ಶಿವಮೊಗ್ಗ

ಆನವಟ್ಟಿ ಬಸ್ಸು ನಿಲ್ದಾಣಕ್ಕೆ ದೀಪ ಅಳವಡಿಸಿ

Published On :

ಸೊರಬ: ಆನವಟ್ಟಿ ಗ್ರಾಪಂಗೆ ಲಕ್ಷಾಂತರ ರು. ಆದಾಯವಿದ್ದರೂ ಅಸಮರ್ಪಕ ಆಡಳಿತದಿಂದಾಗಿ ಗ್ರಾಮದ ಪ್ರಮುಖ ಸ್ಥಳವಾದ ಬಸ್ಸು ನಿಲ್ದಾಣ ವರ್ಷದ 300 ದಿನ ಕತ್ತಲೆಯಲ್ಲಿ ಮುಳುಗುತ್ತದೆ ಎಂದು ಇಲ್ಲಿನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಉಮೇಶ್ ಉಡುಗಣಿ ಟೀಕಿಸಿದ್ದಾರೆ.
 ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆ ಇರುವ ಇಲ್ಲಿನ ಬಸ್ಸು ನಿಲ್ದಾಣ ಕೊಳಚೆಗಳ ಆಗರವಾಗಿದೆ, ಸರಿಯಾದ ಕಟ್ಟಡವಿಲ್ಲ, ಶೌಚಾಲಯವಿಲ್ಲ, ಇಡೀ ಆವರಣ ಗುಂಡಿ, ತಗ್ಗುಗಳಿಂದ ಕೂಡಿದೆ, ಸಾಲದೆಂಬಂತೆ ಹಂದಿಗಳ ಕಾಟ, ಬಿಡಾಡಿ ಜಾನುವಾರುಗಳ ಕಾಟವೂ ಸೇರಿ ಯಾವುದರ ನಿಲ್ದಾಣ ಎಂದು ಅನುಮಾನಿಸುವಂತಿದೆ.
ದೀಪಗಳಿಲ್ಲ: ಇವೆಲ್ಲವನ್ನೂ ಗಮನಿಸಿ, ಕೊನೆಪಕ್ಷ ಆವರಣದಲ್ಲಿ ಒಂದೆರಡು ಕಡೆ ಬೆಳಕಿನ ವ್ಯವಸ್ಥೆ ಇದ್ದರೆ, ದಾರಿಹೋಕ, ಪ್ರಯಾಣಿಕ ಅವಘಡದಿಂದ ಪಾರಾಗುವ ಸಾಧ್ಯತೆ ಇರುತ್ತಿತ್ತು. ಆದರೆ ಆಡಳಿತ ನಿಗಾ ವಹಿಸದ ಕಾರಣ ಈಗಾಗಲೆ ಸಾಕಷ್ಟು ಅವಘಡಗಳು ಸಂಭವಿಸಿ, ಸಾವು ನೋವು ಕೂಡ ಕಂಡದ್ದಾಗಿದೆ. ಈಚೆಗೆ ಈ ಜಾಗೆಯಲ್ಲಿ ಪುಂಡಪೋಕರಿಗಳ ಹಾವಳಿಯೂ ಅಧಿಕವಾಗಿದ್ದು, ಮಹಿಳೆಯರು ಓಡಾಡಲು, ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯಲು ಹೆದರುವಂತಾಗಿದೆ.
ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಗ್ರಾಪಂ ಆಡಳಿತದ ಗಮನಕ್ಕೆ ತಂದಿದ್ದಾಗಿದೆ. ಆದಾಗ್ಯೂ ಗ್ರಾಪಂ ಆಡಳಿತ ತಾತ್ಸಾರ ಮಾಡುತ್ತಿದ್ದು, ಕೂಡಲೆ ಬೀದಿ ದೀಪ ಅಳವಡಿಸಬೇಕು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು, ಈ ಆವರಣದಲ್ಲಿ ರಾತ್ರಿ ವೇಳೆ ಆರಕ್ಷಕರನ್ನು ಖಾಯಂ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.