13ರಿಂದ 15ರ ವರೆಗೆ ಆಡಳಿತಾತ್ಮಕ ತರಬೇತಿ
ಶಿವಮೊಗ್ಗ: ಸಾಗರ ತಾಲೂಕು ಹೊನ್ನೆಮರಡು ಭಾರತೀಯ ಸಾಹಸ ಸಮನ್ವಯ ಕೇಂದ್ರವು ಹೊಚ್ಚ ಹೊಸ ಪ್ರಯೋಗವಾಗಿ ಹೊನ್ನೆರಮರಡುವಿನಿಂದ ನಿಟ್ಟೂರಿನವರೆವಿಗಿನ ರ್ಯಾಫ್ಟ್ಗಳಲ್ಲಿ ಸಾಹಸಯಾನ ಮಾಡುವ ಮೂಲಕ ಆಡಳಿತಾತ್ಮಕ ತರಬೇತಿಯನ್ನು ಆಯೋಜಿಸಿದೆ.
ಇದೇ ಸೆ.13ರಿಂದ 15ರ ವರೆಗೆ ನಡೆಯಲಿರುವ ಈ ಆಡಳಿತಾತ್ಮಕ ತರಬೇತಿ ಶಿಬಿರದಲ್ಲಿ ವಿವಿಧ ಕಂಪನಿಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಜಲಕ್ರೀಡಾ ಚಟುವಟಿಕೆಗಳನ್ನು ಉಪಯೋಗಿಸಿಕೊಂಡು ನಾಟಕೀಯ ತಿರುವುಗಳನ್ನು ನೀಡುವ ನಿಜವಾದ ಸನ್ನಿವೇಶಗಳ ಮೂಲಕ ತರಬೇತಿಯನ್ನು ಯೋಜಿಸಲಾಗಿದೆ. ಈ ತರಬೇತಿಯಲ್ಲಿ ಪರಿಣಾಮ, ಫಲಿತ ತಕ್ಷಣವೇ ಗೊತ್ತಾಗಲಿದ್ದು, ಅದರ ಒಳನೋಟ ಸುಲಭದಲ್ಲಿ ದೊರಕುವುದರಿಂದ ಮ್ಯಾನೇಜ್ಮೆಂಟ್ ಸಿದ್ಧಾಂತಗಳನ್ನು ಸುಲಲಿತವಾಗಿ ಅರ್ಥ ಮಾಡಿಸಬಲ್ಲುದು ಎಂದು ಸಂಸ್ಥೆ ಅಧ್ಯಕ್ಷ ಎಸ್.ಎಲ್.ಎನ್. ಸ್ವಾಮಿ ಹೇಳಿದ್ದಾರೆ.
ಈಗ ಭಾಗವಹಿಸಲಿರುವ ತಂಡ ವಿವಿಧ ಹೊರಾಂಗಣ ಅನುಭವಗಳಾದ ರ್ಯಾಫ್ಟಿಂಗ್, ಕ್ಯಾನೋಯಿಂಗ್ ಕ್ಯಾಂಪಿಂಗ್ ಕ್ಯಾಂಪ್ಫೈರ್ನಂತಹ ಹೊರಾಂಗಣ ಕಲಿಕೆಯ ಪದ್ಧತಿ ಮತ್ತು ವಿವಿಧ ಮ್ಯಾನೇಜ್ಮೆಂಟ್ ಸಿದ್ಧಾಂತಗಳಾದ, ತಂಡವನ್ನು ರೂಪಿಸುವುದು, ಸಮಸ್ಯೆಗಳನ್ನು ನಿವಾರಿಸುವುದು, ವ್ಯಕ್ತಿಗತವಾದ ಸಂವಹನ, ಪ್ರಚೋದನೆ ಕಲಿಕೆಯ ಅಸ್ತ್ರಗಳಾಗಿ ಉಪಯೋಗವಾಗುತ್ತವೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9448485508 ಅಥವಾ 9449004748 ಸಂಪರ್ಕಿಸಬಹುದು.
ನಂದಿನಿ ಹಾಲು, ಮೊಸರು ದರ ಪರಿಷ್ಕರಣೆ
ಶಿವಮೊಗ್ಗ: ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ವಿವಿಧ ಶ್ರೇಣಿಯ ನಂದಿನಿ ಹಾಲು ಮತ್ತು ಮೊಸರು ಮಾರಾಟ ದರಗಳನ್ನು ಸೆ.11 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿದೆ. ಟೋನ್ಡ್ ಹಾಲು (1 ಲೀ) 29 ರುಪಾಯಿ, ಟೋನ್ಡ್ (520 ಮಿ.ಲೀ) 15 ರುಪಾಯಿ, ಶುಭಂ ಸ್ಪ್ಯಾಂಡರ್ಡೈಸ್ಡ್ ಹಾಲು (1 ಲೀ) 35 ರುಪಾಯಿ,
(515 ಮಿ.ಲೀ)18 ರುಪಾಯಿ, ಹೊಮೊಜಿನೈಸ್ಡ್ ಶುಭಂ ಹಾಲು (1 ಲೀ)36 ರುಪಾಯಿ, 500 ಮಿ.ಲೀ 18 ರುಪಾಯಿ,
ನಂದಿನಿ ಸಮಂೃದ್ಧಿ(ಎಫ್ಸಿಎಂ) ಹಾಲು (250 ಮಿ.ಲೀ) 19 ರುಪಾಯಿ,
ಹೊಮೊಜಿನೈಸ್ಡ್ಹ್ಸುವಿನ ಹಾಲು (25 ಮಿ.ಲೀ) 9 ರುಪಾಯಿ, ಮೊಸರು (500ಗ್ರಾಂ) ಸ್ಯಾಚೇಟ್ಗೆ 18 ರುಪಾಯಿ, ಮೊಸರು (200 ಗ್ರಾಂ) ಸ್ಯಾಚೇಟ್ 8 ರುಪಾಯಿ ನಿಗದಿ ಮಾಡಲಾಗಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಶಿಮುಲ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

