್ದಾಗಿದೆ.
ಇತಿಹಾಸ ಕಾಲದಿಂದಲೂ ಅರಿವು ಹೊಂದಬಹುದಾದ ಎಲ್ಲ ಶಾಖೆಗಳನ್ನು ಪೋಷಿಸಿಕೊಂಡು ಬಂದ ವಿಶಿಷ್ಟತೆ ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.
ಸಂಸ್ಕೃತಸಾಗರ ಪ್ರತಿಷ್ಠಾನಮ್ ಅಧ್ಯಕ್ಷ ಕೆ.ಎನ್. ಶರ್ಮ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಈಳಿ ನಾರಾಯಣಪ್ಪ, ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ, ಶಿಕ್ಷಕಿ ಮಹಾಲಕ್ಷ್ಮಿ ಮೋಹನ್ ಹಾಜರಿದ್ದರು.
ಇದೇ ಸಂದರ್ಭದಲ್ಲಿ 2012-13ನೇ ಸಾಲಿನ ಸಂಸ್ಕೃತ ಪ್ರಥಮ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಪುರಸ್ಕರಿಸಲಾಯಿತು. ನಂತರ ನಾಟ್ಯತರಂಗ ಇವರಿಂದ ಗೀತ ಗೌರಿವರ ನೃತ್ಯರೂಪಕ ಹಾಗೂ ಸಂಸ್ಕೃತ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

